ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ, ಕೆಮ್ಮಣ್ಣು ಇಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರಕ್ಷಕ ಶಿಕ್ಷಕ ಸಂಘದ ಸದಸ್ಯರು ಮತ್ತು ಶಾಲಾ ವತಿಯಿಂದ ಶಾಲೆಗೆ ನೀರು ಶುದ್ಧೀಕರಣ ಯಂತ್ರವನ್ನು ಶಿಕ್ಷಕರಕ್ಷಕ ಸಂಘದ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮುಖೋಪಾಧ್ಯಾಯಣಿ ಸಿಸ್ಟರ್ ಸಿಲ್ವಿಯನ್, ಮಾಜಿ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಶ್ರೀಯುತ ಶರತ್ ಕುಮಾರ್, ಪ್ರಸ್ತುತ ಸಾಲಿನ ಉಪಾಧ್ಯಕ್ಷೆ ಶ್ರೀಮತಿ ರೀಟಾ ಡಿಸೋಜಾ, ಪ್ರಸ್ತುತ ಸಾಲಿನ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಶಿಕ್ಷಕ ಶಿಕ್ಷಕರೇವೃಂದ ಉಪಸ್ಥಿತರಿದ್ದರು.

ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಮತ್ತು ರಕ್ಷಕ ಶಿಕ್ಷಕ ಸಂಘದ ಸದಸ್ಯರುಗಳಿಂದ ಶಿಕ್ಷಕರಿಗೆ ಹಾಗೂ ಪೋಷಕರಿಗೆ ವಿವಿಧ ಆಟೊಟ ಸ್ಪರ್ಧೆಗಳು ಮನೋರಂಜನ ಕಾರ್ಯಕ್ರಮಗಳು ಜರುಗಿದವು.

 
 
 
 
 
 
 
 
 
 
 

Leave a Reply