“ಆಟಿ…ಒಂಜಿ ನೆಂಪು” ಕಾರ್ಯಕ್ರಮ

ಯುವ ಬಂಟರ ಸಂಘ (ರಿ.) ಕಂಬಳಕಟ್ಟ – ಕೊಡವೂರು ಇದರ “ಆಟಿ…ಒಂಜಿ ನೆಂಪು” ವನಸ್ ತಿನಸ್ – ಪಿರಾಕುದ ಗೊಬ್ಬುಲು ಕಾರ್ಯಕ್ರಮವು ದಿನಾಂಕ:14.08.2022 ರವಿವಾರ ಕಂಬಳಮನೆ ಹಾಗೂ ತೆಂಕುಮನೆ ವಠಾರದಲ್ಲಿ ಜರಗಿತು.

ಮೊದಲಿಗೆ ಶ್ರೀ ಸಿರಿಕುಮಾರ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ನಂತರ ತುಳು ಜಾನಪದ ಶೈಲಿಯಲ್ಲಿ ಉಡುಪಿ ಬಂಟರ ಸಂಘ (ರಿ.) ಇದರ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಶೆಟ್ಟಿ ತೆಂಬರ ಬಾರಿಸಿ, ಶ್ರೀ ಸುರೇಶ್ ಶೆಟ್ಟಿ ಪಾಡ್ದನ ಹಾಡಿ ಆಟಿ…ಒಂಜಿ ನೆಂಪು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಾಸ್ತಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಸಹಶಿಕ್ಷಕಿ ಶ್ರೀಮತಿ ವನಿತಾ ಶೆಟ್ಟಿ, ಚೇರ್ಕಾಡಿ ಇವರು ಆಟಿ ಆಚರಣೆ ಜೊತೆಗೆ ಅದರ ಮೂಲ ಉದ್ದೇಶ ಹಾಗು ಪ್ರಾಶಸ್ತ್ಯ ಅರಿತು ಕೊಳ್ಳಬೇಕು ಎಂದು ನುಡಿದರು ಹಾಗೂ ನಮ್ಮ ಸುತ್ತಮುತ್ತ ಪ್ರಾಕೃತಿಕವಾಗಿ ಸಿಗುವ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳ ಪರಿಚಯ ಹಾಗೂ ಅದರ ಉಪಯೋಗಗಳ ಬಗೆಗಿನ ಉಪಯುಕ್ತ ಮಾಹಿತಿ ನೀಡಿದರು.ಶ್ರೀಯುತರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ನಿವೃತ್ತ ಕಂದಾಯ ಅಧೀಕ್ಷರಾದ ಶ್ರೀ ಆನಂದ ಶೆಟ್ಟಿ, ಶ್ರೀ ಸುರೇಶ್ ಶೆಟ್ಟಿ ಕಂಬಳಕಟ್ಟ,ಸ್ಮಿತಾ.ವಿ. ಶೆಟ್ಟಿ ,ವಿನೋದ ಶೆಟ್ಟಿ ಗರ್ಡೆ ಇವರುಗಳು ಸಾಂಕೇತಿಕವಾಗಿ ಚೆನ್ನಮಣೆ ಆಡುವುದರ ಮೂಲಕ ಅಂದಿನ ಆಟೋಟ ಸ್ಪರ್ಧೆ ಗಳಿಗೆ ಚಾಲನೆ ಕೊಟ್ಟರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ, ಮಜಲುಮನೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಸಮಿತಿ ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಮಂಗಳೂರು ಇದರ ಸಂಚಾಲಕರಾದ ಶ್ರೀ ಜಯರಾಜ್ ಹೆಗ್ಡೆ,ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಉಪಸ್ಥಿತರಿದ್ದರು.

ಸಂಜೆ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಡಯಾನಾ ಆಂಡ್ ಡಾಲ್ ನ ಮಾಲಕ ಶ್ರೀ ಅರುಣ್ ಕುಮಾರ್ ಶೆಟ್ಟಿ ಹಾಗೂ ಹಿರಿಯರಾದ ಜಗನ್ನಾಥ್ ಶೆಟ್ಟಿ ದೊಡ್ಡಮನೆ ಇವರುಗಳು ಬಹುಮಾನ ವಿತರಿಸಿದರು.

ಚೆನ್ನಮಣೆ ,ಪೊಕ್ಕು ,ಮಡಲು ಹೆಣೆಯುವುದು, ಹಿಡಿಸೂಡಿ ಮಾಡುವುದು, ಸೊಪ್ಪಾಟ ,ತೆಂಗಿನ ಕಾಯಿ ಸಿಪ್ಪೆ ತೆಗೆಯುವುದು, ತಪ್ಪಂಗಾಯಿ, ಲಗೋರಿ, ಕೆಸರುಗದ್ದೆ ಓಟ, ಹಗ್ಗಜಗ್ಗಾಟ ಮೊದಲಾದ ಗ್ರಾಮೀಣ ಕ್ರೀಡೆಗಳನ್ನು ಮಕ್ಕಳು ,ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿತ್ತು . ಬಂಟ ಮಹಿಳೆಯರು ಸಿದ್ದ ಪಡಿಸಿದ 30ಕ್ಕೂ ಹೆಚ್ಚು ಆಟಿ ಖಾದ್ಯಗಳನ್ನು ಸಮಾಜಭಾಂದವರಿಗೆ ಉಣಬಡಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಶ್ರೀ ಸಂತೋಷ್ ಶೆಟ್ಟಿ ಪಂಚರತ್ನ, ಅರುಣ್ ಶೆಟ್ಟಿ ಗಂಗೋತ್ರಿ,
ಮೋಹನ್ ಶೆಟ್ಟಿ ಮೂಡನಿಡಂಬೂರು,ಮನೋಹರ್ ಶೆಟ್ಟಿ ತೋನ್ಸೆ,ರಮೇಶ್ ಶೆಟ್ಟಿ ಜಾರ್ಕಳ,ಖಜಾಂಚಿ ರಮೇಶ್ ಶೆಟ್ಟಿ ಮೂಡುಬೆಟ್ಟು,ಜಯಕರ ಶೆಟ್ಟಿ ಅಂಬಲಪಾಡಿ,ಕೃಷ್ಣ ಶೆಟ್ಟಿ ಪಂದುಬೆಟ್ಟು,ಸುಲೋಚನಾ ಶೆಟ್ಟಿ ,ವಿನೋದ ಶೆಟ್ಟಿ ಗರ್ಡೆ ,ಸಂಘ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಗಳು ಉಪಸ್ಥಿತರಿದ್ದರು.

ಕಾರ್ಯದರ್ಶಿ ಶ್ರೀ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ,ಗೌರವಾಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ ಕಂಬಳಕಟ್ಟ ಪ್ರಸ್ತಾವನೆಗೈದರು. ಗೌರವಾಧ್ಯಕ್ಷರಾದ ಶ್ರೀಮತಿ ಸ್ಮಿತಾ ವಿದ್ಯಾಧರ್ ಶೆಟ್ಟಿ ಗರ್ಡೆ ಧನ್ಯವಾದ ಸಮರ್ಪಿಸಿದರು. ಶ್ರೀ ಅಮೃತ್ ಶೆಟ್ಟಿ ಕಂಬಳಕಟ್ಟ ಕಾರ್ಯಕ್ರಮ ನಿರೂಪಿಸಿದರು

 
 
 
 
 
 
 
 
 
 
 

Leave a Reply