ಪ್ರತಿಯೊಬ್ಬ ಛಾಯಾಚಿತ್ರಗ್ರಾಹಕನೂ ಒಬ್ಬ ಕಲಾವಿದ ~ ಜನಾರ್ದನ್ ಕೊಡವೂರು

ಪ್ರತಿಯೊಬ್ಬ ಛಾಯಾಚಿತ್ರಗ್ರಾಹಕನಲ್ಲಿ ಒಬ್ಬ ಕಲಾವಿದನಿದ್ದಾನೆ. ಹೊಸ ಹೊಸ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಂಡಾಗ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಸಾಗಬಹುದು ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯಾಧ್ಯಕ್ಷ ಜನಾರ್ದನ ಕೊಡವೂರು ಅಭಿಪ್ರಾಯಪಟ್ಟರು.

ಇಂದು ಉಡುಪಿಯ ಹೋಟೆಲ್ ಚಿತಾರದಲ್ಲಿ ನಡೆದ ಸೋನಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸೋನಿ ಏರಿಯಾ ಮ್ಯಾನೇಜರ್ ನಿತಿನ್ ಕುಮಾರ್, ಅಲ್ಫಾ ತಜ್ಞ ಸತೀಶ್, ವಿತರಕ ವಸಂತ್ ಕಾಮತ್, ವಿ.ಎನ್. ಕಾಮತ್, ಛಾಯಾ ಕಾರ್ಯದರ್ಶಿ ಸಂದೀಪ್ ಕಾಮತ್, ಕಾರ್ಯಕ್ರಮ ಸಂಚಾಲಕ ಸಂತೋಷ್ ಕೊರಂಗ್ರಪಾಡಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಪ್ರವೀಣ್ ಕೊರೆಯ ಸ್ವಾಗತಿಸಿದರು. ಕೋಶಾಧಿಕಾರಿ ದಿವಾಕರ ಹಿರಿಯಡ್ಕ ಧನ್ಯವಾದವಿತ್ತರು. ರಾಘವೇಂದ್ರ ಶೇರಿಗಾರ್ ನಿರೂಪಿಸಿದರು.

Leave a Reply