ನಾಯಿ ಮುದ್ದಿಸಲು ಹೋಗಿ ಬಿದ್ದು ಮೂಳೆ ಮುರಿಸಿಕೊಂಡ ಅಮೆರಿಕ ನಿಯೋಜಿತ ಅಧ್ಯಕ್ಷ ಬೈಡೆನ್!

 ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಶ್ವಾನ ಪ್ರಿಯರಾಗಿರುದ್ದು, ಶ್ವಾನ ಮುದ್ದಿಸಲು ಹೋಗಿ ಕಾಲಿನ ಮೂಳೆ ಮುರಿದು ಕೊಂಡಿದ್ದಾರೆ. ಅವರು ತಮ್ಮ ಸಾಕುನಾಯಿ ಜೊತೆ ಆಟವಾಡುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಸಿಟಿ ಸ್ಕ್ಯಾನ್ ಪರಿಶೀಲಿಸಿದಾಗ ಕಾಲಿನ ಮೂಳೆಯಲ್ಲಿ ಸಣ್ಣದಾಗಿ ಮುರಿತವಾಗಿರುವುದು ತಿಳಿದು ಬಂದಿದೆ.

ಸದ್ಯ ಹಲವು ವಾರಗಳವರೆಗೆ ವಾಕಿಂಗ್ ಬೂಟ್ ಎಂದು ವೈದ್ಯರು ಸಲಹೆ ಮಾಡಿದ್ದಾರೆ. ಈ ಮಧ್ಯೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವೈದ್ಯ ಕೆವಿನ್ ಒ ಕಾನರ್, ಜೋ ಬೈಡೆನ್ ಅವರಿಗೆ ನಾಯಿಗಳೆಂದರೆ ಪ್ರೀತಿ. ಅವರ ಬಳಿ ಜರ್ಮನ್ ಶೆಫರ್ಡ್ ನಾಯಿಗಳಿವೆ. ಈ ನಾಯಿಯೊಂದಿಗೆ ಆಟವಾಡುವಾಗ ಅವರ ಕಾಲಿನ ಪಾದ ಟ್ವಿಸ್ಟ್ ಆಗಿದ್ದು, ಹಲವು ವಾರಗಳವರೆಗೆ ವಾಕಿಂಗ್ ಬೂಟ್ ಅಗತ್ಯವಿದೆ ಎಂದು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply