ಪ್ರಕೃತಿಯ ಬಗ್ಗೆ ಚಿಂತನೆ ಸದಾ ಅಗತ್ಯ – ಕುಂಭಾಶಿ ಪಂಚಾತಯ್ ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ

 ಮಣಿಪಾಲ : ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಮಹಾತ್ಮಾಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ ಬೆಂಗಳೂರಿನ ಪ್ರಾಯೋಜಕತ್ವದಲ್ಲಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಇವರ ಸಹಭಾಗಿತ್ವದಲ್ಲಿ ‘ಮಳೆ ನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ ಮತ್ತು ನವೀಕರಿಸಬಹುದಾದ ಇಂಧನ’ ವಿಷಯದಲ್ಲಿ ಮಾಹಿತಿ ಕಾರ್ಯಾಗಾರ ಸ್ತ್ರೀ ಶಕ್ತಿ ಸಂಘದ ಸದಸ್ಯೆಯರಿಗೆ ಕುಂದಾಪುರ ತಾಲೂಕು ಕುಂಭಾಶಿಯ ಅಂಬೇಡ್ಕರ್ ಭವನದಲ್ಲಿ ಜರಗಿತು. 

 ಕುಂಭಾಶಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ ದೀಪಬೆಳಗಿಸಿ ಉದ್ಘಾಟನೆಗೈದು ಮಾತನಾಡಿ ಸಂಪನ್ಮೂಲಗಳ ಉಳಿತಾಯ ಮತ್ತು ಸದ್ಬಳಕೆಗೆ ಮಾಡುವ ಮನೋಧರ್ಮ ಸಮಾಜದಲ್ಲಿ ಮೂಡಬೇಕು. ಇಂತಹ ಮಾಹಿತಿ ಕಾರ್ಯಾಗಾರಗಳು ಜನರ ಚಿಂತನೆಯನ್ನು ಪ್ರಕೃತಿಪರವಾಗಿಸಲು ಸಹಾಯಮಾಡುತ್ತದೆ ಎಂದರು.

 ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಕಾರ್ಯದರ್ಶಿ ಪ್ರೇಮಾ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಸದಸ್ಯೆ ರತ್ನಾ ತುಳಸೀದಾಸ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅವಿನಾಶ್, ಭಾರತೀಯ ವಿಕಾಸ ಟ್ರಸ್ಟಿನ ಅಧಿಕಾರಿ ಅರುಣ್ ಪಟವರ್ಧನ್ ಉಪಸ್ಥಿತರಿದ್ದರು. ಭಾರತೀಯ ವಿಕಾಸ ಟ್ರಸ್ಟಿನ ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಆಚಾರ್ಯ ಅತಿಥಿಗಳನ್ನು ಸ್ವಾಗತಿಸಿದರು.

ಶಿಬಿರಾರ್ಥಿಗಳಿಗೆ ಮಳೆ ನೀರು ಕೊಯ್ಲು ವಿಧಾನಗಳ ಬಗ್ಗೆ ಅರುಣ್ ಪಟವರ್ಧನ್ ಮಾಹಿತಿ ಇತ್ತರು. ಘನತ್ಯಾಜ್ಯ ನಿರ್ವಹಣೆಯ ವಿಧಾನಗಳನ್ನು ರಾಘವೇಂದ್ರ ಆಚಾರ್ಯ ವಿವರಿಸಿದರು. ಸೆಲ್ಕೋ ಕುಂದಾಪುರ ಶಾಖೆಯ ಸಿಬ್ಬಂದಿ ಸಂತೋಷ್ ಕುಲಾಲ್ ಸೌರ ಶಕ್ತಿ, ನವೀಕರಿಸಬಹುದಾದ ಇಂಧನ ವಿಷಯದಲ್ಲಿ ಮಾಹಿತಿ ನೀಡಿದರು ಹಾಗೂ ಬಿವಿಟಿ ಸಿಬ್ಬಂದಿ ಸುರೇಶ್ ಕುಲಾಲ್ ಸಹಕರಿಸಿದರು.

 
 
 
 
 
 
 
 
 
 
 

Leave a Reply