Janardhan Kodavoor/ Team KaravaliXpress
31.6 C
Udupi
Wednesday, December 8, 2021
Sathyanatha Stores Brahmavara

ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮಕ್ಕೆ ಚಾಲನೆ

ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ’ ಕನ್ನಡಕ್ಕಾಗಿ ನಾವು ‘ ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಹಮ್ಮಿಕೊಂಡಿದ್ದ ಮಾತಾಡ್ ಮಾತಾಡ್  ಕನ್ನಡ ಕಾರ್ಯಕ್ರಮವು ಉಡುಪಿಯ ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ಉದ್ಘಾಟನೆಗೊಂಡಿತು.
 ಕಾರ್ಯಕ್ರಮಕ್ಕೆ ಚಾಲನೆಯನ್ನು ಜನಪದ ಪರಿಷತ್ತು ಉಡುಪಿ ಜಿಲ್ಲಾ ಅಧ್ಯಕ್ಷರಾದ ಡಾ ಶಿವರಾಂ ಶೆಟ್ಟಿ ಉದ್ಘಾಟಿಸಿದರು. ಸಮಾರಂಭದಲ್ಲಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಜಗದೀಶ್ ಶೆಟ್ಟಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣಿೈ,  ಯಕ್ಷಗಾನ ಗುರು ಸಂಜೀವ ಸುವರ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಉಪಸ್ಥಿತರಿದ್ದರು. 
ರವಿರಾಜ್ ಹೆಚ್ ಪಿ ಕಾರ್ಯಕ್ರಮ ನಿರ್ವಹಿಸಿದರು.  ಸಭಾ ಕಾರ್ಯಕ್ರಮದ ನಂತರ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಕಲಾವಿದರಿಂದ ಕನ್ನಡ ಗೀತ ಗಾಯನ ಆಶ್ಲೇಷ ಭಟ್ ಅವರಿಂದ ಎಚ್ಚಮ್ಮನಾಯಕ ಹಾಗೂ ಶಿಲ್ಪ ಜೋಶಿಯವರಿಂದ ಏಕವ್ಯಕ್ತಿ ರಂಗಪ್ರಯೋಗ ನನ್ನೊಳಗಿನ ಅವಳು ಕಾರ್ಯಕ್ರಮ ನಡೆಯಿತು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!