ಬಾಳ ಬಾಂದಳದಲ್ಲಿ…ಪೂರ್ಣಿಮಾ ಜನಾರ್ದನ್ ಕೊಡವೂರು

ಬಾಳ ಬಾಂದಳದಲ್ಲಿ…

ಸಂಜೆ ಹೊತ್ತಲಿ ಕಂಗಳು ಸೆರೆಹಿಡಿಯಿತಂದು
ನೀಲ ನಭದಲಿ ಬೆಳ್ ಮುಗಿಲೊಂದಿಗೆ ಕರಿಮೋಡದ ಜೊತೆಯಾಟವನು…
ಸ್ವಲ್ಪ ಹೊತ್ತಲೇ ಸಾಗುತ್ತಿತ್ತು ಬೆಳ್ಳಕ್ಕಿಗಳ ಹಿಂಡು ಬಾಂದಳದ ತುಂಬೆಲ್ಲ ಬಿಡಿಸುತ್ತ ಚಿತ್ತಾರವನು..

ನೋಡ ನೋಡುತ್ತಲೇ ಆಗಸದಲ್ಲಿ ಹಳದಿ,ಕಿತ್ತಳೆ,ಕೆಂಪು ಮಿಶ್ರಿತ ವರ್ಣಮಯ ರಂಗವಲ್ಲಿ..
ಹೊತ್ತುಸಾಗಲು ಚಂದಿರನ ಶುಭ್ರ ಬೆಳದಿಂಗಳ ಅಂದದ ತೋರಣ ಅಂಬರದ ಅಂಗಣದಲ್ಲಿ‌.‌

ಕತ್ತಲು ಕವಿಯಲು ತಾರೆಯರ ಒಡನಾಟದಲ್ಲಿ ಹೊಳೆಯುತ್ತಾ ನಗುತ್ತಲಿತ್ತು ನಭೋ‌ಮಂಡಲ…
ಇದ್ದಕ್ಕಿದ್ದಂತೆ ತಟ್ಟನೆ ಬಂದ ಕೋಲ್ಮಿಂಚು,ಗುಡು ಗುಡು ಗುಡುಗು,ಸಿಡಿಲಿನಾರ್ಭಟಕೆ ಅಂತರಿಕ್ಷ ನಡುಗಿತಲ್ಲ…

ಊಹೆಗೆ ನಿಲುಕದ,ಮನವು ನಿರೀಕ್ಷಿಸದ,ಹೃದಯ ಅಪೇಕ್ಷಿಸದ ವೇದನೆ ದುತ್ತನೆ ಎದುರಾಗುವುದು ಹೀಗೆಯೇ ನಮ್ಮ ಜೀವನದಲ್ಲಿ…
ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಈ ನಶ್ವರ ಬದುಕಿನಲಿರುವಷ್ಟು ದಿನ ಸವಿ ನೆನಪಿನ ತೋರಣ ಕಟ್ಟೋಣ ನಮ್ಮವರ ಮನದಲ್ಲಿ…

ಪೂರ್ಣಿಮಾ ಜನಾರ್ದನ್ ಕೊಡವೂರು, ಲೇಖಕಿ

 

 
 
 
 
 
 
 
 
 
 
 

2 COMMENTS

Leave a Reply