ರೋಟರಿ ಮಣಿಪಾಲ ಹಿಲ್ಸ್ ಪದಗ್ರಹಣ ಸಮಾರಂಭ

ರೋಟರಿ ಮಣಿಪಾಲ ಹಿಲ್ಸ್ ಇದರ  ಪದಗ್ರಹಣ ಸಮಾರಂಭವು MGM ಕಾಲೇಜು ಆವರಣದ ನ್ಯೂ ರವೀಂದ್ರ ಮಂಟಪದಲ್ಲಿ ಜರುಗಿತು. ಪದಾಪ್ರಧಾನ  ಅಧಿಕಾರಿಗಳಾಗಿ ಮಣಿಪಾಲ ರೋಟರಿ ಕ್ಲಬ್ ಸದಸ್ಯೆ ಹಾಗೂ ಸೋನಿಯಾ ಹಾಸ್ಪಿಟಲ್ ನ ಹಿರಿಯ ಪೀಡಿಯಾಟ್ರೀಷನ್ ಡಾ. ಗಿರಿಜಾ ಇವರು ನೆರವೇರಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷೆ ಸವಿತಾ ಭಟ್ ಅವರು  ಹಿರಿಯ ರೋಟರಿಯನ್ ಗಳ  ಸಹಕಾರ ದೊಂದಿಗೆ ಉತ್ತಮ ವರ್ಷವನ್ನಾಗಿ ಮಾಡುವ ಭರವಸೆ ನೀಡಿ ತಮ್ಮ ವರ್ಷದ ಡೈರೆಕ್ಟರ್ಸ್, ಛೇರ್ಮನ್ ಗಳನ್ನು ಸಭೆಗೆ  ಪರಿಚಯಿಸಿದರು.

ಅಸಿಸ್ಟೆಂಟ್ ಗವರ್ನರ್  ರೊ। ರಾಮಚಂದ್ರ ಉಪಾಧ್ಯಯರು ಈ ವರ್ಷದ  ಡಿಸ್ಟ್ರಿಕ್ ಪ್ರಾಜೆಕ್ಟ್ ಗಳನ್ನು ಹಾಗೂ ರೋಟರಿ ಗವರ್ನರ್ ಅವರ ಸಂದೇಶ ಮತ್ತು ಮುಂಬರುವ ದಿನ ಕ್ಲಬ್ ಗಳು ಹೇಗೆ ಸಂಘಟಿತವಾಗಿ ಕೆಲಸ ಮಾಡ ಬೇಕು ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು.

ಝೋನಲ್ ಲೆಫ್ಟ್ಹಿನೆಂಟ್ ರೊ।  ಬಾಲಕೃಷ್ಣ ಕುಮಾರ್ ಉಪಸ್ಥಿತರಿದ್ದರು. ನಿರ್ಗಮನ ಅಧ್ಯಕ್ಷ ರೊ। ವಿಠಲ್ ದಾಸ್ ಭಟ್ ಸ್ವಾಗತಿಸಿ, ಗತ ಸಾಲಿನ ವಿವಿಧ ಕಾರ್ಯಕ್ರಮಗಲ್ಲ ಬಗ್ಗೆ ಮಾಹಿತಿ ನೀಡಿದರು. ವಿವಿಧ ಕ್ಲಬ್ ಗಳ ಪದಾಧಿಕಾರಿಗಳು, ಅತಿಥಿಗಳು ಹಾಜರಿದ್ದರು.  ರೊ। ನಾರಾಯಣ ಭಟ್ ನಿರೂಪಿಸಿದರು. ಕಾರ್ಯದರ್ಶಿ ವಂದನಾ ರಾವ್ ಧನ್ಯವಾದವಿತ್ತರು 

 
 
 
 
 
 
 
 
 
 
 

Leave a Reply