“ಮನೆಯ ಚಾವಡಿಯಲ್ಲಿ ಯಕ್ಷಗಾನ ವೈಭವ”

ಮನೆಯ ಚಾವಡಿಯಲ್ಲಿ ಯಕ್ಷಗಾನ ವೈಭವಕ್ಕೆ ಚಾಲನೆ.
ಮಳೆಗಾಲ ಆರಂಭವಾಗು ತ್ತಿದ್ದಂತೆ ಯಕ್ಷಗಾನ
ಕಲಾವಿದರಿಗೆ ಸ್ವಲ್ಪಮಟ್ಟಿಗೆಬಿಡುವು.
ಕರಾವಳಿ ಭಾಗದಲ್ಲಿ ಚಕ್ಕಮೇಳದವರ ತಿರುಗಾಟ ಆರಂಭ ವಾಗುತ್ತದೆ.
ವ್ಯವಸ್ಥಾಪಕರು ಮನೆಗಳಿಗೆ ತೆರಳಿ ಮೇಳ ಬರುವ ದಿನವನ್ನು ಮುಂಚಿತವಾಗಿ
ತಿಳಿಸುತ್ತಾರೆ. ಪ್ರತಿದಿನ ಸಂಜೆ
6.00 ರಿಂದ ಸುಮಾರು10 ಗಂಟೆಯ ತನಕ
ಆಹ್ವಾನಿಸಿದವರ ಮನೆಗಳಿಗೆ ತೆರಳಿ ಪೌರಾಣಿಕ ಕಥಾಭಾಗವನ್ನು ಪ್ರದರ್ಶಿಸುತ್ತಾರೆ. ಚಿಕ್ಕಮಕ್ಕಳು ಸೇರಿದಂತೆ ಮನೆಮಂದಿಯಲ್ಲರೂ ಯಕ್ಷಗಾನ ವೈಭವವನ್ನು ವೀಕ್ಷಿಸುತ್ತಾರೆ.
ಸಾಮಾನ್ಯವಾಗಿ ಇಬ್ಬರು ವೇಷಧಾರಿಗಳು ಇದ್ದು, ಭಾಗವತರು,ಮದ್ದಳೆ
ನುಡಿಸುವವರು,ಸ್ವರಪಟ್ಟಿಗೆಯವರು ಮತ್ತು ಜೊತೆಗೆ ದೇವರ ಪೆಟ್ಟಿಗೆಯನ್ನು ಹಿಡಿದುಕೊಂಡು ಅರ್ಚಕರೊಬ್ಬರು ಇರುತ್ತಾರೆ.
ಇದನ್ನು ಗ್ರಾಮೀಣರು ಮನರಂಜನೆಯ ಜೊತೆಗೆ ದೇವರಸೇವೆಯಂತಲೂ ಭಾವಿಸುತ್ತಾರೆ.
ಗೆಜ್ಜೆಕಾಲ್ಗಳ ಕುಣಿತ, ಭಾಗವತರ ಹಾಡುಗಾರಿಕೆ, ತಾಳ ಮದ್ದಳೆಗಳು
ಮೇಳೈಸಿದಾಗ ಏನೋ ಒಂದು
ಪುನೀತಭಾವ ನೋಡುಗರಲ್ಲಿ
ಮೂಡುತ್ತದೆ. ಮೊದಲಿಗೆ ಮನೆಯ ಯಜಮಾನರು ಕಲಾವಿದರನ್ನು ಸ್ವಾಗತಿಸುತ್ತಾರೆ.ಅರ್ಚಕರು ದೇವರ ಬಿಂಬವನ್ನು ಪೀಠದ ಮೇಲೆ ಇಟ್ಟು ಅಲಂಕರಿಸುತ್ತಾರೆ,
ಭಾಗವತರು ಮತ್ತು ಚಂಡೆ
ಮದ್ದಳೆಯವರು
ಮನೆಯ ಜಗುಲಿಯ ಮೇಲೆ
ಇಟ್ಟ ಆಸನದ ಮೇಲೆ
ಕುಳ್ಳಿತುಕೊಂಡು ಹತ್ತು ಹದಿನೈದು ನಿಮಿಷಗಳ ತನಕ
ಪುಟ್ಟ ಪೌರಾಣಿಕ ಕಥಾಭಾಗವನ್ನು
ಆಡಿತೋರಿಸುತ್ತಾರೆ.
ಕಥಾನಕ ಮುಗಿದಂತೆ
ಅರ್ಚಕರು ಆರತಿ ಬೆಳಗಿದಾಗ
ಭಾಗವತರು ಮಂಗಲ
ಹಾಡುತ್ತಾರೆ, ಹೂವು ಹಣ್ಣು
ಅಕ್ಕಿ ಇಟ್ಟು ತಾಂಬೂಲ
ಸಮೇತವಾಗಿ ಅರ್ಚನೆಮಾಡಿ,
ಡಭ್ಬಿಗೆ ಕಾಣಿಕೆ ಹಾಕಿ,
ಅರ್ಚಕರಿಗೆ ದಕ್ಷಿಣೆಕೊಟ್ಟು,
ಚಿಕ್ಕಮೇಳದವರಿಗೆ
ಯಥಾನುಸಾರ ಗೌರವ
ಧನವನ್ನು ತಾಂಬೂಲ ಅಕ್ಕಿಯ ಜೊತೆಗೆ ಕೊಟ್ಟು
ಕಳುಹಿಸುತ್ತಾರೆ.
ಕೆಲವರು ಕಲಾವಿದರಿಗೆ ಲಘು ಉಪಹಾರ ನೀಡುತ್ತಾರೆ.
ಇದೊಂದು ಕರಾವಳಿ ಭಾಗದ
ಸಾಂಸ್ಕೃತಿಕ ಪರಂಪರೆಯಾಗಿದ್ದು ಉಳಿಸಿ
ಬೆಳೆಸಬೇಕಾಗಿದೆ.

ಈ ದಿನ  “ಮಾಯಾ ಜಿಂಕೆ”
ಪುಟ್ಟ ಪ್ರಸಂಗವನ್ನು ಶ್ರೀ
ರಾಮಚಂದ್ರನ ಪಾತ್ರದಲ್ಲಿ ಶೇಖರ ವಿ,ಸೀತೆಯಾಗಿ
ಗೋವಿಂದ.ಬಿ ಇವರು ಅಚ್ಚಕಟ್ಟಾಗಿ ಅಭಿನಯಿಸಿದರು.
ಭಾಗವತ ಶಂಕರ
ಗೋಳಿಹೊಳೆಯವರ
ಸುಶ್ರಾವ್ಯ ಸಂಗಿತ,ಈಶ್ವರ
ಭಂಡಾರಿಯವರ ಮದ್ದಳೆ
ವಾದನ ಮನಸೂರೆಗೊಂಡಿತು.
ಅರ್ಚಕ ಆನಂದ ಮೂರ್ತಿ ಗುಡ್ಡೆಅಂಗಡಿ ಇವರು ಪೂಜೆ ಮಾಡಿ ಪ್ರಸಾದ ವಿತರಿಸಿದರು.
———————————–
ಕೆ.ಪುಂಡಲೀಕ ನಾಯಕ್,
ನಾಯ್ಕನಕಟ್ಟೆ ಬೈಂದೂರು.✍️

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply