ತರಬೇತಿ ಕಾರ್ಯಾಗಾರಗಳು ನಿಜ ಬಣ್ಣವನ್ನು ತೋರ್ಪಡಿಸುವುದರ ಜೊತೆಗೆ ಯಶಸ್ವಿಯಾಗಲಿ~ ಕೆ.ಪಿ.ರಾವ್‌

ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸುವ ಜನಪದ ಸರಣಿ ಕಲಾ ಕಾರ್ಯಾಗಾರವು ಉಡುಪಿಯ ವೆಂಟನಾ ಪೌಂಡೇಶನ್‌ನ ಸಹಯೋಗದಲ್ಲಿ ಪೌಂಡೇಶನ್‌ನ ಟ್ರಸ್ಟಿಗಳಾದ ಶಿಲ್ಪಾ ಭಟ್‌ರವರಿಂದ ಉದ್ಘಾಟನೆಗೊಂಡಿತು. ವೆಂಟನಾ ಸoಸ್ಥೆಯು ಹಲವಾರು ಜನೋಪಯೋಗೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತ ನಮ್ಮಲ್ಲಿನ ಕಲೆ, ಸಂಸ್ಕೃತಿ ಮತ್ತು ದೇಶೀಯ ಕಲಾಪ್ರಕಾರಗಳ ಪ್ರೋತ್ಸಾಹಕ್ಕೆ ಯಾವತ್ತೂ ಸಹಕಾರಿಯಾಗಲಿದೆ ಎಂಬುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಬಹುಶ್ರುತ ವಿದ್ವಾಂಸರಾದ ನಾಡೋಜ ಕೆ.ಪಿ.ರಾವ್‌ರವರು ಪಾರಂಪರಿಕ ಸೊಗಡನ್ನು ಜನಪದ ಕಲೆಗಳು ಕಳೆದುಕೊಳ್ಳುತ್ತ ಮಾರುಕಟ್ಟೆ ಯಲ್ಲಿನ ಸಿಂಥೆಟಿಕ್ ವರ್ಣಗಳ ಬಳಕೆ ಇತ್ಯಾದಿಯಾಗಿ ಕಲೆಯ ಜೀವಾಳವಾಗಿರುವ ಸಪಾಟಾದ ಮೇಲ್ಮಯ  ಗುಣವನ್ನು ತೋರಿಸುವುದರ ಬದಲು ದುಂಡನೆ ಯದಾಗಿಸುವ ವಿಕೃತಿ ಮೆರೆಯುತ್ತಿರುವುದು ನಿಜಕ್ಕೂಶೋಚನೀಯ ಆ ನಿಟ್ಟಿನಲ್ಲಿ ಈ ತೆರನಾದ ತರಬೇತಿ ಕಾರ್ಯಾಗಾರಗಳು ನಿಜ ಬಣ್ಣವನ್ನು ತೋರ್ಪಡಿಸುವುದರ ಜೊತೆಗೆ ಯಶಸ್ವಿಯಾಗಲಿ ಎಂಬುದಾಗಿ ಅಭಿಪ್ರಾಯವಿತ್ತರು.
ಉದ್ಯಮಿಗಳಾದ ಸುಗುಣ ಶಂಕರ್ ಸುವರ್ಣ, ಭಾವನಾ ಪ್ರತಿಷ್ಠಾನದ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್‌ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾರ್ಯಾಗಾರದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆಯವರು ನಿರೂಪಿಸಿದರು. ಈ ಸರಣಿ ಕಾರ್ಯಾಗಾರದ ಭಾಗವಾಗಿ ಬಿಹಾರದ ಕರಕುಶಲ ಕಲೆಯನ್ನು ಈ ಬಾರಿ ಪರಿಚಯಿಸುತ್ತಿದ್ದು, ಮಿಥಿಲಾ ಲೋಕಚಿತ್ರ ವಾದ ಮಧುಬನಿ, ಗೋಧ್ನಾ ಹಾಗೂ ಪೇಪರ್ ಮೆಶ್ ಕಲಾಕೃತಿಗಳನ್ನು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರವಣ್ ಪಾಸ್ವಾನ್, ಉಜಾಲಾ ಕುಮಾರಿ, ಸಂತೋಷ್ ಪಾಸ್ವಾನ್‌ರವರುಗಳು ೨೭ನೇ ಏಪ್ರಿಲ್‌ನಿಂದ ೩೦ನೇ ಏಪ್ರಿಲ್ ತನಕ ದಿನಕ್ಕೊಂದು ಶೈಲಿಯ ಕಲೆಯನ್ನು ರಚಿಸಲು ಇಲ್ಲಿ ಕಲಿಸಿಕೊಡುತ್ತಿದ್ದಾರೆ. ನೈಸರ್ಗಿಕ ವರ್ಣಗಳ ರಚನಾ ಕ್ರಮ, ಅದನ್ನು ಬಳಸುವ ಕ್ರಮ ಹಾಗೂ ಮಧುಬನಿ ಶೈಲಿಯ ಗುಣಗಳನ್ನು ಕಲಿಸಿಕೊಡುತ್ತಾರಲ್ಲದೇ ಸಂಜೆ ಮಧುಬನಿ ಕಲೆಯ ಮಾರಾಟವನ್ನೂ ಹಮ್ಮಿಕೊಳ್ಳಲಾಗಿದೆ.
 
 
 
 
 
 
 
 
 
 
 

Leave a Reply