ಸಂಗೀತ ನಿರ್ದೇಶಕ ರಾಘವೇಂದ್ರ ಭಟ್ ಅನನ್ಯ ಸಾಧಕರು ~ನೀಲಾವರ ಸುರೇಂದ್ರ ಅಡಿಗ

ಸಂಗೀತ ದಿಗ್ಗಜ ರಾಘವೇಂದ್ರ ಭಟ್ ಅವರಿಗೆ ನುಡಿನಮನ ಹಾಗೂ ರಂಗಸಂಗೀತ ಪ್ರಾತ್ಯಕ್ಷಿಕೆ

ಸಂಗೀತ ನಿರ್ದೇಶಕ ರಾಘವೇಂದ್ರ ಭಟ್ ಅನನ್ಯ ಸಾಧಕರು. ಅಸಂಖ್ಯಾತ ಕಲಾವಿದರನ್ನು ಬೆಳೆಸಿದವರು. ಅವರ ಸಾಧನೆಯನ್ನು ಕಾಪಿಡುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಅಭಿಪ್ರಾಯ ಪಟ್ಟರು.

ಅವರು ಸಂಸ್ಕೃತಿ ವಿಶ್ವ ಪ್ರತಿಷ್ಠಾನ  (ರಿ) ಉಡುಪಿ ಹಾಗೂ ಭರತಾಂಜಲಿ ಉಡುಪಿ ಆಶ್ರಯದಲ್ಲಿ ಡಿಸೆಂಬರ್ 9ರಂದು ಉಡುಪಿಯ ಕಡಿಯಾಳಿ ಯಲ್ಲಿರುವ ಭರತಾಂಜಲಿ ಸಭಾಂಗಣದಲ್ಲಿ ಉಡುಪಿಯ ಹಿರಿಯ ಸಂಗೀತ ನಿರ್ದೇಶಕ ಕೆ. ರಾಘವೇಂದ್ರ ಭಟ್ ಅವರಿಗೆ ನುಡಿನಮನ ಹಾಗೂ ರಂಗ ಸಂಗೀತ ಪ್ರಾತ್ಯಕ್ಷಿಕೆ  ಕಾರ್ಯಕ್ರಮಡಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.  
 
ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಎನ್ ಎಸ್ ಭಟ್ ಅವರು ಇತ್ತೀಚೆಗೆ ನಿಧನರಾದ ಕೆ ರಾಘವೇಂದ್ರ ಭಟ್ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು.  ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರು ಹಾಗೂ ಗೌರವಾಧ್ಯಕ್ಷರಾದ ಯು ವಿಶ್ವನಾಥ್ ಶೆಣಿೈ ಹಾಗೂ ಭರತಾಂಜಲಿ ಉಡುಪಿಯ ನಿರ್ದೇಶಕಿ ರಶ್ಮಿ ವಿಜಯೇಂದ್ರ ಉಪಸ್ಥಿತರಿದ್ದರು.

 ರಂಗಾಯಣ ಮೈಸೂರು ಇದರ ಸಂಗೀತ ನಿರ್ದೇಶಕರಾಗಿದ್ದ ಶ್ರೀನಿವಾಸ್ ಭಟ್ (ಚೀನಿ ) ಅವರು ರಂಗಸಂಗೀತದ ಕುರಿತು ಪ್ರಾತ್ಯಕ್ಷಿಕೆ ನೀಡಿದರು.  ಪ್ರಧಾನ ಕಾರ್ಯದರ್ಶಿ ಗಿರೀಶ್ ತಂತ್ರಿ ಸ್ವಾಗತಿಸಿ ರಾಜೇಶ್ ಭಟ್ ಅವರು ಧನ್ಯವಾದ ನೀಡಿದರು. ರವಿರಾಜ್ ಎಚ್.ಪಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply