ಪ್ರೊಫೆಸರ್ ಎಂ.ಎಲ್ ಸಾಮಗ ದಂಪತಿಗಳಿಂದ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಕೊಡವೂರಿನಲ್ಲಿ ಅರ್ಧ ಎಕ್ರೆ ಸ್ಥಳ ದಾನ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ , ಯಕ್ಷಗಾನ ಕಲೆಗೆ ಮತ್ತು ಕಲಾವಿದರಿಗಾಗಿ ಸಲ್ಲಿಸುತ್ತಿರುವ ಸೇವೆಗಳನ್ನು ಹಾಗೂ ಪಟ್ಲ ಸತೀಶ್ ಶೆಟ್ಟಿಯವರ ಕಾರ್ಯಸಾಧನೆಗಳನ್ನು ಮೆಚ್ಚಿ ತನ್ನ ವತಿಯಿಂದ ಉಡುಪಿಯ ಕೊಡವೂರಿನಲ್ಲಿ ತೀರ್ಥರೂಪ ಮಲ್ಪೆ ಶಂಕರನಾರಾಯಣ ಸಾಮಗರ  ಹೆಸರಿನಲ್ಲಿ ಸುಮಾರು 50 ಸೆಂಟ್ಸ್ ವಿಶಾಲವಾದ ಖಾಲಿ ನಿವೇಶನವನ್ನು (ಅಂದಾಜು ರೂ 1.00 ಕೋಟಿ ಮೌಲ್ಯದ) ಯಕ್ಷಗಾನ ವಿದ್ವಾಂಸರೂ, ಕಲಾ ಪ್ರೋತ್ಸಾಹಕರಾದ ಪ್ರೊಫೆಸರ್ ಎಂ.ಎಲ್ ಸಾಮಗ ಹಾಗೂ ಅವರ ಧರ್ಮಪತ್ನಿ  ಪ್ರತಿಭಾ ಎಲ್ ಸಾಮಗ ಇವರು ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಪಟ್ಲ ಫೌಂಡೇಶನ್ ವತಿಯಿಂದ ಜರಗುತ್ತಿರುವ 6ನೇ ದಿವಸದ ತಾಳಮದ್ದಲೆಯ ಸಭಾ ಕಾರ್ಯಕ್ರಮದಲ್ಲಿ ಉದಾರ ಮನಸ್ಸಿನಿಂದ
ಉಚಿತವಾಗಿ ನೀಡುತ್ತಿದ್ದೇನೆಂದು ಘೋಷಿಸಿದರು.
ನಿರಂತರ ಹತ್ತು ದಿವಸದ  ತಾಳಮದ್ದಲೆಯ 6ನೇಯ ದಿವಸದ ಉದ್ಘಾಟನೆಯನ್ನು ಪದ್ಯಾಣ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಸೇರಾಜೆ ಸತ್ಯನಾರಾಯಣ ಭಟ್ ಜ್ಯೋತಿ ಬೆಳಗಿಸಿ ನೆರವೇರಿಸಿದರು.
ವೇದಿಕೆಯಲ್ಲಿ ಯಕ್ಷಗಾನ ವಿದ್ವಾಂಸರಾದ ಪ್ರಭಾಕರ ಜೋಷಿ, ಶ್ರೀ ಮಧುಕರ ಭಾಗವತ್, ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ, ಪದಾಧಿಕಾರಿಗಳಾದ ಡಾ! ಮನು ರಾವ್. ಪಡುಬಿದ್ರಿ ದುರ್ಗಾಪ್ರಸಾದ್ ಈರೋಡ್, ಪುರುಷೋತ್ತಮ ಭಂಡಾರಿ, ಸುದೇಶ್ ಕುಮಾರ್ ರೈ ಹಾಗೂ ರವಿ ಶೆಟ್ಟಿ ಅಶೋಕನಗರ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply