ದ್ರಶ್ಯ ಮಾಧ್ಯಮ ಪ್ರಬಲವಾಗಿ ಬೆಳೆಯುತ್ತಿದೆ~ಪ್ರಕಾಶ್ ಜಿ ಕೊಡವೂರು 

ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ದೃಶ್ಯ ಮಾಧ್ಯಮ ಅತ್ಯಂತ ಪ್ರಬಲವಾಗಿ ಬೆಳೆಯುತ್ತಿದೆ. ಏನಾದರೂ ಘಟನೆ ನಡೆದ ನಿಮಿಷ ಮಾತ್ರದಲ್ಲಿ  ಎಲ್ಲರ ಮೊಬೈಲ್ ನಲ್ಲಿ ಆ ದೃಶ್ಯ ವೀಕ್ಷಣೆಗೆ ಸಿಗುತ್ತದೆ ಎಂದು ಕೊಡವೂರು ಶ್ರೀಶಂಕರಣರಾಯಣ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಹೇಳಿದರು.
ಅವರು ಕೊಡವೂರು ದೇವಳದ ವಸಂತ ಮಂಟಪದಲ್ಲಿ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಷಿಯೇಶನ್ ಉಡುಪಿ ವಲಯ ಆಯೋಜಿಸಿದ್ದವಿಡಿಯೋ ಕ್ಯಾಮೆರಾ ಕಾರ್ಯಾಗಾರ‘ ದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.   
ಎಸ್ ಕೆಪಿಎ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಮಾತನಾಡಿ ಇಂದಿನ ತಂತ್ರಜ್ಞಾನ ಯುಗದಲ್ಲಿ ಹೊಸ ಹೊಸ ಆವಿಷ್ಕಾರಗಳು ದಿನಕೊಂದರಂತೆ ಬರುತ್ತಿದೆ. ಅಷ್ಟೇ ವೇಗದಲ್ಲಿ ವೃತ್ತಿಪರ ಛಾಯಾಗ್ರಾಹಕರು  ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು . ವಲಯಗಳು ಇಂತಹ ಉಚಿತ ಕಾರ್ಯಾಗಾರವನ್ನು ಮಾಡುವಾಗ ನಾವೆಲ್ಲ ಭಾಗವಹಿಸಿ, ನಾವು ಬೆಳೆಯಬೇಕು ಎಂದು ಕರೆ ಇತ್ತರು. 
ಈ ಸಂದರ್ಭದಲ್ಲಿ ವಲಯ  ಗೌರವಾಧ್ಯಕ್ಷ  ಶಿವ ಕೆ. ಅಮೀನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ, ಕಾರ್ಯಾಗಾರ ನಡೆಸಿಕೊಟ್ಟ ತಜ್ಞರಾದ ಅನಿಲ್ ಲಕ್ಷ್ಮಣ್, ಪ್ರದೀಪ್ ಅಡಿಗ, ಸೌಂಡ್ ಇಂಜಿನಿಯರ್ ಉಮೇಶ್ ಪ್ರಭು ಉಪಸ್ಥಿತರಿದ್ದರು. 
ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು ನಿರೂಪಿಸಿದರು. . ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್ ಸ್ವಾಗತಿಸಿದರು. ಕಾರ್ಯದರ್ಶಿ ಸುಕೇಶ್ ಅಮೀನ್ ಧನ್ಯವಾದವಿತ್ತರು. ಸುಮಾರು 60 ಶಿಭಿರಾರ್ಥಿಗಳು ಕಾರ್ಯಾಗಾರದ ಸದುಪಯೋಗವನ್ನು ಪಡೆದರು. ಸುಂದರ್ ಉಡುಪಿ ಕೊಳಲು ವಾದನದ ಮೂಲಕ ದೇವರನ್ನು ಪ್ರಾರ್ಥಿಸಿದರು. 

     

  
 
 
 
 
 
 
 
 
 
 
 

Leave a Reply