Janardhan Kodavoor/ Team KaravaliXpress
24.6 C
Udupi
Friday, December 2, 2022
Sathyanatha Stores Brahmavara

ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ~ ಭರತಮುನಿ ಜಯಂತ್ಯುತ್ಸವ

ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಶ್ರೀ ಕೃಷ್ಣ ಮಠದ   ಆಶ್ರಯದಲ್ಲಿ, ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ ಆಯೋಜಿಸಿದ್ದ ಭರತಮುನಿ ಜಯಂತ್ಯುತ್ಸವವನ್ನು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಉದ್ಘಾಟಿಸಿ, ಆಶೀರ್ವಚಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ರವಿಚಂದ್ರ ಬಾಯರಿ, ಲೇಖಕರು ಹಾಗೂ ಉಪನ್ಯಾಸಕರು ವಹಿಸಿದ್ದರು. ಅತಿಥಿಯಾಗಿ ಸಂಸ್ಥೆಯ ಶಿಷ್ಯ ಕಿರುತೆರೆ ಮತ್ತು ಚಲನಚಿತ್ರ ಕಲಾವಿದರಾದ ಶ್ರೀ ಕಾರ್ತಿಕ್ ಸಾಮಗ ಉಪಸ್ಥಿತರಿದ್ದರು. ಭರತ ಪ್ರಶಸ್ತಿಯನ್ನು ವಿದುಷಿ ಶ್ರೀಮತಿ ಶುಭದಾ ಸುಧೀರ್, ನೃತ್ಯ ಗುರುಗಳು ಬೆಂಗಳೂರು, ವಿದುಷಿ ಡಾ. ಸುಪರ್ಣ ವೆಂಕಟೇಶ್, ನೃತ್ಯ ಗುರುಗಳು ಬೆಂಗಳೂರು,  ವಿದುಷಿ ಡಾ.ಚೇತನಾ ಆಚಾರ್ಯ, ಸಂಗೀತ ಗುರುಗಳು ಉಡುಪಿ, ವಿದುಷಿ ಶ್ರೀಮತಿ ಉಮಾಶಂಕರಿ, ಸರಿಗಮ ಭಾರತಿ ಸಂಗೀತ ವಿದ್ಯಾಲಯ ,ಪರ್ಕಳ, ಹಾಗೂ ಯಕ್ಷಗಾನ ಕಲಾವಿದರಾದ ಶ್ರೀ ಜಗನ್ನಾಥ ಆಚಾರ್ಯ, ಎಳ್ಳಂಪಳ್ಳಿ ಇವರುಗಳಿಗೆ  ಪರ್ಯಾಯ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿದರು.
ತೀರ್ಥಹಳ್ಳಿಯ ವಿದುಷಿ ಅರುಂಧತಿ ಪಿ ವಿ ಭಟ್ ಮತ್ತು ಪುತ್ತೂರಿನ ವಿದ್ವಾನ್ ಮಂಜುನಾಥ್ ಇವರು ನೃತ್ಯಾರಾಧನಾ ಪ್ರಶಸ್ತಿ ಸ್ವೀಕರಿಸಿದರು. ಕಲಾರ್ಪಣ ಪ್ರಶಸ್ತಿಯನ್ನು  ಸುರತ್ಕಲಿನ  ಶ್ರೀಮತಿ ಸ್ವರ್ಣಾ ಶೆಟ್ಟಿ ಅವರು ಸ್ವೀಕರಿಸಿದರು. ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿಯನ್ನು ಸಂಸ್ಥೆಯ  ಭರತನಾಟ್ಯ ವಿದ್ವತ್ ಪದವಿ ಪಡೆದ ವಿದ್ಯಾರ್ಥಿಗಳಾದ ವಿದುಷಿ ಕು.ಅಮೃತ ಪ್ರಸಾದ್, ವಿದುಷಿ ಕು. ಪ್ರಣತಿ ಆಚಾರ್ಯ,ವಿದುಷಿ ಕು. ಶರಣ್ಯ ರಾವ್, ವಿದುಷಿ ಶ್ರೀಮತಿ ಸುಶ್ಮಿತಾ ಗಿರಿರಾಜ್, ವಿದುಷಿ ಶ್ರೀಮತಿ ವಿನಿತಾ ರಾಜ್ ಕಿಶೋರ್ ಸ್ವೀಕರಿಸಿದರು.
ಕಾರ್ಯಕ್ರಮವನ್ನು ಶ್ರೀ ಅಶ್ವಥ್ ಭಾರದ್ವಾಜರವರು ನಿರೂಪಿಸಿದರು.ಸಂಸ್ಥೆಯ ಗುರು ನೃತ್ಯ ವಿದುಷಿ ಶ್ರೀಮತಿ ವೀಣಾ ಮುರಳೀಧರ ಸಾಮಗ ಸ್ವಾಗತ ಭಾಷಣ ಮಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀ ಮುರಳೀಧರ ಸಾಮಗ ಉಪಸ್ಥಿತರಿದ್ದರು. 
ಸಭಾ ಕಾರ್ಯಕ್ರಮದ ನಂತರ ಭರತನಾಟ್ಯ, ಕೂಚಿಪುಡಿ ನೃತ್ಯ ರೂಪಕಗಳಾದ “ಕೃಷ್ಣಂ ವಂದೇ ಜಗದ್ಗುರುಂ”, “ಒನಕೆ ಓಬವ್ವ” ಸಂಸ್ಥೆಯ ಶಿಷ್ಯವೃಂದದವರಿಂದ ನಡೆಯಿತು. ನೃತ್ಯ ರೂಪಕವು ಜನಮನ್ನಣೆಗೆ ಪಾತ್ರವಾಯಿತು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!