ಉಡುಪಿ ಸ್ಮರಣಿಕಾ ಮೊಮೆಂಟೋ, ಗಿಫ್ಟ್ ಸೆಂಟರ್: 31ನೇ ವಾರ್ಷಿಕೋತ್ಸವ

ಉಡುಪಿಯಲ್ಲಿ 31 ವರ್ಷಗಳಿಂದ ಮನೆಮಾತಾಗಿರುವ ಸ್ಮರಣಿಕಾ ಮೊಮೆಂಟೋ ಹಾಗೂ ಗಿಫ್ಟ್ ಸೆಂಟರ್ ಇದೀಗ ಸಿಟಿ ಬಸ್ನಿಲ್ದಾಣ ಸಮೀಪದ ಕೆಎಸ್ಸಾರ್ಟಿಸಿ ನರ್ಮ್ ಬಸ್ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಕಾರಾಚರಿಸುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಸಂಸ್ಥೆಯ 31ನೇ ವಾರ್ಷಿಕೋತ್ಸವ ಪ್ರಯುಕ್ತ ಗಿಫ್ಟ್ ವಸ್ತುಗಳ ಪ್ರದರ್ಶನ ಮತ್ತು ಬೃಹತ್ ಮಾರಾಟ ಮೇಳ ಆಯೋಜಿಸಲಾಗಿದೆ.
ಅಪರೂಪದ ಗಿಫ್ಟ್ ಐಟಮ್ಸ್, ನೆನಪಿನ ಕಾಣಿಕೆ, ಮೊಮೆಂಟೋ ಸಹಿತ ಹಲವು ವಿಭಿನ್ನ ರೀತಿಯ ವಿಶಿಷ್ಟ ಉಡುಗೊರೆಗಳನ್ನು ಉಡುಪಿ ಜನತೆಗೆ 31 ವರ್ಷಗಳ ಹಿಂದೆ ಪರಿಚಯಿಸಿದ ಸಂಸ್ಥೆ ಇಂದು ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿದೆ. ಹಳೇಯ ಸಂಪ್ರದಾಯವನ್ನು ಅಳಿಸದೆ, ಹೊಸ ಸಂಪ್ರದಾಯಕ್ಕೆ ಒಗ್ಗಿಕೊಂಡು ಜಿಲ್ಲೆಯ ಜನತೆಯ ಮನ-ಮನೆಗಳಲ್ಲಿನೆಲೆಯೂರಿರುವ ಸ್ಮರಣಿಕಾದ’ನೆನಪಿನ ಕಾಣಿಕೆ’ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ, ಸ್ವದೇಶಿ ನಿರ್ಮಿತ, ಎಲ್ಲ ಧರ್ಮಗಳ ಮೆಮೆಂಟೋಸ್, ಗಿಫ್ಟ್, ಬಂಟಿಂಗ್ಸ್, ಪರಿಸರಸ್ನೇಹಿ ಜೂಟ್ ಬ್ಯಾಗ್ಗಳು ಮೊದಲಾದ ಸಾಮಗ್ರಿಗಳು ರಿಯಾಯಿತಿ ದರದಲ್ಲಿ ಲಭ್ಯವಿವೆ. ಹ್ಯಾಂಡಿಕ್ರಾಫ್ಟ್ ಸ್ಪೋರ್ಟ್ಸ್, ಡೈರಿ, ಗಡಿಯಾರ, ಪೆನ್, ಪರ್ಸ್, ಕೀ ಚೈನು ಮೊದಲಾದ ವಸ್ತುಗಳ ಅಪಾರ ಸಂಗ್ರಹವಿದೆ. 
ಶೇ.31 ವಿಶೇಷ ರಿಯಾಯಿತಿ
ಸಂಸ್ಥೆಯ 31ನೇ ವಾರ್ಷಿಕೋತ್ಸವ ಪ್ರಯುಕ್ತ ಆ.15ರಿಂದ 25ರ ವರೆಗೆ ಆಯ್ದ ಗಿಫ್ಟ್ ಐಟಂಗಳ ಮೇಲೆ ಶೇ.31ರ ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಸಂಸ್ಥೆಯ ಪ್ರವರ್ತಕ ದಿವಾಕರ್ ಸನಿಲ್ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply