Janardhan Kodavoor/ Team KaravaliXpress
24.6 C
Udupi
Friday, December 2, 2022
Sathyanatha Stores Brahmavara

ರಂಗಭೂಮಿ (ರಿ.) ಉಡುಪಿ​~ ರಂಗ ತರಬೇತಿ ಸರಣಿ ಶಿಬಿರ​

ಪ್ರತಿ ತಿಂಗಳೂ 2 ದಿನಗಳ ರಂಗ ತರಬೇತಿ ಸರಣಿ ಶಿಬಿರ –  ಅಕ್ಟೋಬರ್ 22 ಮತ್ತು 23 ರಂದು ರಾಜ್ಯದ ಹೆಸರಾಂತ ನಿರ್ದೇಶಕ ಚಲನಚಿತ್ರ ನಟ ಶ್ರೀ ಯಶ್ ಶೆಟ್ಟಿ ನಿರ್ದೇಶನದಲ್ಲಿ……
​​
“ರಂಗಭೂಮಿ ಕ್ಷೇತ್ರಕ್ಕೆ ಇನ್ನಷ್ಟು ಹೊಸಬರು ಬರುವಂತಾಗಬೇಕು. ಹಾಗೆಯೇ ಕಲೆಯಲ್ಲಿ ಆಸಕ್ತಿ ಇದ್ದು, ಉತ್ತಮ ಕಲಾವಿದರಾಗಲು ಇಚ್ಚಿಸುವವರು, ಮುಂದೆ ಕಲೆಯಲ್ಲಿ ತಮ್ಮದೇ ಆದ ಛಾಪನ್ನು  ಮೂಡಿಸುವಂತಾಗಲು ಬೆಳಕಿನ ಹಾಗೂ ಸಾಧ್ಯತೆಯ ರಹದಾರಿ ಈ ಶಿಬಿರಗಳು ಆಗಬೇಕು. ಒಟ್ಟು ರಂಗಭೂಮಿ ಬೆಳೆಯಬೇಕು ಎಂಬ ಮಹತ್ವದ ಸಂಕಲ್ಪದೊಂದಿಗೆ ರಂಗಭೂಮಿ (ರಿ.) ಉಡುಪಿ 2021ರ ಅಕ್ಟೋಬರ್ ನಿಂದ ಪ್ರತೀ ತಿಂಗಳು ಎರಡು ದಿನಗಳ ರಂಗತರಬೇತಿ ಕಾರ್ಯಾಗಾರವನ್ನು  ನಡೆಸುತ್ತಿರುವುದು ತಮಗೆ ಈಗಾಗಲೇ ತಿಳಿದ ವಿಚಾರವೇ.”
ಈ ತರಬೇತಿ ಸರಣಿಯ ಕಾರ್ಯಾಗಾರವು ‌ ಶ್ರೀ ಮಂಡ್ಯ ರಮೇಶ್ ಹಾಗೂ ಶ್ರೀ ಮಂಜುನಾಥ ಎಲ್. ಬಡಿಗೇರ್ ಮತ್ತು ಶ್ರೀ ಹುಲುಗಪ್ಪ ಕಟ್ಟಿಮನಿ, ಶ್ರೀ ಉಮೇಶ್ ಸಾಲಿಯಾನ್, ಶ್ರೀ ಪ್ರಶಾಂತ್ ಉದ್ಯಾವರ , ಶ್ರೀ ಭುವನ್ ಮಣಿಪಾಲ, ಶ್ರೀ ಚೇತನ್ ನೀನಾಸಂ ತುಮಕೂರು, ಶ್ರೀ ಜೊಸೆಪ್ ಜಾನ್ , ಶ್ರೀ ಮೇಘ ಸಮೀರ’ ಶ್ರೀಗಣೇಶ ಮಂದಾರ್ತಿ ಇವರುಗಳಿಂದ ಅತ್ಯಂತ ಯಶಸ್ವಿಯಾಗಿ ನಡೆದು, ಒಟ್ಟು ಈ ಸಂಕಲ್ಪವನ್ನು ಸಾರ್ಥಕವಾಗಿಸಿದೆ.2022ರ ಜನವರಿ ತಿಂಗಳಲ್ಲಿ ವಾರಾಂತ್ಯದ ಲಾಕ್ ಡೌನ್ ಇದ್ದಾಗ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ರಂಗಕಲಿಕೆಯನ್ನು ನಿಲ್ಲಿಸದೆ ಶ್ರೀ ಮಂಜುನಾಥ ಬಡಿಗೇರ ಇವರ ನಿರ್ದೇಶನದಲ್ಲಿ ಹೊಸ ನಾಟಕ ” ವಿಶಾಂಕೇ” ಯನ್ನು ಸಿದ್ದಪಡಿಸಿತ್ತು.​ ಇದೀಗ ಈ ರಂಗ ತರಬೇತಿ ಸರಣಿ ಕಾರ್ಯಾಗಾರದ 10 ನೇ ಶಿಬಿರವು ರಾಜ್ಯದ ಮತ್ತೋರ್ವ ಹೆಸರಾಂತ ಚಲನಚಿತ್ರ ನಟ ರಂಗಕರ್ಮಿ, ಯುವರಂಗ ನಿದೇ೯ಶಕ, ರಾಜ್ಯದ ಅತ್ಯುತ್ತಮ ನಿರ್ದೇಶಕರುಗಳಲ್ಲಿ ಓರ್ವ ಎಂದು ಗುರುತಿಸಿ ಕೊಂಡಿರುವ,   ” ಯಶ್ ಶೆಟ್ಟಿ” NSD ಇವರು ನಡೆಸಿ ಕೊಡಲಿದ್ದಾರೆ.

