ಮನೆ ಅಂಗಳದಲ್ಲಿ ಸೋಬಾನೆ ಹಬ್ಬ

ಕನ್ನಡ ಜಾನಪದ ಪರಿಷತ್ ಬೆಂಗಳೂರು​, ​ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ​, ​ಮಿತ್ರ ಸಂಗಮ (ರಿ) ಬಿಜಾಡಿ- ಗೂಪಾಡಿ​, ​ರೋಟರಿ ಸಮುದಾಯ ದಳ​ ​ಬಿಜಾಡಿ-ಗೂಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ​ ​ ದಿನಾಂಕ 04/10/2020​, ಭಾನುವಾರದಂದು ಬೆಳಿಗ್ಗೆ ​ಗಂಟೆ 10.30 ಕ್ಕೆ ​ದಿ.ನಾಗೇಶ್ವರ ಬಾಯರಿ ಅವರ ಮನೆ ಅಂಗಳದಲ್ಲಿ ​​ಸೋಬಾನೆ ಹಬ್ಬ​ ​ಕಾರ್ಯಕ್ರಮ​ ನಡೆಯಲಿದೆ.
  ​​
ಕಾರ್ಯಕ್ರಮದ ಉದ್ಘಾಟನೆಯನ್ನು​ ​ಪ್ರಸಿದ್ಧ ರಂಗೋಲಿ ಕಲಾವಿದರು​, ​ಕನ್ನಡ ಜಾನಪದ ಪರಿಷತ್ ಇದರ ವಿಭಾಗೀಯ ಸಂಚಾಲಕರಾದ ಡಾ.ಭಾರತಿ ಮರವಂತೆ ನೆರವೇರಿಸಲಿದ್ದಾರೆ​.​ ವಾದಿರಾಜ್ ಹೆಬ್ಬಾರ್​,​ ಮಾಜಿ ಸದಸ್ಯರು​,​ ಗ್ರಾಮ ಪಂಚಾಯತ್ ಬಿಜಾಡಿ ಅಧ್ಯಕ್ಷತೆ​ ​ಹಿ​ಸಲಿದ್ದಾರೆ​. ವೇದಮೂರ್ತಿ ಶಂಕರನಾರಾಯಣ ಬಾಯರಿ(ನಾಗಪಾತ್ರಿ) ಬಿಜಾಡಿ​,​ ಮಂಜುನಾಥ್ ​,​ಅಧ್ಯಕ್ಷರು  ಮಿತ್ರ ಸಂಗಮ ಬೀಜಾಡಿ -ಗೋಪಾಡಿ​, ಗಿರೀಶ್​,​ ಅಧ್ಯಕ್ಷರು ರೋಟರಿ ಸಮುದಾಯ ದಳ ಬಿಜಾಡಿ- ಗೊಪಾಡಿ​ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 
ಈ ಸಂದರ್ಭದಲ್ಲಿ ಹಿರಿಯ ಜಾನಪದ ಕಲಾವಿದರು​ಗಳಾದ ​ಸೀತು ಕೋಟೆ ಬಾಗಿಲು​, ​ಶಾರದಾ ಗಾಣಿಗ​, ದುರ್ಗಿ ಕಂಬಳಗದ್ದೆ​ಯವರಿಗೆ ಸನ್ಮಾನ ನಡೆಯಲಿದೆ.  ಶ್ರೀಚಂದ್ರಶೇಖರ್ ​ಕಾರ್ಯಕ್ರಮ ನಿರೂಪಿಸಲಿದ್ದಾರೆ.  ಈ ಕಾರ್ಯಕ್ರಮವು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ​ ​ಡಾ.ಬಾಲಾಜಿ ಅವರ ಮಾರ್ಗದರ್ಶನದಲ್ಲಿ ​ಸಾಕಾರಗೊಳ್ಳಲಿದೆ ​ಎಂದು ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಲ್ಲಾಧ್ಯಕ್ಷ ಗಣೇಶ್ ಗಂಗೊಳ್ಳಿ ಅವರು ಪ್ರಕಣೆಯಲ್ಲಿ ತಿಳಿಸಿದ್ದಾರೆ​​.
 
 
 
 
 
 
 

Leave a Reply