Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಲಯನ್ಸ್ ಕ್ಲಬ್ ಉಡುಪಿ ಸೌತ್ ವತಿಯಿಂದ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಅಭಿನಂದನೆ 

ಲಯನ್ಸ್ ಕ್ಲಬ್ ಉಡುಪಿ ಸೌತ್ ವತಿಯಿಂದ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಆಗರಿ ಭಾಸ್ಕರ ರಾವ್( ಯಕ್ಷಗಾನ) ಸುಧಾ ಆಡುಕಳ(ಸಾಹಿತ್ಯ) ಡಾ ಸಂದೀಪ್ ಕುಮಾರ್ (ವೈದ್ಯಕೀಯ) ಮತ್ತು ಮೇಜರ್ ಡಾ ಪ್ರಕಾಶ್ ರಾವ್( ಎನ್ ಸಿ ಸಿ) ರವರನ್ನು ಸನ್ಮಾನಿಸುವ ಕಾರ್ಯಕ್ರಮವು ಉಡುಪಿಯಲ್ಲಿ ಜರುಗಿತು. ಹಿರಿಯಡ್ಕ ಸರಕಾರಿ ಪ ಪೂ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್ ಸಾಧಕರನ್ನು ಗೌರವಿಸಿದರು.

ರಾಷ್ಟೀಯಾ ಏಕತಾ ಸಪ್ತಾಹದ ಅಂಗವಾಗಿ ಐಕ್ಯತಾ ಪ್ರತಿಜ್ಞೆಯನ್ನು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಗಣೇಶ್ ಸುವರ್ಣ ಬೋಧಿಸಿದರು.ಕ್ಲಬ್ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ಜಯ ಗಳಿಸಿದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಲಯನ್ಸ್ ವಲಯಾಧ್ಯಕ್ಷ  ಹರೀಶ್ ಪೂಜಾರಿ, ಕ್ಲಬ್ ಕಾರ್ಯದರ್ಶಿ ಶಾಲಿನಿ ಬಂಗೇರ, ಖಜಾಂಜಿ ವಿಜಯ ಬಾಯರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕ್ಲಬ್ ಅಧ್ಯಕ್ಷೆ ವೀಣಾ ಬಾಯರಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಗೈದರು. ಸತ್ಯನಾರಾಯಣ ರಾವ್, ಲತಾ ಶೇಟ್, ಹೇಮರಾಜ್ ಅಮೀನ್ ಸನ್ಮಾನಿತರ ಅಭಿನಂದನಾ ಪತ್ರ ವಾಚಿಸಿದರು.ಪ್ರೋ ವೇಣುಗೋಪಾಲ ಮುಳ್ಳೇರಿಯಾ ಕಾರ್ಯಕ್ರಮ ನಿರೂಪಿಸಿದರು. 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!