ನೀವು – ಯಾರ ಮನದಿಂದಲೂ ಮಾಸಿ ಹೋಗದ ಕಲಾವಿದರಾಗ ಬಯಸಿದ್ದು, ಅಂತಹ ಯಶಸ್ಸಿಗೆ ನಿಮ್ಮೊಳಗೆ ಒಂದು ರಹದಾರಿಯನ್ನು ಕಂಡು ಕೊಳ್ಳಲು ಬಯಸಿದ್ದರೆ, ತಡಮಾಡದೆ ಸರಣಿ ಶಿಬಿರಕ್ಕೆ ತಮ್ಮ ಹೆಸರನ್ನು ನೋಂದಾಯಿಸಿ. ಹಾಗೂ ಬೇರೆ ಆಸಕ್ತರಿಗೂ ತಿಳಿಸಿ.​ ಸೀಮಿತ ಸಂಖ್ಯೆಯ ಶಿಬಿರಾರ್ಥಿಗಳಿಗೆ ಅವಕಾಶದ ಕಾರಣ – ನೀವಿನ್ನೂ ನೋಂದಾಯಿಸಿರದಿದ್ದರೆ, ಆದಷ್ಟು ಬೇಗ ನೋಂದಾಯಿಸಿ ಕೊಳ್ಳಿ.

ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರರು​: 
 ಅಧ್ಯಾಪಕರಾದ  ಶ್ರೀ ವಿವೇಕಾನಂದ – 9449367595 ಇವರಿಗೆ ಊಟೋಪಚಾರದ ಬಾಬ್ತು ₹300/- Google pay ಮಾಡಿ ಹಾಗೂ ಅವರಿಗೆ ನಿಮ್ಮ ಹೆಸರು, ವಿಳಾಸ ಮತ್ತು Google pay ಮಾಡಿರುವುದರ ಮಾಹಿತಿಯನ್ನು ( screen shot) ಆದಷ್ಟು ಬೇಗ ಕಳುಹಿಸಿ ನೋಂದಾಯಿಸಿ ಕೊಳ್ಳಿ.

ಶಿಬಿರಾರ್ಥಿಗಳಿಗೆ ಕೆಲವು ಸೂಚನೆಗಳು​: ಶಿಬಿರದ ಒಟ್ಟು ಯಶಸ್ಸು, ಶಿಬಿರಾರ್ಥಿಗಳ ಸಕ್ರಿಯ ತೊಡಗಿಸಿ ಕೊಳ್ಳು ವಿಕೆಯಲ್ಲಿ ಅಡಗಿದೆ. ರಂಗ ಶಿಸ್ತುವೇ ರಂಗ ಶಿಕ್ಷಣದ ಮೊದಲ ಪಾಠ.​ 1. ಶಿಬಿರವು ಈಗಾಗಲೇ ಸಂಸ್ಥೆಯು ಪ್ರಕಟಿಸಿರುವಂತೆ ಉಡುಪಿ ಎಂಜಿಎಂ ಕಾಲೇಜಿನ  ಗೀತಾಂಜಲಿ ಸಭಾಂಗಣದಲ್ಲಿ 2022ರ ಅಕ್ಟೋಬರ್ 22 ಮತ್ತು23 ಶನಿವಾರ-ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 7ರ ತನಕ ನಡೆಯಲಿದೆ. (ಶಿಬಿರದ ನಿರ್ದೇಶಕರು ಬಯಸಿದಲ್ಲಿ ಸಮಯದಲ್ಲಿ ಬದಲಾವಣೆ ಆಗಬಹುದು)

