Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ಮುದ್ದು ತಿರ್ಥಹಳ್ಳಿಗೆ ದಿ. ಜೋಸೆಪ್‌ ಮೇರಿ ಪಿಂಟೊ ನಿಡ್ಡೋಡಿ ಸಾಹಿತ್ಯ ಪುರಸ್ಕಾರ ಪ್ರದಾನ

ಉಡುಪಿ: ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಂಡಾಗ ಮುಂದೆ ಉತ್ತಮ ಸಾಹಿತ್ಯ ರಚನೆಯಾಗಲು ಸಾಧ್ಯವಿದೆ ಎಂದು ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್‌ ಆಳ್ವಾ ಹೇಳಿದರು.

ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನಲ್ಲಿ ಕಥೊಲಿಕ್‌ ಸಭಾ ಉಡುಪಿ ಪ್ರದೇಶ, ಆಮ್ಚೊ ಸಂದೇಶ್‌ ಕೊಂಕಣಿ ಮಾಸಿಕ ಮತ್ತು ಕೊಂಕಣಿ ಸಂಘಟನೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಆಮ್ಚೊಂ ಸಂದೇಶ್‌ ಪ್ರತಿನಿಧಿಗಳ ಮತ್ತು ಬರಹಗಾರರ ಸಮ್ಮೇಳನ ಹಾಗೂ ದಿ. ಜೋಸೆಪ್‌ ಮೇರಿ ಪಿಂಟೊ ನಿಡ್ಡೋಡಿ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು

ಬರಹಗಾರನಾಗಬೇಕಾದರೆ ಮೊದಲು ನಾವು ಹೆಚ್ಚು ಹೆಚ್ಚು ಓದುವ ಹವ್ಯಾಸವನ್ನು ರೂಡಿಸಿಕೊಂಡಾಗ ನಮ್ಮಲ್ಲಿ ಜ್ಞಾನದ ವೃದ್ದಿಯಾಗುತ್ತದೆ ಇದರಿಂದ ಬರೆಯುವ ಕಲೆ ನಮ್ಮಲ್ಲಿ ಹುಟ್ಟಿಕೊಂಡು ಮುಂದೆ ಸಮಾಜದಲ್ಲಿ ಉತ್ತಮ ಬರಹಗಾರ, ಸಾಹಿತಿಯಾಗಲು ಸಾಧ್ಯವಾಗುತ್ತದೆ ಎಂದರು.

ಇದೇ ವೇಳೆ ಕೊಂಕಣಿಯಲ್ಲಿ ಬರೆಯುವ ಯುವ ಸಾಹಿತಿಗಳಿಗೆ ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಇವರ ಸಹಭಾಗಿತ್ವದಲ್ಲಿ ನೀಡಲಾಗುವ ದಿ. ಜೋಸೆಫ್‌ ಮತ್ತು ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಸಾಹಿತ್ಯ ಪುರಸ್ಕಾರ -2021 ಕ್ಕೆ ವಿತಾಶಾ ರಿಯಾ ರೊಡ್ರಿಗಸ್‌ (ಮುದ್ದು ತೀರ್ಥಹಳ್ಳಿ)ಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಚಲಿತ ಲೇಖನಗಳನ್ನು ಬರೆಯುವ ಕುರಿತು ದೈಜಿ ವಲ್ಡ್‌ ಮಂಗಳೂರು ಬ್ಯೂರೊ ಮುಖ್ಯಸ್ಥರಾದ ಸ್ಟ್ಯಾನಿ ಬೇಳಾ, ಸಂಪಾದಕರಿಗೆ ಪತ್ರ ಬರೆಯುವ ಕುರಿತು ಆಮ್ಚೊ ಸಂದೇಶ್‌ ಪತ್ರಿಕೆಯ ವಿಲ್ಫ್ರೇಡ್‌ ಲೋಬೊ, ವರದಿಗಾರಿಕೆಯ ಕುರಿತು ಉಡುಪಿ ಧರ್ಮಪ್ರಾಂತ್ಯದ ಮಾಧ್ಯಮ ಸಂಯೋಜಕರಾದ ಮೈಕಲ್‌ ರೊಡ್ರಿಗಸ್‌ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಮೇರಿ ಡಿಸೋಜಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಿವ್ಯದೀಪ ಪ್ರಕಾಶನ ಸಂತೆಕಟ್ಟೆ ಕಲ್ಯಾಣಪುರ ಇದರ ವತಿಯಿಂದ ಮರುಮುದ್ರಣಗೊಂಡ ರಾಕ್ಣೋ ವಾರಪತ್ರಿಕೆಯ ಮಾಜಿ ಸಂಪಾದಕರಾದ ವಂ.ಮಾರ್ಕ್‌ ವಾಲ್ಡರ್‌ ಅವರ ಆತ್ಮಚರಿತ್ರೆ ಲೊಕಾಚೊ ಯಾಜಕ್‌ ಪುಸ್ತಕವನ್ನು ಅನಾವರಣಗೊಳಿಸಲಾಯಿತು.

ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಇದರ ಪ್ರಧಾನ ಕಾರ್ಯದರ್ಶಿ ಗ್ರೆಗೋರಿ ಪಿಕೆ ಡಿʼಸೋಜಾ, ಮಾಜಿ ಅಧ್ಯಕ್ಷ ಆಲ್ವಿನ್‌ ಕ್ವಾಡ್ರಸ್‌, ಆಮ್ಚೊ ಸಂದೇಶ್‌ ಸಂಚಾಲಕ ಎಲ್ರೋಯ್‌ ಕಿರಣ್‌ ಕ್ರಾಸ್ಟೊ, ಕಥೊಲಿಕ್‌ ಸಭಾ ಮಂಗಳೂರು ಪ್ರದೇಶ ಇದರ ಕೋಶಾಧಿಕಾರಿ ಮೆಲ್ರಿಡಾ ರೊಡ್ರಿಗಸ್‌, ದಿ. ಜೋಸೆಪ್‌ ಮೇರಿ ಪಿಂಟೊ ನಿಡ್ಡೋಡಿ ಕುಟುಂಬಿಕ ವಾಲ್ಟರ್‌ ಸಿರಿಲ್‌ ಪಿಂಟೊ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ ಡಾ|ಜೆರಾಲ್ಡ್‌ ಪಿಂಟೊ ಸ್ವಾಗತಿಸಿ, ಎಡ್ವರ್ಡ್‌ ಲಾರ್ಸನ್‌ ಡಿʼಸೋಜಾ ಪೇತ್ರಿ ಅತಿಥಿಗಳ ಪರಿಚಯ ಮಾಡಿದರು. ಕಲ್ಯಾಣಪುರ ವಲಯ ಅಧ್ಯಕ್ಷ ರೋಜಿ ಬಾರೆಟ್ಟೊ ವಂದಿಸಿ, ಡಾ ಫ್ಲಾವಿಯಾ ಕ್ಯಾಸ್ತಲಿನೊ ನಿರೂಪಿಸಿದರು. 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!