ರಂಗಭೂಮಿಯು ಜೀವ​ ​ಚೈತನ್ಯ ಶಕ್ತಿಯಾಗಿದೆ​~ರಂಗಕರ್ಮಿ ​​ ಜೋಸೆಫ್ ಜಾನ್ ​

ಉಡುಪಿ​: ನಟನೆಯಾಗಲಿ, ನಾಟಕವಾಗಲಿ ಬದುಕಿಗೆ ಸ್ಪೂರ್ತಿಯನ್ನು ನೀಡುವಂತದ್ದು. ಇದರಿಂದ ಆತ್ಮಚೈತನ್ಯವೂ ಹೆಚ್ಚುತ್ತದೆ. ಇಂತಹ ಚಟುವಟಿಕೆಗಳು ಯಾವುದೇ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದು ಕಷ್ಟದ ಕಾಲ. ಇಂತಹ ದಿನಗಳಲ್ಲಿ ಅಂತಃ ಶಕ್ತಿಯನ್ನು ಹೊರತರಲು ಜೀವ ಶಕ್ತಿಯಾಗಿ ರಂಗಭೂಮಿ ಸಹಕರಿಸುತ್ತದೆ ಎಂದು ರಂಗಕರ್ಮಿ  ಜೋಸೆಫ್ ಜಾನ್ ​  ನಿನಾಸಂ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಂಗಳವಾರ ಸುಮನಸಾ ಕೊಡವೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ,​ ​ಬೆಂಗಳೂರು, ಉಡುಪಿ ನಗರಸಭೆಯ ಸಹಯೋಗದೊಂದಿಗೆ ಅಜ್ಜ​ರ‌ಕಾಡು ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ  ಆಯೋಜಿಸಿದ ಸಪ್ತದಿನದ ರಂಗಹಬ್ಬದ ಎರಡನೆ ದಿನದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ​ನಾಡಿ ಸುಮನಸಾ ಒಳ್ಳೆಯ ಮನಸ್ಸಿನ ಒಂದು ಸಂಘಟನೆ. ಇಲ್ಲಿ ನಟನೆ ಮತ್ತು ಸಾಂಕ ಚಟುವಟಿಕೆಗಳು ಸಾಮೂಹಿಕ ಪ್ರಯತ್ನದಿಂದ ನಡೆಯುತ್ತಿದೆ ಎಂದರು.​ ​ಈ ಸಂದರ್ಭದಲ್ಲಿ ​ಚಂದ್ರಕಲಾ ಎಸ್. ಭಟ್ ಅವರಿಗೆ ರಂಗ ಸಾಧಕ ಸನ್ಮಾನ ನೀಡಿ ಗೌರವಿಸ ಲಾಯಿತು.​
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಕೆನರಾ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಎಮ್. ವೈ. ಹರೀಶ್, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಕಷ್ಣ ದೇವಾಡಿಗ, ಮಟ್ಟು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಟ್ಟು ಲಕ್ಷ್ಮೀನಾರಾಯಣ ರಾವ್, ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಉದ್ಯಮಿ ಕೆ. ಸುರೇಶ್ ಶೇರಿಗಾರ್​. 
ಸಾಹಿತಿ ಪೂರ್ಣಿಮಾ ಜನಾರ್ದನ್, ರಂಗಕರ್ಮಿ ಶಶಿರಾಜ್ ರಾವ್ ಕಾವೂರು, ಉದ್ಯಮಿ ಗಣೇಶ್ ಪಾಟೀಲ್ ಹಾಗೂ ಸುಮನಸಾ ಉಪಾಧ್ಯಕ್ಷರುಗಳಾದ ವಿನಯ್ ಕುಮಾರ್ ಕಲ್ಮಾಡಿ, ಗಣೇಶ್ ರಾವ್ ಎಲ್ಲೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಟಿ ಚಂದ್ರಕಲಾ ಎಸ್. ಭಟ್ ಅವರನ್ನು ರಂಗ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಬಳಿಕ ಸುಮನಸಾ ಕೊಡವೂರು ತಂಡದಿಂದ ನೆರಳಿಲ್ಲದ ಮನುಷ್ಯರು ನಾಟಕ ಪ್ರದರ್ಶನಗೊಂಡಿತು.
 
 
 
 
 
 
 
 
 
 
 

Leave a Reply