ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ (ರಿ) ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಶ್ರೀಯುತ ಪಳ್ಳಿ ರೋಬರ್ಟ್ ಮಿನೇಜಸ್ ಅಯ್ಕೆ

ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ವಾರ್ಷಿಕ ಮಹಾ ಸಭೆಯು ತಾ.27/08/2022 ರಂದು ಉಡುಪಿ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ನಡೆಯಿತು. ಅಂದು ನಡೆದ ವೇದಿಕೆಯ ಚುನಾವಣೆಯ ಪ್ರಕ್ರಿಯೆಯಲ್ಲಿ 2022/24 ರ ಸಾಲಿಗೆ ಅಧ್ಯಕ್ಷರಾಗಿ ಶ್ರೀ ಪಳ್ಳಿ ರೋಬರ್ಟ್ ಮಿನೇಜಸ್ ರವರು ಚುನಾಯಿತರಾದರು. ಪದಾಧಿಕಾರಿಗಳಾಗಿ ಕಾರ್ಯದರ್ಶಿ- ವಿ. ಕಾಸಿಂ ಬಾರ್ಕೂರ್; ಖಜಾಂಚಿ- ಶ್ರೀಮತಿ ಸೆವ್ರಿನ್ ಡೇಸಾ; ಉಪಾಧ್ಯಕ್ಷರಾಗಿ- ಇಸ್ಮಾಯಿಲ್ ಹುಸೇನ್ ಕಟಪಾಡಿ; ಸಹಕಾರ್ಯದರ್ಶಿಯಾಗಿ – ವಿ.ಎಸ್. ಉಮರ್ ಆಯ್ಕೆಯಾದರು. ಅಂತೆಯೇ ಸಲಹೆಗಾರರಾಗಿ: ಸ್ಥಳೀಯ ಧರ್ಮಗುರುಗಳಾದ ಫಾ. ಚಾರ್ಲ್ಸ್ ಮಿನೇಜಸ್; ಬೈಕಾಡಿ ಹುಸೈನ್; ಅಲ್ಫೊನ್ಸ್ ಡಿಕೊಸ್ಟಾ; ಮಲ್ಪೆ ರಶೀದ್; ಜೆರಾಲ್ಡ್ ಪಿಂಟೊ ಹಾಗೂ ನಿಕಟಪೂರ್ವ ಅಧ್ಯಕ್ಷರಾಗಿ ಎಮ್. ಎಸ್. ಖಾನ್ ರವರನ್ನು ಆಯ್ಕೆ ಮಾಡಲಾಯಿತು.

Leave a Reply