ಆಣ್ ಸುರ್ಪೋ ದುಲಯಿದ ಪೊಣ್ಣ ಕಣ್ಣ್ ~ಶಿಲ್ಪಾ ಜೋಶಿ

ತುಳು ಕೂಟ (ರಿ) ಉಡುಪಿ ಏರ್ಪಡಿಸಿದ ತುಳು ನಾಟಕ ಸ್ಪರ್ಧೆಯ ನಾಟಕ
ಆಣ್ ಸುರ್ಪೋ ದುಲಯಿದ ಪೊಣ್ಣ ಕಣ್ಣ್
ನವ ಸುಮ ರಂಗ ಮಂಚ (ರಿ) ಕೊಡವೂರು ರವರ ಯುವ ಬರಹಗಾರ್ತಿ ಅಕ್ಷತಾ ರಾಜ್ ಪೆರ್ಲ ರಚಿಸಿದ , ಬಾಲಕೃಷ್ಣ ಕೊಡವೂರು ನಿರ್ದೇಶನದ ನಾಟಕ .

ಹಿಜಡಾ ಗಳು ಅನುಭವಿಸುವ ವೇದನೆ , ತೊಡಕು , ಅವರ ಬಗ್ಗೆ ಸಮಾಜಕ್ಕಿರುವ ಅಸಡ್ಡೆ. ಅವರ ಮನಸ್ಥಿತಿಯನ್ನು ಪುರಾಣದ ಕಥೆಗೆ ಸಂಬಂಧಿಸಿ ಪರಿಣಾಮಕಾರಿಯಾಗಿ ರಂಗಕ್ಕೆ ತರುವ ಪ್ರಯತ್ನವನ್ನು ಮಾಡಿದರೆ ಅಕ್ಷತಾ ರಾಜ್ ಪೆರ್ಲ.

