Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ವಿಶಿಷ್ಟವಾಗಿ ದೀಪಾವಳಿ ಹಬ್ಬ ಆಚರಣಿ ಸೇವಾ ಚಟುವಟಿಕೆಯ ಮೂಲಕ ಮಾದರಿಯಾದ ಕಾಯ೯

ಉಡುಪಿ :​ ​ಹೋಂ ಡಾಕ್ಟರ್ ಫೌಂಡೇಶನ್(ರಿ.) ಇದರ ವತಿಯಿಂದ ​ಮಂಗಳವಾರದಂದು ಕೊಳಲಗಿರಿ ಸಂತೆ ಮಾರುಕಟ್ಟೆ ಆವರಣ ದಲ್ಲಿ ವಿಶಿಷ್ಟವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.​ ಈ ಕಾಯ೯ಕ್ರಮದಲ್ಲಿ ಸುಮಾರು 10 ರೋಗಿಗಳಿಗೆ  ಸಹಾಯಧನ, ವಿದ್ಯಾಥಿ೯ಗಳಿಗೆ ವಿದ್ಯಾಥಿ೯ ವೇತನ 2 ಕುಟುoಬಗಳಿಗೆ ಸಿಲಿಂಗ್‌ ಪ್ಯಾನ್ ಕೊಡುಗೆ, ಸೇರಿದಂತೆ ಅನೇಕ ರೀತಿಯ ಸೇವಾ ಯೋಜನೆ ನೆರವೇರಿಸಲಾಯಿತು. 
 
ವಿಶೇಷ ಆಕಷ೯ಣೆಯಾಗಿ ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘ ಮಂಗಳೂರು ವತಿಯಿಂದ  ಸುಗಮ ಸಂಗೀತ ಕಾಯ೯ಕ್ರಮ ನಡೆಯಿತು​. ​ ಈ ಸಂದಭ೯ದಲ್ಲಿ ಕಲಾವಿದರನ್ನು ಧನ ಸಹಾಯದೊಂದಿಗೆ ಗೌರವಿಸಲಾಯಿತು.​ ಸಭಾ ಕಾಯ೯ ಕ್ರಮದಲ್ಲಿ ಸಂಸ್ಥೆಯ ಪ್ರಮುಖರಾದ ಡಾ|| ಶಶಿಕಿರಣ್ ಶೆಟ್ಟಿ ಪ್ರಸ್ತಾವನೆಗೈದು ಸಂಸ್ಥೆಯ ಚಟುವಟಿಕೆಯ ಕುರಿತು ಮಾಹಿತಿ ನೀಡಿದರು.​ 
 
ಹಿರಿಯರಾದ ಸೋಮ ಪೂಜಾರಿ, ನಿವೃತ್ತ ಶಿಕ್ಷಕಿ ಶಶಿಕಲಾ ಶೆಟ್ಟಿ, ಹಿಂದೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಇಂದು ಸಂಸ್ಥೆಯ ನೆರವಿನಿಂದ ಸಮಾಜದಲ್ಲಿ ಉತ್ತಮ ಜೀವನ ಸಾಗಿಸುತ್ತಿರುವ ಸರೋಜಮ್ಮ, ಹಿರಿಯ ಸೂಲಗಿತ್ತಿ ಸಂಸ್ಥೆಯ ಮೂಲಕ ಆಶ್ರಯ ಪಡೆದ ಸುಂದರಿ ವೇದಿಕೆಯಲ್ಲಿದ್ದರು.
ಕೈಯನ್ನು ಕಳೆದುಕೊಂಡರೂ ದೃತಿಗೆಡದೆ, ಸಂಸ್ಥೆಯ ನೆರವು ಪಡೆದು  ಕೃತಕ ಕೈ ಜೊಡಿಸಿಕೊಂಡ ಅಜಿತ್ ಶೆಟ್ಟಿ, ನಟರಾಜ್ ಪೇತ್ರಿ, ಹಿರಿಯ ಕ್ರೀಡಾಪಟು ಸವಿತಾ ಶೆಟ್ಟಿ, ಗಣಿIಶ್ ರವರನ್ನು ಗೌರವಿಸಲಾಯಿತು. 
ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಡಾ” ಸುಮಾ ಶೆಟ್ಟಿ ಸೇರಿದಂತೆ ಸದಸ್ಯರು ಭಾಗ ಹಿಸಿದರು.ವಿಜೇತ ವಿಶೇಷ ಶಾಲೆಯ ಮಕ್ಕಳು ತಯಾರಿಸಿದ ದೀಪ ಹಚ್ಚಿ ಸಮೂಹಿಕವಾಗಿ ದೀಪಾವಳಿ ನಡೆಸಲಾಯಿತು.​ ರಾಘವೇಂದ್ರ ಪ್ರಭು​ ​ಕವಾ೯ಲು ನಿರೂಪಿಸಿ ದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!