2.) ಅಕ್ಟೋಬರ್ 22 ರ೦ದು ಶಿಬಿರದ ಪ್ರಥಮ ದಿನ ಬೆಳಿಗ್ಗೆ 8.30ಕ್ಕೆ ‌ಹಾಜರಿದ್ದು, ನಿಮ್ಮ ಹೆಸರನ್ನು ಮರು ನೋಂದಾಯಿಸಿ.​ 3). ಪ್ರಥಮ ದಿನ ಬರುವಾಗ ಎರಡು ಪೋಟೋ ( passport size) ಹಾಗೂ ಆಧಾರ್ ಕಾರ್ಡ್ ಪ್ರತಿ ತನ್ನಿ. ಒಂದು ನೋಟ್ ಬುಕ್ ಹಾಗು ಪೆನ್ ನಿಮ್ಮ ಜೊತೆ ಇರಲಿ.​ 4). ದೈ‌ಹಿಕ ಚಲನೆ/ ವ್ಯಾಯಾಮಕ್ಕೆ ಸಹಕಾರಿ ತೊಡುಗೆ ಇರಲಿ. ಬೇರೆಯವರಿಗೆ ಮುಜುಗರವಾಗದಂತೆಯೂ ಇರಲಿ. ಮುಖ ಒರೆಸಿಕೊಳ್ಳಲು ಚಿಕ್ಕ ಟವೆಲ್ ಇದ್ದರೆ ಸಹಕಾರಿ.

5). ಕಾರ್ಯಾಗಾರದ ಎರಡೂ ದಿನಗಳಲ್ಲಿ ಸಂಪೂರ್ಣ ಭಾಗವಹಿಸುವಿಕೆ ಕಡ್ಡಾಯ. ಅಂತವರಿಗೆ ಶಿಬಿರದ ಕೊನೆಯಲ್ಲಿ ಭಾಗವಹಿಸುವಿಕೆಗೆ ಪ್ರಮಾಣ ಪತ್ರ ನೀಡಲಾಗುವುದು. 6). ಶಿಬಿರ ಉಚಿತವಾಗಿರುತ್ತದೆ. ಕೇವಲ ಊಟೋಪಚಾರದ ಬಾಬ್ತು ಪ್ರತ್ಯೇಕ.​ 7.) ಬೆಳಿಗ್ಗಿನ ಉಪಹಾರ,  ಮಧ್ಯಾಹ್ನ ಊಟ ಸಂಜೆ ಲಘು ಉಪಹಾರ, ನೀಡಲಾಗುವುದು.  8.)  ರಾತ್ರಿ ವಸತಿ ವ್ಯವಸ್ಥೆ ಇರುವುದಿಲ್ಲ. ದೂರದ ಶಿಬಿರಾರ್ಥಿಗಳಿಗೆ ವಸತಿ ಬೇಕಾದರೆ, ಮೊದಲೇ ತಿಳಿಸಿದಲ್ಲಿ ವ್ಯವಸ್ಥೆ ಮಾಡಲಾಗುವುದು. ಆದರೆ ಅದರ ವೆಚ್ಚವನ್ನು ಅವರೇ ಬರಿಸಬೇಕು.

9). ಶಿಬಿರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕಾದಲ್ಲಿ​: ​ಪ್ರದೀಪ್ ಚಂದ್ರ ಕುತ್ಪಾಡಿ – 9448952847,​ ಶ್ರೀಪಾದ ಹೆಗಡೆ – 9845118449,​ ​ವಿವೇಕಾನಂದ – 9449367595ಪೂರ್ಣಿಮಾ ಸುರೇಶ್ – 9731812468​, ಆನಂದ ಮೇಲಂಟ – 9886181209​ ಇವರನ್ನು ಸಂಪರ್ಕಿಸಬಹುದು.
​​

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!