ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ, ಕೃತಜ್ಞತ ಸಭೆ , ಸ್ಮರಣ ಸಂಚಿಕೆ ಬಿಡುಗಡೆ

ಮಲ್ಪೆ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ರಾಶಿಪೂಜಾ ಮಹೋತ್ಸವಕ್ಕೆ ಅಹರ್ನಿಶಿ ದುಡಿದ ಪ್ರಮುಖರಿಗೆ ಕೃತಜ್ಞತೆ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ಸೋಮವಾರ ನಡೆಯಿತು. ದೇವಳದ ತಂತ್ರಿ ಪೂತ್ತೂರು ಹಯವದನ ತಂತ್ರಿ ಅವರು ದೇಗುಲದನ ವ್ಯವಸ್ಥಾಪನಾ ಸಮಿತಿಯ ೩ವರ್ಷ ಅವಽಯ ಕೆಲಸ ಕಾರ್ಯದ ವಿವರ ಹಾಗೂ ರಾಶಿಪೂಜೆ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡವೂರು ಶ್ರೀ ಶಂ. ಭಕ್ತವೃಂದದ ಅಧ್ಯಕ್ಷ ರವಿರಾಜ್ ಹೆಗ್ಡೆ, ನಗರಸಭಾ ಸದಸ್ಯ ವಿಜಯ ಕೊಡವೂರು, ನಿಕಟಪೂರ್ವನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಉಪಸ್ಥಿತರಿದ್ದರು.

ರಾಶಿ ಪೂಜಾ ಮಹೋತ್ಸವದ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವ ಅಧ್ಯಕ್ಷ ನಾಗರಾಜ್ ಸುವರ್ಣ, ಸೇವಾ ಸಮಿತಿಯ ಗೌರವ ಅಧ್ಯಕ್ಷ ಆನಂದ ಪಿ. ಸುವರ್ಣ, ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಾಂತಪ್ಪ ಕರ್ಕೇರ, ರಾಶಿಪೂಜಾ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ ಸಾಲ್ಯಾನ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಭಾಸ್ಕರ್ ಪಾಲನ್, ಎ. ರಾಜ ಸೇರಿಗಾರ, ಕೆ. ಬಾಬ, ಸುಧಾ ಎನ್. ಶೆಟ್ಟಿ, ಬೇಬಿ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ಕಳೆದ ಹಲವಾರು ವರ್ಷಗಳಿಂದ ದೇಗುಲದಲ್ಲಿ ಸೇವೆ ಸಲ್ಲಿಸಿದ ಅಡಿಗ ಕೃಷ್ಣ ಮೂರ್ತಿ ಭಟ್, ಆನಂತ ಪದ್ಮನಾಭ ಭಟ್ ವೆಂಕಟೇಶ ಆಚಾರ್ಯ, ಸಂಜೀವ ಅವರಿಗೆ ಶ್ರೀ ಶಂಕರನಾರಾಯಣಾನುಗ್ರಹ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.  

ವ್ಯವಸ್ಥಾಪನಾ ಸಮಿತಿಯ ಸದಸ್ಯ ಜನಾರ್ದನ ಕೊಡವೂರು ಸ್ವಾಗತಿಸಿದರು. ರಾಶಿಪೂಜಾ ಸಮಿತಿಯ ಕೋಶಾಧಿಕಾರಿ ಉಮೇಶ್ ರಾವ್ ಲೆಕ್ಕಪತ್ರ ಮಂಡಿಸಿದರು. ಪೂರ್ಣಿಮಾ ಜನಾರ್ದನ ವಂದಿಸಿದರು. ಕಾವ್ಯ ಸೀತರಾಮ್ ಪ್ರಾರ್ಥಿಸಿದರು. ಯೋಗೀಶ್ ಕೊಳಲಗಿರಿ ಮತ್ತು ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply