ಯು.ಪಿ.ಎಂ.ಸಿ ಕಾಲೇಜಿನ ಬೀದಿನಾಟಕ ಸಮಾರೋಪ

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಕುಂಜಿಬೆಟ್ಟು ಉಡುಪಿ ಇದರ ಸಂಯುಕ್ತಾಶ್ರಯದಲ್ಲಿ ನಡೆಸಿದ ‘ಮಾನಸಿಕ ಸಮಸ್ಯೆ’ ಕುರಿತು ಮಾಡಿದ ಬೀದಿನಾಟಕವು ಇಂದು ಕಾಲೇಜಿನ ಕ್ಯಾಂಪಸ್ ನಲ್ಲಿ ಕೊನೆಯ ಪ್ರದರ್ಶನ ಕಂಡು ಸಮಾರೋಪಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಈ ಶೈಕ್ಷಣಿಕ ವರ್ಷದ ಅವಿಸ್ಮರಣೀಯ ಕಾರ್ಯಕ್ರಮ ಈ ಬೀದಿನಾಟಕ ಇದು ಕೇವಲ ಕಾಲೇಜಿನ ಮಕ್ಕಳಿಗೆ ಮಾತ್ರ ಮಾಹಿತಿ ನೀಡದೇ ಕಾಪು, ಹಿರಿಯಡ್ಕ, ಜಿ.ಶಂಕರ್ ಮಹಿಳಾ ಕಾಲೇಜಿನ ಕ್ಯಾಂಪಸ್ ಹಾಗು ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ಸಹ ಪ್ರದರ್ಶನಗೊಂಡು ಅರಿವು ಮೂಡಿಸುವ ಜೊತೆಗೆ ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸುವಂತೆ ಮಾಡಿದೆ ಎಂದರು.

ಮುಖ್ಯ ಅತಿಥಿ ಕಾಲೇಜಿನ 1992 ನೇ ಬ್ಯಾಚ್ ನ ಹಳೆ ವಿದ್ಯಾರ್ಥಿ ಇ-ಸಮುದಾಯ ಉಡುಪಿ ಇದರ  ಮಾನವ ಸಂಪನ್ಮೂಲ ಅಧಿಕಾರಿ ಸುದರ್ಶನ್ ಮಾತನಾಡಿ ಆಗಿನ ಕಾಲೇಜಿನ ದಿನಗಳನ್ನು ಮೆಲಕು ಹಾಕಿದರು.

ಕಾಲೇಜಿನ ಉಪಪ್ರಾಚಾರ್ಯೆ ಆಶಾ ಕುಮಾರಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿ ಇದರ ಸಂಚಾಲಕ ರವಿರಾಜ್ ಹೆಚ್.ಪಿ,  ಬೀದಿನಾಟಕದ ನಿರ್ದೇಶಕ ಪ್ರಮೋದ್ ಶೆಟ್ಟಿ ಅತ್ರಾಡಿ, ಸಂಗೀತ ನಿರ್ದೇಶಕ ಗೀತಂ ಗಿರೀಶ್ ಉಪಸ್ಥಿತರಿದ್ದರು. ಈ ಬೀದಿ ನಾಟಕದಲ್ಲಿ ದ್ವಿತೀಯ ಬಿ.ಕಾಂ ನ ನಾಗರಾಜ್, ಪ್ರಥಮ ಬಿ.ಕಾಂ ನ ಹಿಮಲ್, ನಿಧಿ, ಸಂಗೀತ, ಚಿನ್ನಪ್ಪ, ಪ್ರಥಮ ಬಿಬಿಎಯ ಯಶ್ವಿತ, ಪ್ರಾಕ್ಷ, ರಕ್ಷಾ, ದೀಕ್ಷಾ ಭಾಗವಹಿಸಿದ್ದರು.

 

ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರಶೇಖರ್ ವಂದಿಸಿದರು, ಬೀದಿನಾಟಕದ ಸಂಯೋಜಕ, ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply