ಆದರ್ಶ ಮಹಿಳೆಯರಿಂದ ಆದರ್ಶ ಗ್ರಾಮ.

ಕೊಡವೂರು ವಾರ್ಡ್ ನಲ್ಲಿ ಕೆಮಿಕಲ್ ಮಿಶ್ರಿತ ಆಹಾರ ಸೇವನೆಯಿಂದ 22 ಜನರು ಕ್ಯಾನ್ಸರ್ ನಿಂದ ಬಳಲುತ್ತಿರುವ ಸಂಗತಿ ಇದಕ್ಕೆ ನಾವು ನಮ್ಮ ವ್ಯಾಪ್ತಿಯಲ್ಲಿ ಉತ್ತರ ಕೊಡಬೇಕು ಇದಕ್ಕೆ ಕಾರಣ ಕೆಮಿಕಲ್ ಇರುವ ಫಲವಸ್ತು ತರಕಾರಿ, ಎಣ್ಣೆ ಮತ್ತು ಮಾಂಸ, ಪ್ಲಾಸ್ಟಿಕ್ ಇದರ ವಿರುದ್ಧ ಹೋರಾಟ ಮಾಡಬೇಕು.
ನಮ್ಮ ವಠಾರದ ಎಲ್ಲಾ ಮನೆ ಮನೆಗಳನ್ನು ಜನ ಜಾಗೃತಿ ಮಾಡುವುದರ ಮುಖಾಂತರ ಎಲ್ಲಾ ಮನೆ ಮಕ್ಕಳ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಎಂದು ಮಹಿಳೆಯರು ಕಂಕಣ ಕಟ್ಟಿ ಸಿದ್ಧರಾಗಿದ್ದಾರೆ.ಇದು ಮಾದರಿ ಗ್ರಾಮದ ಲಕ್ಷಣ.

ಕೊಡವೂರು ವಾರ್ಡಿನ ವಾಸುಕಿ ನಗರದಲ್ಲಿ ಮಹಿಳೆಯರು ಉಚಿತ ತರಕಾರಿ ಬೀಜವನ್ನು ಎಲ್ಲಾ ಮನೆಗೆ ಕೊಡಬೇಕು ಪ್ಲಾಸ್ಟಿಕ್ ಚೀಲವನ್ನು ನಿಷೇಧಿಸಿ ಎಲ್ಲಾ ಮನೆಗೆ ಬಟ್ಟೆ ಚೀಲ ಕೊಡಬೇಕು, ಹೆಚ್ಚು ಹಣವನ್ನು ಕೊಟ್ಟು ಹೈನುಗಾರರ ಮನೆಯಿಂದ ಹಾಲು ತಂದು ಹೈನುಗಾರಿಕೆಗೆ ಪ್ರೋತ್ಸಾಹ ನೀಡಿ ಪ್ಲಾಸ್ಟಿಕ್ ಕವರ್ ನ ಹಾಲು ನಿಷೇಧಿಸಬೇಕು, ಕೆಮಿಕಲ್ ಆಹಾರ ಇಂಜೆಕ್ಷನ್ ನಿಂದ ಬೆಳೆಯುವ ಕೋಳಿ ತಿನ್ನುವುದರ ಬದಲು ಮನೆಯಲ್ಲಿ ಸಾಕಿದ ಕೋಳಿಯನ್ನು ತಿಂದು ಕೋಳಿ ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕು.

ಭಜನೆ ತರಬೇತಿ ಕೊಟ್ಟು ಮನೆಯಲ್ಲಿ ನಿತ್ಯ ಭಜನೆಯ ಮುಖಾಂತರ ಸಂಸ್ಕಾರವನ್ನು ಬೆಳೆಸಿ ಧರ್ಮ ರಕ್ಷಣೆಯನ್ನು ಮಾಡಬೇಕು ಎಂದು ಸಂಕಲ್ಪತೊಟ್ಟರು. ಈ ರೀತಿಯ ವಿಚಾರಗಳನ್ನು ನೆನಪು ಮಾಡಿ ಇದಕ್ಕೆ ತಮ್ಮಿಂದ ಆದ ಎಲ್ಲಾ ಪ್ರೋತ್ಸಾಹವನ್ನು ನೀಡುತ್ತೇನೆ ಎಂದು ಹೇಳಿರುವಂತಹ ಈ ಭಾಗದ ನಗರಸಭಾ ಸದಸ್ಯ ವಿಜಯ ಕೊಡವೂರು ಅವರ ಮಾತಿಗೆ ಮಹಿಳೆಯರು ಪ್ರೋತ್ಸಾಹ ನೀಡಿದರು.

ಈ ಮುಖಾಂತರ ನಾವು ಸಮಾಜದ ಜೊತೆಯಲ್ಲಿ ಸಮಾಜಕೊಸ್ಕರ ಬದುಕುತ್ತೇವೆ ಎಂದು ತಿಳಿಸಿದರು.
ಇಂತಹ ವಿಚಾರಗಳನ್ನು ತಿಳಿಸಿದ ನಗರ ಸಭಾ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.

ಈ ಸಂಧರ್ಬದಲ್ಲಿ ಮಹಾಲಕ್ಷ್ಮಿ ಸಂಘದ ಅಧ್ಯಕ್ಷರಾದ ಶುಭ, ಗೌರವಾಧ್ಯಕ್ಷರಾದ ಬೀಬಿ ಮೆಂಡನ್ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply