ಮಣಿಪಾಲದ Kirdar Theater Group ತಂಡ ಪ್ರಥಮ ಬಹುಮಾನ

ಲಾಕ್ ಡೌನ್ ಸಂದರ್ಭ ಅಭಿನಯ ಭಾರತಿ, ಮೂಕ ಟ್ರಸ್ಟ್ ಮತ್ತು ಧಾರವಾಡ ಬಾಂಡ್ಸ್ ಆಯೋಜಿಸಿದ್ದ ಡಿಜಿಟಲ್ ವಿಶ್ವ ಕನ್ನಡ ನಾಟಕ ಸ್ಪರ್ಧೆಯಲ್ಲಿ, ಮಣಿಪಾಲದ Kirdar Theater Group ತಂಡ ಪ್ರಥಮ ಬಹುಮಾನವನ್ನು ಪಡೆದಿದೆ.

ಈ ನಾಟಕ ವಸುಧೇಂದ್ರ ಅವರ ಯುಗಾದಿ ಪುಸ್ತಕದಿಂದ ಆಯ್ದ ಸುಳ್ಳು ನಮ್ಮಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು ಆಧಾರಿತವಾಗಿದೆ. ಇದನ್ನು ನಿರ್ದೇಶಿಸಿದವರು ಮಣಿಪಾಲದ ಜನಪ್ರಿಯ ರಂಗಭೂಮಿ ತಂಡ Kirdar Theater Group ನ ಸ್ಥಾಪಕರಾದ ರೇವತಿ ನಾಡಿಗಿರ್.

ಕಥೆಗೆ ಜೀವ ತುಂಬಿದ ಕಲಾವಿದರು ರೇವತಿ ನಾಡಗೀರ, ಮೈತ್ರಿ ಮಣಿಪಾಲ್,ಅರ್ಜುನ್,ರಕ್ಷಾ ಪೈ, ಸ್ಪೂರ್ತಿ ತೇಜ್, ಮಹೇಶ ಮಲ್ಪೆ, ಪೂರ್ವಿ ನರೇಗಲ್, ವಿಜಯಕೃಷ್ಣ ಆಚಾರ್ಯ. ಸಂಗೀತ ಸಹಾಯಕರು ಅರವಿಂದ್ ನರೇಗಲ್, ಮತ್ತು ತಾಂತ್ರಿಕ ಸಹಾಯಕರು ಶಶಿಕಾಂತ್ ಶೆಟ್ಟಿ ಹಾಗೂ ನಿತೀಶ್ ರಾವ್.

ಪ್ರಥಮ ಬಹುಮಾನವಾಗಿ 9000 ರೂ ನಗದನ್ನು ವಿಜೇತ ತಂಡವು ಪಡೆದಿದ್ದು. ಕೋರೋನ ಸಮಯದಲ್ಲಿ ಡಿಜಿಟಲ್ ಮುಖಾಂತರ ಕಲಾವಿದರನ್ನು ಪ್ರೋತ್ಸಾಹಿಸಿದ ಅಭಿನಯ ಭಾರತಿ, ಮೂಕ ಟ್ರಸ್ಟ್ ಮತ್ತು ಧಾರವಾಡ ಬಾಂಡ್ಸ್ ಅವರ ಪರಿಶ್ರಮ ಮೆಚ್ಚುವಂಥದ್ದು.

 
 
 
 
 
 
 
 
 
 
 

Leave a Reply