ಪ್ರಪಂಚದ ಯಾವ ಕಡೆ ಹೋದರೂ ಶಿಕ್ಷಕರಿಗೆ ಅವರ ವಿದ್ಯಾರ್ಥಿಗಳು ಕಾಣ ಸಿಗುತ್ತಾರೆ~ ಮುರಳಿ ಕಡೆಕಾರ್

ಬ್ರಾಹ್ಮಣ ಮಹಾ ಸಭಾ ಕೊಡವೂರು~ಶಿಕ್ಷಕರ ದಿನಾಚರಣೆ:
ವಿದ್ಯಾಭ್ಯಾಸದೊಂದಿಗೆ ಮಕ್ಕಳಲ್ಲಿ ಹವ್ಯಾಸವನ್ನು ಬೆಳೆಸಿದಾಗ ಮಾತ್ರ. ವಿದ್ಯಾರ್ಥಿಗಳ ಜೀವನದಲ್ಲಿ ಯಶಸ್ಸು ಸಾಧ್ಯ. ಪಠ್ಯ ಪುಸ್ತಕದ ವಿಷಯಗಳನ್ನು ಕಲಿಯುವುದಷ್ಟೇ ಶಿಕ್ಷಣವಲ್ಲ, ಬದುಕಿನಲ್ಲಿ ಸಂತಸಕ್ಕೆ ಕಾರಣವಾಗುವ ಇತರ ಪಠ್ಯೇತರ ವಿಷಯಗಳಲ್ಲೂ ಮಕ್ಕಳು ತೊಡಗಿಸಿಕೊಳ್ಳುವಂತೆ ಮಾಡುವುದು ಹೆತ್ತವರ ಹಾಗು ಶಿಕ್ಷಕರ ಜವಾಬ್ದಾರಿ ಎಂದು ನಿಟ್ಟೂರು ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಮುರಳಿ ಕಡೆಕಾರ್ ಅಭಿಪ್ರಾಯ ಪಟ್ಟರು.

ಬ್ರಾಹ್ಮಣ ಮಹಾ ಸಭಾ ಕೊಡವೂರು ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಪಂಚದ ಯಾವ ಕಡೆ ಹೋದರೂ ಶಿಕ್ಷಕರಿಗೆ ಅವರ ವಿದ್ಯಾರ್ಥಿಗಳು ಕಾಣ ಸಿಗುತ್ತಾರೆ,ಅದುವೇ ಅವರ ಬಹು ದೊಡ್ಡ ಆಸ್ತಿ ಎಂದರು. ಆದಿ ಉಡುಪಿ ಶಾಲಾ ನಿವೃತ್ತ ಶಿಕ್ಷಕಿ ಜಯಲಕ್ಷ್ಮಿ ಎಸ್ ವಿ ,ಕೊಡಂಕೂರು ಹಾಗು ಹೆಬ್ರಿ ಶಾಲಾ ಶಿಕ್ಷಕಿ ಶುಭ ಶ್ರೀ ಬಲ್ಲಾಳ್ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.

ಕೊಡವೂರು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಶ್ರೀಧರ ಶರ್ಮ ಉಪಸ್ಥಿತಿತರಿದ್ದರು. ಭಾರತಿ ಸುಬ್ರಹ್ಮಣ್ಯ ಪ್ರಾರ್ಥಿಸಿ,ಪೂರ್ವಿ ರಾವ್ ಅತಿಥಿಗಳನ್ನು ಪರಿಚಯಿಸಿದರು. ಅಶ್ವಿನಿ ಶ್ರೀನಿವಾಸ ಆಗಮಿಸಿದ್ದ ಶಿಕ್ಷಕರ ಪಟ್ಟಿ ವಾಚಿಸಿದರು.ಶ್ರುತಿ ರಾಘವೇಂದ್ರ ರಾವ್ ಹಾಗು ಮಲ್ಲಿಕಾ ಶ್ರೀಶ ಬಲ್ಲಾಳ್ ಸನ್ಮಾನ‌ಪತ್ರ ವಾಚಿಸಿದರು.ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ ಧನ್ಯವಾದ ನೀಡಿದರು.ಕಲ್ಪನಾ ಅನಂತಭಟ್ ನಿರೂಪಿಸಿದರು.

Leave a Reply