ಎಬಿವಿಪಿ ವಿದ್ಯಾರ್ಥಿಗಳಲ್ಲಿ ನಾಯಕತ್ವವನ್ನು ಬೆಳೆಸುತ್ತದೆ: ಡಾ| ಶಿವಾನಂದ ನಾಯಕ್

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ಅಭ್ಯಾಸ ವರ್ಗವು ಕಡಿಯಾಳಿಯ ಶರ್ವಾಣಿ ಮಂಟಪದಲ್ಲಿ ಸಂಪನ್ನಗೊಂಡಿತು. ನೂತನ ನಗರ ಅಧ್ಯಕ್ಷರಾಗಿ ಎಸ್.ಡಿ.ಎಂ ಆಯುರ್ವೇದ ಕಾಲೇಜು ಉದ್ಯಾವರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ| ಸದಾನಂದ ಲಕ್ಷ್ಮಿಂದ್ರ ಭಟ್ ಕಾಪು ಇವರು ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಬಿವಿಪಿಯ ಹಿರಿಯ ಕಾರ್ಯಕರ್ತರಾದ ಡಾ| ಶಿವಾನಂದ ನಾಯಕ್ ಎಬಿವಿಪಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದರೊಂದಿಗೆ ರಾಷ್ಟ್ರಪ್ರೇಮವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ತಾವು ಎಬಿವಿಪಿಯ ಕಾರ್ಯಕರ್ತರಾಗಿ ಇದ್ದ ಸಂದರ್ಭಗಳನ್ನು ಸ್ಮರಿಸಿದರು.

ವರ್ಗದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀರಾಮ್ ಅಂಗೀರಸ ಸೈದ್ಧಾಂತಿಕ ಭೂಮಿಕೆಯ ಅವಧಿಯನ್ನು ತೆಗೆದುಕೊಂಡರು, ರಾಜ್ಯ ಸಹಕಾರ್ಯದರ್ಶಿ ಹರ್ಷಿತ್ ಕೊಯ್ಲ ಕ್ಯಾಂಪಸ್ ಕಾರ್ಯದ ಅವಧಿಯನ್ನು ನಡೆಸಿದರು, ಕರ್ನಾಟಕ ದಕ್ಷಿಣ ಪ್ರಾಂತ ಸಾಮಾಜಿಕ ಜಾಲತಾಣ ಸಹ-ಸಂಚಾಲಕರಾದ ಶ್ರೀವತ್ಸ ಸಾಮಾಜಿಕ ಜಾಲತಾಣ, ಗಟಿವಿಧಿ ಮತ್ತು ಆಯಾಮದ ಅವಧಿಯನ್ನು ತೆಗೆದುಕೊಂಡರು ವಿಭಾಗ ಸಂಚಾಲಕರಾದ ನಿಶಾನ್ ಆಳ್ವ ಹೋರಾಟದ ಅವಧಿಯನ್ನು ನಡೆಸಿದರು.

ತಾಲೂಕು ಸಂಚಾಲಕರಾದ ಅಜಿತ್ ಜೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು ಜಿಲ್ಲಾ ಪ್ರಮುಖರಾದ ರಾಜಶಂಕರ್ ನೂತನ ಜವಾಬ್ದಾರಿಗಳನ್ನು ಘೋಷಿಸಿದರು, ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕರಾದ ಗಣೇಶ್ ಪೂಜಾರಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸಂಹಿತಾ ಕೆ ಉಪಸ್ಥಿತರಿದ್ದರು ನಗರ ಸಹ ಕಾರ್ಯದರ್ಶಿ ಕಾರ್ತಿಕ್ ಮತ್ತು ನೂತನ ನಗರ ಸಂಪರ್ಕ ಪ್ರಮುಖ್ ರವಿಚಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 
 
 

Leave a Reply