ಸೋಲನ್ನರಿಯದ ಭೀಷ್ಮಾಚಾರ್ಯ ಯರ ಎದುರು ಶಿಖಂಡಿ ಬಂದಾಗ ಶರತ್ಯಾಗ ಮಾಡಿ ಉತ್ತರಾಯಣದ ನಿರೀಕ್ಷೆಯಲ್ಲಿ ಶರಶೈಯೆಯಲ್ಲಿ ಮಲಗಿರುತ್ತಾರೆ .
ಶಿಖಂಡಿಯ ಪುನರ್ಜನ್ಮದ ನೆನಪು . ಅಂಬೆಯ ಆಕ್ರೋಶ . ತನ್ನ ಕನಸನ್ನು ಮಣ್ಣುಪಾಲು ಮಾಡಿದ ಭೀಷ್ಮನ ನಾಶದ ಉರಿಯನ್ನು ತನ್ನೊಳಗೆ ಕಾಪಿಟ್ಟು ಭೀಷ್ಮನ ಮರಣದ ಕಾಲದಲ್ಲಿಯಾದರೂ ತಾನು ಅನುಭವಿಸಿದ ಸಂಕಟವನ್ನು ತನ್ನ ಮನಸ್ಸಿನ ವೇದನೆಯನ್ನು ಹುಡುಕುತಿದ್ದ ಪ್ರಶ್ನೆಗಳ ಉತ್ತರವನ್ನು ಭೀಷ್ಮನಲ್ಲಿ ಕೇಳಬೇಕು ಮನಸ್ಸಿಗೆ ಸಮಾಧಾನ ವಾಗುವವರೆಗೆ ನಾಲಗೆ ಧಣಿಯುವವರೆಗೆ ಮಾತಾಡಬೇಕು ಎಂಬ ಆಸೆ ಯನ್ನು ಶ್ರೀಕೃಷ್ಣನ ಹತ್ತಿರ ವ್ಯಕ್ತ ಪಡಿಸುತ್ತಾ ಶರಶಯ್ಯೆಯಲ್ಲಿರುವ ಭೀಷ್ಮನ ನೋಡುವ ಅನುಮತಿಯನ್ನು ಪಡೆದು ರಣರಂಗಕ್ಕೆ ಹೊರಡುವ ದೃಶ್ಯ . ದ್ರುಪತಿಯ ಸೀರೆ ಸೆಳೆಯುವಾಗ ಕಣ್ಣಿದ್ದು ಕುರುಡಾದ ಭೀಷ್ಮನನ್ನು ಅವಳ ಅದೇ ಸೀರೆ ಅಲಂಕಾರವನ್ನು ತಾನು ಮಾಡಿಕೊಂಡು ಹೊರಡುವ ದೃಶ್ಯ .ಕೃಷ್ಣನೊಂದಿಗಿನ ಮಾತು. ದ್ರೌಪದಿಯ ಸ್ವಗತ . ಶಿಖಂಡಿಯ ತೊಳಲಾಟ ಎಲ್ಲವೂ ಕತೆಯನ್ನು ಕಟ್ಟಿಕೊಡುತ್ತದೆ. ವರದಿಂದ ಹೊರಗಿನ ಗಂಡು ರೂಪ ಪಡೆದರು, ಪೂರ್ವ ಜನ್ಮದ ನೆನಪು. ದ್ರೌಪದಿಯ ಸೀರೆಯುಟ್ಟು ಸಂಭ್ರಮಿಸುವ . ಅಂಬೆಯಾಗಿ ತಾನು ಅನುಭವಿಸ ಅವಮಾನ. ಎಲ್ಲಿಯೂ ಸಲ್ಲದವಳಾಗಿ ಹೊಂದಿದ ಮರಣ ದಕ್ಕದ ಪ್ರೇಮ ಎಲ್ಲವನ್ನು ತನ್ನೊಳಗೆ ಅದುಮಿಟ್ಟು ಬದುಕಿದ್ದು ಈ ಘಳಿಗೆಗೆ ಭೀಷ್ಮನ ಕಾಣಲು ಹೊರಡುವಾಗ ತನ್ನ ನೋವಿಗೆ ಕಾರಣನಾದವ ಮರಣ ಶಯ್ಯೆಯಲ್ಲಿ ಅಸಹಾಯಕನಾಗಿ ಮಲಗಿದ್ದಾಗ ಅನುಕಂಪಕ್ಕಿಂತ ಹೆಚ್ಚಾಗಿ ತನಗಾದ ಅಪಮಾನ, ಸೇಡು ಇದೆ ಮುಖ್ಯವಾಗಿತ್ತು . ತದನಂತರದ ಭೀಷ್ಮನ ಜೊತೆಯ ಸಂವಾದ. ಅಂಬೆಯಾಗಿ ತನಗೆ, ಈಗ ತನ್ನ ತಂಗಿ ದ್ರೌಪದಿಗೆ ನಡೆದ ಅನ್ಯಾಯ. ಹೆಣ್ಣಿನ ಮೇಲಿನ ದೌರ್ಜನ್ಯ. ಭೀಷ್ಮನ ವೇದನೆಯ ಉತ್ತರ ಮನ ಕಲುಕುವಂತಿತ್ತು .ಅಂಬೆಯ ಹಾಗು ಶಿಖಂಡಿಯ ಅಂತರಂಗದ ಮಾತುಗಳಿಗೆ ಚಲನೆ ಸ್ವಲ್ಪ ಅಡ್ಡಿಯಾಗಿತ್ತು ಅದಲ್ಲದೆ ಪಾತ್ರಧಾರಿಗಳ ಪ್ರತಿ ಮಾತಿಗೂ ಹತ್ತಿ ಇಳಿಯುವ ಅನಗತ್ಯ ಚಲನೆ ಪ್ರೇಕ್ಷಕರಿಗೆ ಮಾತಿನ ಗಂಭೀರತೆ ಅನುಭವಿಸಲು ತೊಡಕಾಗಿತ್ತು. ನಾಟಕದಲ್ಲಿ ಭೀಷ್ಮ ಪಾತ್ರಧಾರಿಯ ಮುಖ ಕಾಣದಿದ್ದದ್ದು ಸಂಭಾಷಣೆ ಅನುಭವಿಸಲು ಅಡ್ಡಿಯಾಗಿತ್ತು .ಒಂದೆರಡು ಅಂಶ ಬಿಟ್ಟರೆ ಉತ್ತಮ ಪ್ರಯತ್ನ .

ಸಾಮಾಜಿಕ ಸಂವೇದನೆಯುಳ್ಳ ಉತ್ತಮ ನಾಟಕವನ್ನು ಕೈಗೆತ್ತಿ ಕೊಂಡ ನವ ಸುಮ ರಂಗ ಮಂಚ (ರಿ) ಕೊಡವೂರು ತಂಡಕ್ಕೆ ಅಭಿನಂದನೆಗಳು .

 
 
 
 
 
 
 
 
 
 
 

Leave a Reply