ಜೆಸಿಐ ಉಡುಪಿ ಸಿಟಿ ವತಿಯಿಂದ ನಮಸ್ತೆ ಜೆಸಿ ಸಪ್ತಾಹ 5ನೇ ದಿನದ ಕಾರ್ಯಕ್ರಮ

ಉಡುಪಿ : ಜೆಸಿಐ ಉಡುಪಿ ಸಿಟಿ ವತಿಯಿಂದ ಜೆಸಿಐ ಭಾರತದ 2022 ರ ಜೆಸಿಐ ಸಪ್ತಾಹ ನಮಸ್ತೆ 5ನೇ ದಿನದ ಕಾರ್ಯಕ್ರಮ ವು ಮಿಷನ್ ಕಂಪೌಂಡ್ ಬಳಿಯ ಸಿಎಸ್ಐ ಮಕ್ಕಳ ವಸತಿಗ್ರಹ ಸಭಾಭವನದಲ್ಲಿ ಜರುಗಿತು۔

ಇದರ ಉದ್ಘಾಟಕರಾಗಿ ವಲಯ XV ರ ವಲಯ ಮಹಿಳಾ ಜೆಸಿ ನಿರ್ದೇಶಕಿ ಅಕ್ಷತಾ ಗಿರೀಶ್ ನೆರವೇರಿಸಿ ಮಕ್ಕಳಿಗೆ ಲೇಖನಿಗಳನ್ನು ನೀಡಿ ಶುಭ ಹಾರೈಸಿದರು. ಸಂಪಂನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ಉದಯಕುಮಾರ್ ಮಕ್ಕಳ ಹಕ್ಕು ಮತ್ತು ರಕ್ಷಣಾ ಕಾನೂನು ಬಗ್ಗೆ ಮಾತನಾಡಿದರು. ಪೂರ್ವಧ್ಯಕ್ಷ ವಲಯ ತರಬೇತಿದಾರ ಜೆಸಿ ಮಹಮದ್ ರಫೀಕ ಖಾನ್ ಸಾಹೇಬ್ ಪ್ಲಾಸ್ಟಿಕ್ ಬಳಕೆ ತಡೆ ಕುರಿತು ಮಾಹಿತಿ ನೀಡಿದರು۔
ಜೆಸಿಐ ಉಡುಪಿ ಸಿಟಿಯ ಅಧ್ಯಕ್ಷ ಜೆಸಿ ಡಾlವಿಜಯ್ ನೆಗಳೂರ್ ಅಧ್ಯಕ್ಷತೆವಹಿಸಿ ಸ್ವಾಗತಿಸಿದರು ಈ ಸಂದರ್ಭದಲ್ಲಿ ಜೆಸಿ ಡಾl ಚಿತ್ರಾ ನೆಗಳೂರು , ಪೂರ್ವಧ್ಯಕ್ಷ ಜೆಸಿ ಜಗದೀಶ್ ಶೆಟ್ಟಿ، ಸಿಎಸ್ಐ ವಸತಿ ಶಾಲೆಯ ಇಂಚಾರ್ಜ್ ಆಗಿರುವ ಜೊಯಲ್ ಉಪಸ್ಥಿತರಿದ್ದರು.
ಜೆಸಿ HGF ಉದಯ್ ನಾಯ್ಕ್ ZC ವಲಯ ಸಂಯೋಜಕರು ಎಚ್ ಜಿ ಎಫ್ ಸ್ಕಾಲರ್ಶಿಪ್ ವಿಭಾಗ, ವಂದಿಸಿದರು.
ಜೆಸಿ ರಾಘವೇಂದ್ರ ಪ್ರಭು ಕರ್ವಾಲು ಜೂನಿಯರ್ ಜೆಸಿ ವಲಯ ನಿರ್ದೇಶಕರು ZD ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply