ರೋಟರಿ‌ ಜಿಲ್ಲೆ 3182 ಜಿಲ್ಲಾ ಗವರ್ನರ್ ಪದ ಪ್ರದಾನ ಸಮಾರಂಭ

ರೋಟರಿ ಜಿಲ್ಲೆ 3182 ಇದರ ನೂತನ  ಜಿಲ್ಲಾ ಗವರ್ನರ್ ಆಗಿ ರೊ. ಡಾ. ಜಯಗೌರಿ ಹಡಿಗಾಲ್ ಇವರು ಅಧಿಕಾರ ಸ್ವೀಕರಿಸಲಿದ್ದು ಜುಲೈ 1, ಶುಕ್ರವಾರ ಸಂಜೆ ಗಂಟೆ 5.30ಕ್ಕೆ ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ  ಪದಪ್ರದಾನ ಸಮಾರಂಭ ನಡೆಯಲಿದೆ. 

ಪದ ಪ್ರದಾನ ಅಧಿಕಾರಿಯಾಗಿ 2005-  2006ರ ರೋಟರಿ ಜಿಲ್ಲಾ ಗವರ್ನರ್ ರೊ.ಲಕ್ಷ್ಮೀನಾರಾಯಣ ಎಮ್ ರವರು ಭಾಗವಹಿಸಲಿದ್ದಾರೆ.  ಅಂತರಾಷ್ಟ್ರೀಯ ರೋಟರಿ ಅಧ್ಯಕ್ಷೆ ರೋ. ಜೆನಿಫರ್  ಜೋನ್ಸ್ ರವರು ರೋಟರಿಯನ್ನು ಕಲ್ಪಿಸಿಕೊಳ್ಳಿ ಎಂಬ ಸಂದೇಶ ನೀಡಿದ್ದು ರೊಟರಾಕ್ಟ್  ಜಿಲ್ಲಾ ಪ್ರತಿನಿಧಿ ರೊಟರಾಕ್ಟರ್ ಮಹಾಲಸ ಕಿಣಿಯವರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply