ಉಡುಪಿ – ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಮಹರ್ಷಿ ವಾಲ್ಮೀಕಿ ಸಂಘ ಉಡುಪಿ ಜಿಲ್ಲೆ, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ತಾಲೂಕು ಘಟಕದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಅತಿಥಿಗಳಾಗಿ ಆಗಮಿಸಿದ್ದ, ಕುಶಾಲ್ ಅಮೀನ್, ಅ ರಾ ಪ್ರಭಾಕರ ರಾಜ್ ಮತ್ತು ವಿಶ್ವನಾಥ ರೆಡ್ಡಿ ಬಿರಾದಾರ್, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರು ಮತ್ತು ಮಹರ್ಷಿ ವಾಲ್ಮೀಕಿ ಸಂಘ ಉಡುಪಿ ಜಿಲ್ಲೆಯ ಸರ್ವ ಸದಸ್ಯರು ಜೊತೆಯಾಗಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಅ ರಾ ಪ್ರಭಾಕರ ರಾಜ್ ಮಾತನಾಡಿ ಮಹರ್ಷಿ ವಾಲ್ಮೀಕಿಯವರು ಅತ್ಯಂತ ತಳ ಮಟ್ಟದ ಸಮುದಾಯದಲ್ಲಿ ಹುಟ್ಟಿ ದೇಶಕ್ಕೆ ಅತ್ಯುನ್ನತ ಎನ್ನುವಂತಹ 2400 ಪುಟಗಳ ರಾಮಾಯಣವನ್ನು ನಮ್ಮೆಲ್ಲರಿಗೂ ಕೊಟ್ಟಂತಹ ಮಹಾನ್ ವ್ಯಕ್ತಿ, ಅಂತಹ ಮಹಾನ್ ಕವಿ ಮಹರ್ಷಿ ವಾಲ್ಮೀಕಿಯವರ ಸಂಘವನ್ನು ಇನ್ನಷ್ಟು ಬಲಗೊಳಿಸಲು ನಾವೆಲ್ಲರೂ ಜೊತೆಯಾಗೋಣ ಎಂದು ಶುಭ ಹಾರೈಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಕುಶಾಲ್ ಅಮೀನ್, ವಿಶ್ವ ಹಿಂದೂ ಪರಿಷತ್ ಭಜರಂಗದಳ ಉಡುಪಿ ಜಿಲ್ಲೆಯ ನಗರ ಉಪಾಧ್ಯಕ್ಷ ವಿಶ್ವನಾಥ್ ರೆಡ್ಡಿ ಬಿರಾದಾರ್ ಶುಭಾಶಯದ ನುಡಿಗಳನ್ನಾಡಿದರು.

ಮಹರ್ಷಿ ವಾಲ್ಮೀಕಿ ಸಂಘದ ಪ್ರಮುಖರಾದ ಪಂಪೇಷ್, ಗೋಪಾಲ್ ದೇವದುರ್ಗ, ಆನಂದ್ ವಾಲ್ಮೀಕಿ, ಶಿವರಾಜ್ ವಾಲಿಕಾರ, ಗೋಪಾಲ್ ದೊರೆ, ಸಿದ್ದಣ್ಣ ಎಸ್ ಪೂಜಾರಿ, ಸಿದ್ದು ,ಶರಣು ದೊರೆ, ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಸಂಘದ ಗೌರವ ಮಾರ್ಗದರ್ಶಕರಾದ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರು ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಂದನಾರ್ಪಣೆ ಗೈದು ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 
 
 

Leave a Reply