ಲೋಕ ಕಲ್ಯಾಣಾರ್ಥವಾಗಿ ~“ಶ್ರೀನಿವಾಸ ಕಲ್ಯಾಣೋತ್ಸವ” 

43ನೇ ರಾಜ್ಯ ಮಟ್ಟದ ಬೃಹತ್‌ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶ
ಉಡುಪಿ : ಉಡುಪಿ ಜಿಲ್ಲಾ ಹಾಗೂ ತಾಲ್ಲೂಕು ಬ್ರಾಹ್ಮಣ ಮಹಾ ಸಭಾ (ರಿ), ಮಥುರಾ ಜಯಕೃಷ್ಣ ಕಲಾಭವನ, ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ (ರಿ.), ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ (ರಿ.), ಸಪ್ತಪದಿ ಫೌಂಡೇಷನ್‌ ಟ್ರಸ್ಟ್‌ (ರಿ), ಮೈಸೂರು / ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಲೋಕ ಕಲ್ಯಾಣ ಹಾಗೂ ವಧು-ವರರಿಗೆ ಶೀಘ್ರಮೇವ ಕಲ್ಕಾಣ ಪ್ರಾಪ್ತಿಗಾಗಿ 10.12.22ನೇ ಶನಿವಾರ ಬೆಳಿಗ್ಗೆ 8.00 ರಿಂದ ಮಧ್ಯಾಹ್ನ 2.00ರವರೆಗೆ ವಧು-ವರ ಸಮಾವೇಶ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 7ರವರೆಗೆ ಕಾರ್ಯಕ್ರಮ ಉದ್ಭಾಟನೆ ಹಾಗೂ “ಶ್ರೀನಿವಾಸ ಕಲ್ಯಾಣೋತ್ಸವ”.
೧೧12.22ರ ಭಾನುವಾರ ಬೆಳಿಗ್ಗೆ 9.00 ರಿ೦ದ ಸಂಜೆ 5.00ರವರೆಗೆ “ವಧು-ವರಾನ್ವೇಷಣಾ ಸಮಾವೇಶ” ಎರಡು ದಿನಗಳ 43ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶವನ್ನು ನಗರದ ಶ್ರೀ ಮಥುರಾ ಜಯಕೃಷ್ಣ ಕಲಾಭವನ, ಶ್ರೀ ಕೃಷ್ಣಮಠ ಪಾರ್ಕಿಂಗ್‌ ಏರಿಯ, ಬೈಲಕೆರೆ, ಉಡುಪಿಯಲ್ಲಿ ಆಯೋಜಿಸಲಾಗಿದೆ. ಹೆಣ್ಣು ಮಕ್ಕಳಿಗೆ ಹಾಗೂ ವಿಕಲಚೇತನರಿಗೆ ಉಚಿತ ನೊಂದಣಿ ಹಾಗೂ ಪ್ರವೇಶ.
ಸಮಾವೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಯೋಧರು, ರೈತರು ಹಾಗೂ ಹಿರಿಯ ವಿಪ್ರ ಮುಖಂಡರುಗಳನ್ನು ಸನ್ಮಾನಿಸಲಾಗುವುದು. ಎಲ್ಲಾ ವಿದ್ಯಾರ್ಹತೆಯುಳ್ಳ ತ್ರಿಮತಸ್ಥ ಬ್ರಾಹ್ಮಣ ವಧು-ವರರು ಪರಮಾತ್ಮನ ಸಂಕಲ್ಪದೊಂದಿಗೆ (ಜನದಟ್ಟನೆ ತಡೆಯುವ ಉದ್ದೇಶದಿಂದ) ಉಡುಪಿ ಸುತ್ತಮುತ್ತಲಿನ ಆಸಕ್ತ ವಧು-ವರರು ದಿನಾಂಕ 4-12-22 ರಿಂದ 9-12-22ರೊಳಗೆ 2 ಪೋಸ್ಟ್‌ ಕಾರ್ಡ್‌ ಸೈಜ್‌ ಫೋಟೋ, 2 ಬಯೋಡೇಟಾ, 2 ಜಾತಕದೊಂದಿಗೆ ನೊಂದಾಯಿಸಿ ಕೊಳ್ಳಲು ಕೋರಲಾಗಿದೆ.
ಮಾನ್ಯ ವಿಪ್ರ ಬಾಂಧವರು ಈ ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗಪಡಿಸಿ ಕೊಳ್ಳ ಬೇಕೇಂದು ಉಡುಪಿ ಜಿಲ್ಲಾ ಬ್ರಾಹ್ಮಣ ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವೈ. ಸುಧಾಕರ್ ಭಟ್‌, ತಾಲೂಕು ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ನಗರಸಭಾ ಸದಸ್ಯರಾದ ಅಮೃತ ಕೃಷ್ಣಮೂರ್ತಿ ಆಚಾರ್ಯ,  ತುಷಿಮಾಮ ಅಧ್ಯಕ್ಷ ರವಿಪ್ರಕಾಶ್‌ ಭಟ್,  ಕಾರ್ಯದರ್ಶಿ ಜಯರಾಮ ಆಚಾರ್ಯ, ಯುವ  ಬ್ರಾಹ್ಮಣ ಪರಿಷತ್ ಗೌರವಾಧ್ಯಕ್ಷ  ರಘುಪತಿ ರಾವ್, ಬಾಲಕೃಷ್ಣ ಸಂಗಾಪುರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಹೆಚ್ಚಿನ ಮಾಹಿತಿಗಾಗಿ ಸಮಾವೇಶ ಸಂಚಾಲಕರಾದ ಶ್ರೀನಿವಾಸ್‌ ಎಸ್‌. ಭಾರದ್ದಾಜ್‌ ಮೊ. : 8217876335 / 9449425536 ನೋಂದಾಯಿಸುವ ಸ್ಥಳ: ಶ್ರೀ ಮಥುರಾ ಜಯಕೃಷ್ಣ ಕಲಾಭವನ, ಶ್ರೀ ಕೃಷ್ಣಮಠ ಪಾರ್ಕಿಂಗ್‌ ಏರಿಯ, ಬೈಲಕೆರೆ, ಉಡುಪಿ.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply