ವಲಯದ ವಿಪ್ರ ಮಹಿಳೆಯರಿಗೆ ಆನ್ ಲೈನ್ ನಲ್ಲಿ ಸಾಂಪ್ರದಾಯಿಕ ಅಡುಗೆ ಸ್ಪರ್ಧೆ

ಬ್ರಾಹ್ಮಣ ಮಹಾ ಸಭಾ ಕೊಡವೂರು ತನ್ನ ರಜತ ಮಹೋತ್ಸವದ ಅಂಗವಾಗಿ “ರಜತ ಪಥದಲ್ಲಿ ವಿಪ್ರ ಹೆಜ್ಜೆ” ಸರಣಿಯ 8 ನೆಯ  ಕಾರ್ಯಕ್ರಮವಾಗಿ ವಲಯದ ವಿಪ್ರ ಮಹಿಳೆಯರಿಗೆ ಆನ್ ಲೈನ್ ನಲ್ಲಿ ಸಾಂಪ್ರದಾಯಿಕ ಅಡುಗೆ ಸ್ಪರ್ಧೆ ಏರ್ಪಡಿಸಿದೆ.

ವಲಯದ ವಿಪ್ರ ಮಹಿಳೆಯರು ತಮ್ಮ ತಮ್ಮ‌ಮನೆಯಲ್ಲಿ ತಯಾರಿಸಿದ ಅಡುಗೆಯನ್ನು‌ ಆರು  ನಿಮಿಷದ ಒಳಗಿನ ವಿಡೀಯೋ ಚಿತ್ರೀಕರಣ ಮಾಡಿ  ಅದರ ಕ್ಲಿಪಿಂಗ್ ಗಳನ್ನು ಪ್ರಸನ್ನ ಕೊಡವೂರು  -9449293214 ಇದಕ್ಕೆ ಜುಲೈ 25 ರ ಒಳಗೆ ಕಳುಹಿಸಬೇಕು.

ಸ್ಪರ್ಧೆಯ ನಿಯಮಗಳು : 1. ಒಬ್ಬರು ಒಂದು ವೀಡಿಯೋ ಮಾತ್ರ ಕಳುಹಿಸಬೇಕು. ಅದು Horizontal mode ನಲ್ಲಿ ಚಿತ್ರೀಕರಣ ಮಾಡಿರಬೇಕು. ವೀಡಿಯೋ ಚಿತ್ರೀಕರಣದ ಅವಧಿ ಆರು‌ ನಿಮಿಷ ಮೀರಬಾರದು.
2. ಸಾಂಪ್ರದಾಯಿಕ ಉಡುಪಿ ಶೈಲಿಯ ಅಡುಗೆಗೆ ಪ್ರಾಶಸ್ತ್ಯ.
3. ಅಪೋಜ್ಯ ಪದಾರ್ಥಗಳಾದ ನೀರುಳ್ಳಿ ಬೆಳ್ಳುಳ್ಳಿ ಉಪಯೋಗಿಸುವಂತಿಲ್ಲ.
4. ನೀವು ವೀಡಿಯೋ ಚಿತ್ರೀಕರಣ ಮಾಡುವ ರೀತಿ, ಅದನ್ನು ನೋಡುಗರಿಗೆ ಮನದಟ್ಟಾಗುವಂತೆ ವಿವರಿಸುವ ಶೈಲಿ ಇವೆಲ್ಲವನ್ನೂ ಸ್ಪರ್ಧೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದು.

5. ನೀವು ಉಪಯೋಗಿಸುವ ಪಾತ್ರೆ,ಆಹಾರ ಪದಾರ್ಥಗಳು , ಪರಿಕರಗಳು ಹಾಗು ತಯಾರಿಸಲು ಸಮಯ ಕಡಿಮೆಯಾದಷ್ಟೂ ಒಳ್ಳೆಯದು.
6. ನೀವು ತಯಾರಿಸುವ ಅಡುಗೆ ಸತ್ವ ಭರಿತ, ಶುಚಿ ರುಚಿಯಾಗಿದ್ದು , ಆರೋಗ್ಯಕ್ಕೆ ಪೂರಕವಾಗಿದ್ದಲ್ಲಿ ಅಂತಹ ಆಹಾರ ಪದಾರ್ಥಕ್ಕೆ ಹೆಚ್ಚು ಅಂಕ ಗಳಿಸುವ ಸಾಧ್ಯತೆ.
7. ಅಪರೂಪದ ಅಡುಗೆಯಾಗಿದ್ದು ಸುಲಭ ಸರಳವಾಗಿ ಶುದ್ಧವಾಗಿ ಇದ್ದಲ್ಲಿ ಎಲ್ಲರ ಮನ ಗೆಲ್ಲುವ ಅವಕಾಶ.

