ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಅದ್ದೂರಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಶೋಭಾ ಯಾತ್ರೆ

ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಮಿಥಿಲಾನಗರ ಹೆಬ್ರಿ ಇವರ ವತಿಯಿಂದ ಶನಿವಾರ ಬೆಳಗ್ಗೆ 10ಗಂಟೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಶೋಭಾ ಯಾತ್ರೆ ನಡೆಯಿತು.
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯ , ಅಮೃತ ಭಾರತಿ ವಿದ್ಯಾ ಕೇಂದ್ರ , ಅಮೃತ ಭಾರತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಶೋಭಾಯಾತ್ರೆ ನಡೆಯಿತು. ಶೋಭಾ ಯಾತ್ರೆ  ಶ್ರೀ ಅನಂತಪದ್ಮನಾಭ ದೇವಸ್ಥಾನ,  ಶ್ರೀ ಅನಂತಪದ್ಮನಾಭ ಪೆಟ್ರೋಲ್ ಬಂಕ್ ಮತ್ತು ಶ್ರೀ ಗಜಾನನ ಗೇರುಬೀಜ ಕಾರ್ಖಾನೆ ಕುಚ್ಚೂರು  ರಸ್ತೆಯಿಂದ ಶೋಭಾ ಯಾತ್ರೆ ಪ್ರಾರಂಭಗೊಂಡು ಹೆಬ್ರಿ ಪೇಟೆಯಲ್ಲಿ ಸಂಚರಿಸಿ ಶಾಲೆಯನ್ನು ತಲುಪಿತು ಮತ್ತು ಶಾಲಾ ಮೈದಾನದಲ್ಲಿ ಎಲ್ಲಾ ತಂಡಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಹೆಬ್ರಿಯ ಪೇಟೆಯ ನಾಗರಿಕ ಬಂಧುಗಳು ಶ್ರೀ ಕೃಷ್ಣದೇವರ ಭಾವಚಿತ್ರಕ್ಕೆ ಭಗವಾಧ್ವಜಕ್ಕೆ ಹಾಗೂ ಪುಟಾಣಿ ಶ್ರೀಕೃಷ್ಣವೇಷದ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡಿ ಶೋಭಾ ಯಾತ್ರೆಯನ್ನು  ಸಂಭ್ರಮದಿಂದ ಸ್ವಾಗತಿಸಿದರು.
       ಸಂಸ್ಥೆಯು ನಡೆಸುತ್ತಿರುವ  ಶ್ರೀಕೃಷ್ಣ ಜನ್ಮಾಷ್ಟಮಿ ಶೋಭಾ ಯಾತ್ರೆಗೆ ಹೆಬ್ರಿ ಪರಿಸರದ ಹಲವಾರು ಸಂಘ ಸಂಸ್ಥೆಗಳು ಈ ಬಾರಿ ಪ್ರಥಮವಾಗಿ ಭಾಗವಹಿಸಿ ಮೆರುಗನ್ನು ಹೆಚ್ಚಿಸಿದರು.
 ಶೋಭಾ ಯಾತ್ರೆಯಲ್ಲಿ ಮಕ್ಕಳಿಂದ ನೃತ್ಯ, ಹುಲಿವೇಷ  ಕುಣಿತ, ಯಕ್ಷಗಾನ, ಭಜನೆ, ಕೋಲಾಟ, ಮೊಸರು ಕುಡಿಕೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
 ಅಮೃತಭಾರತಿ  ಟ್ರಸ್ಟಿನ ಅಧ್ಯಕ್ಷರು ಸಿ.ಎ.ಎಂ. ರವಿ ರಾವ್ ಕಾರ್ಯದರ್ಶಿ ಶ್ರೀ ಗುರು ದಾಸ ಶೆಣೈ ,ಟ್ರಸ್ಟ್ ಸದಸ್ಯರು ಶ್ರೀ ಯೋಗೀಶ ಭಟ್ ಹೆಬ್ರಿ,  ಶ್ರೀ ಭಾಸ್ಕರ್ ಜೋಯಿಸ, ಹೆಬ್ರಿ,  ಶ್ರೀ.ರಾಮಕೃಷ್ಣ ಆಚಾರ್ಯ, ಶ್ರೀ. ವಿಷ್ಣುಮೂರ್ತಿ ನಾಯಕ್,  ಶ್ರೀ .ಗಣೇಶ್ ಕಿಣಿ ಬೆಳ್ವೆ, ಶ್ರೀ. ಶೈಲೇಶ್ ಕಿಣಿ , ಶ್ರೀ ರಾಜೇಶ ನಾಯಕ್ ,ಸುಧೀರ ನಾಯಕ್, ಶ್ರೀ ಸತೀಶ್ ಪೈ  ಮತ್ತು ಎಂಜನೀಯರ್ ಶಿವಾನಂದ ಹೆಬ್ರಿ ಉಪಸ್ಥಿತರಿದ್ದು ಶೋಭಾಯಾತ್ರೆಗೆ ಚಾಲನೆ ನೀಡಿದರು.
 
 
 
 
 
 
 
 
 
 
 

Leave a Reply