Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ

ಉಡುಪಿ :   ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ,ಪರ್ಯಾಯ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪ್ರಾಣಿ,ಪಕ್ಷಿಗಳಿಂದ ಹೋಲಿಸಲ್ಪಡುವ ಮನುಷ್ಯ ತನ್ನ ಬುದ್ಧಿ,ಹೃದಯದಿಂದ ತನ್ನಿಂದ ಇತರರು ಉಪಕರಿಸಲ್ಪಡಬೇಕು ಎಂದು ಯೋಚಿಸಿ ಪಂಚಭೂತಗಳಂತೆ ವರ್ತಿಸಿದಾಗ ಪ್ರಪಂಚ ಉದ್ಧಾರವಾಗುತ್ತದೆ ಎಂದು ಆಶೀರ್ವಚನ ನೀಡಿದರು.

ಅಧ್ಯಕ್ಷರಾಗಿ ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ನನ್ನ ಗುರುಗಳು ವಯಸ್ಸು,ಅವಕಾಶ ಇದ್ದರೂ ತಾನು ಬೆನ್ನಿಗೆ ನಿಂತು ತನ್ನ ಶಿಷ್ಯನಿಂದ ಪರ್ಯಾಯ ಮಾಡಿಸಿ ಲೋಕಕ್ಕೆ ಉತ್ತಮ ಸಂದೇಶ ನೀಡಿ ಅದರಂತೆ ಗೃಹಸ್ಥರೂ ಪ್ರಾಯ ಪ್ರಭುದ್ಧರಾದ ಮಕ್ಕಳಿಂದ ಮನೆಯ ಜವಾಬ್ದಾರಿಯನ್ನು ನೀಡಬೇಕು ಎಂದರು.

ಚಿತ್ರಾಪುರ ಮಠಾಧೀಶರಾದ ಶ್ರೀವಿದ್ಯೇಂದ್ರತೀರ್ಥ ಶ್ರೀಪಾದರು,ವಿಶ್ವ ಅಂದರೆ ಭಗವಂತ,ಅದರಂತೆ ಭಗವಂತನ ಪರ್ಯಾಯ ಪೂಜೆ ಮುಖ್ಯಪ್ರಾಣ ಮೂಲಕ ಶ್ರೀಕೃಷ್ಣನಿಗೆ ಉತ್ತಮ ಕಾರ್ಯಕ್ರಮಗಳ ಮೂಲಕ ಅರ್ಪಿಸುವ ‘ವಿಶ್ವಾರ್ಪಣಂ’ ನಲ್ಲಿ ಭಾಗವಹಿಸಿದ್ದು ಸಂತೋಷವಾಗಿದೆ,ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹರಸಿದರು.

ಅಭ್ಯಾಗತರಾಗಿ ಉಡುಪಿ ಶಾಸಕರಾದ ರಘುಪತಿ ಭಟ್,ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ,ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಕರ್ನಾಟಕ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್ ಪಾಲ್ಗೊಂಡಿದ್ದರು. ಸಮಾಜ ಚಿಂತಕರಾದ ಎಸ್.ಎನ್.ಸೇತುರಾಂ ವಿಶೇಷ ಉಪನ್ಯಾಸ ನೀಡಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ ನಡೆಯಿತು.ಪರ್ಯಾಯ ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು.ಮಠದ ವಿದ್ವಾಂಸ ಕುತ್ಪಾಡಿ ಕೃಷ್ಣರಾಜ ಭಟ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!