8. ತೀರ್ಪುಗಾರರ ನಿರ್ಣಯವೇ ಅಂತಿಮ.
9. ನಿಮ್ಮ ಮನೆಯಲ್ಲಿ ನೀವೇ ಆ ಅಡುಗೆ ತಯಾರಿಸಿದ ವೀಡಿಯೋ ಆಗಿರಬೇಕು.( Horizontal video ಆಗಿರಲಿ)
10. ಈ ಅಡುಗೆ ಸ್ಪರ್ಧೆ ಎರಡು ವಿಭಾಗಗಳಲ್ಲಿ‌ ನಡೆಯಲಿದ್ದು

ಮೊದಲ‌ ವಿಭಾಗದಲ್ಲಿ: • ಪುರಾತನ ಅಡುಗೆ ಪದ್ಧತಿ – ಸಾಂಪ್ರದಾಯಿಕ ಶೈಲಿಯ ಅಡುಗೆಮನೆಯಲ್ಲಿ, ಸಾಂಪ್ರದಾಯಿಕ ಅಡುಗೆ ಪರಿಕರಗಳನ್ನು ಉಪಯೋಗುಸಿ ಮಾತ್ರವಲ್ಲದೇ ಹಳೆಯ ಕಾಲದಲ್ಲಿ ಆಚರಿಸಿಕೊಂಡು ಬರುತ್ತಿದ್ದ ರೀತಿ ರಿವಾಜು,ವಿಧಿ ವಿಧಾನಗಳಿಂದ  ಅಡುಗೆ ತಯಾರಿ  ( using old type kitchen equipments) ಹಾಗೂ

ಎರಡನೇ ವಿಭಾಗದಲ್ಲಿ: •  ಆಧುನಿಕ ಅಡುಗೆ ಪದ್ದತಿ – ಸಮಕಾಲೀನ ನೂತನ ಶೈಲಿಯ ಅಡುಗೆ ಮನೆಯಲ್ಲಿ, ನವೀನ ರೀತಿಯ ಅಡುಗೆ ಪರಿಕರಗಳನ್ನು ಉಪಯೋಗಿಸಿ ( using modern, sophisticated,electrical items)

ಸ್ಪರ್ಧಿಗಳು ತಾವು ಸ್ಪರ್ಧಿಸುವ ವಿಭಾಗವನ್ನು ಸ್ಪಷ್ಟವಾಗಿ ನಮೂದಿಸಬೇಕು. ಬನ್ನಿ ..ಈ ವಿನೂತನ ಸ್ಪರ್ಧೆ ಯಲ್ಲಿ ಭಾಗವಹಿಸಲು ವಯಸ್ಸಿನ ಮಿತಿ ಇಲ್ಲ. ಎಲ್ಲ ಅಡುಗೆ ಪ್ರಿಯರು ಭಾಗವಹಿಸಿ. ಆಕರ್ಷಕ ಬಹುಮಾನ ಗಳಿಸಿ.‌

ಶುಭಾಶಯಗಳೊಂದಿಗೆ: ಶ್ರೀ ಮಂಜುನಾಥ ಭಟ್, ಕಾರ್ಯಾಧ್ಯಕ್ಷರು, ರಜತೋತ್ಸವ ಸಮಿತಿ
ಬ್ರಾಹ್ಮಣ ಮಹಾ ಸಭಾ ಕೊಡವೂರು. +91 95388 99269

 
 
 
 
 
 
 
 
 
 
 

Leave a Reply