ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ತಾಲೂಕು ಮಹಿಳಾ ಘಟಕ ಉದ್ಘಾಟನೆ

ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆಯ ಉಡುಪಿ ಮಹಿಳಾ ಘಟಕ ತಾಲೂಕು ಉದ್ಘಾಟನಾ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಧ್ಯಕ್ಷರದ ಸುಜಯ್ ಪೂಜಾರಿ ದೀಪ ಪ್ರಜ್ವಲಿಸುವ ಮೂಲಕ ಉಡುಪಿ ತಾಲೂಕು ಮಹಿಳಾ ಘಟಕ ಉದ್ಘಾಟಿಸಿದರು. ನೂತನ ಉಡುಪಿ ಮಹಿಳಾ ತಾಲೂಕು ಅಧ್ಯಕ್ಷರಾಗಿ ಹೆಲನ್ ಸೋನ್ಸ್. ಉಪಾಧ್ಯಕ್ಷರಾಗಿ ಪವಿತ್ರ ಶೆಟ್ಟಿ, ಕಾರ್ಯದರ್ಶಿಯಾಗಿ ಜಯ ಚಿತ್ರ ಇವರನ್ನು ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರು ಆಯ್ಕೆ ಮಾಡಿದ್ದರು. ತದನಂತರ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಅವರ ನೇತೃತ್ವದಲ್ಲಿ ಇಂದು ದಿನಾಂಕ-17/12/2023 ರಂದು ಆದಿತ್ಯವಾರ ಬೆಳ್ಳಿಗೆ ಉಡುಪಿ ಜಿಲ್ಲಾ ಕಛೇರಿಯಲ್ಲಿ 11:30 ಕೆ ಉಡುಪಿ ತಾಲೂಕು ಮಹಿಳಾ ಘಟಕದ ಸದಸ್ಯರ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ಸಭೆಯಲ್ಲಿ ಜಿಲ್ಲಾ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಗೀತಾ ಪಂಗಾಳಅವರ ಅಧ್ಯಕ್ಷತೆಯಲ್ಲಿ ನೂತನವಾಗಿ ಆಯ್ಕೆಯಾದ ಉಡುಪಿ ತಾಲೂಕು ಮಹಿಳಾ ಅಧ್ಯಕ್ಷರಾದ ಹೆಲನ್ ರವರು ಕೆಲವು ಸದಸ್ಯರನ್ನು ತಮ್ಮ ಸಂಘಟನೆಗೆ ಸೇರ್ಪಡೆ ಮಾಡಿಕೊಂಡರು ಈ ಸಂದರ್ಭದಲ್ಲಿ ಹೊಸದಾಗಿ ಸೇರ್ಪಡೆಗೊಂಡ ಮುಕ್ತ ಪ್ರಿಯ, ಜ್ಯೋತಿ ಗಿರೀಶ್, ಪ್ರೀತಿ, ಶ್ಯಾಮಲ, ಇವರನ್ನು ಸಂಘಟನೆಗೆ ಬರಮಾಡಿಕೊಂಡರು. ಜಿಲ್ಲಾಧ್ಯಕ್ಷರು ಹಾಗೂ ಮಹಿಳಾ ಅಧ್ಯಕ್ಷರು ಸಂಘಟನಾ ವಿಚಾರವನ್ನು ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ್ ಕುಲಾಲ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್. ಜಿಲ್ಲಾ ಕಾರ್ಯದರ್ಶಿ ಸಿದ್ದಣ್ಣ ಎಸ್ ಪೂಜಾರಿ. ಜಿಲ್ಲಾ ಸಂಸ್ಕೃತ ಕಾರ್ಯದರ್ಶಿ ಕೃಷ್ಣಕುಮಾರ್. ಜಿಲ್ಲಾ ಮಹಿಳಾಉಪಾಧ್ಯಕ್ಷರಾದ ದೇವಕಿ ಬಾರ್ಕೂರ್. ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಜ್ಯೋತಿ. ಜಿಲ್ಲಾ ಮಹಿಳಾ ಕಾರ್ಯದರ್ಶಿ ಅನುಶ್ರೀ. , ಮತ್ತು ತಾಲೂಕು ಸದಸ್ಯರು ಸುನಿತಾ. ಶ್ಯಾಮಲ ಹಾಗೂ ಉಳಿದ ಸದಸ್ಯರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply