ಉಡುಪಿ ಧರ್ಮ ಪ್ರಾಂತ್ಯದ ವತಿಯಿಂದ ವಸತಿ ರಹಿತರಿಗೆ ವಸತಿ ಕಲ್ಪಿಸುವ ಯೋಜನೆ  

ಉಡುಪಿ ಧರ್ಮ ಪ್ರಾಂತ್ಯದ ವತಿಯಿಂದ ವಸತಿಹೀನರಿಗೆ ವಸತಿ ಕಲ್ಪಿಸುವ ಯೋಜನೆಯಡಿ ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯ ನರ್ನಾಡು ವಾರ್ಡಿನ ಬೆನ್ನ ಡಿಸೋಜಾ ದಿ|  ಪೆಲಿಕ್ಸ್ ಡಿಸೋಜಾ ಅವರ ಕುಟುಂಬಕ್ಕೆ ಸೂರು ಕಲ್ಪಿಸುವ ಉದ್ದೇಶದಿಂದ ಇಂದು ನೂತನ ಮನೆಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಚರ್ಚಿನ ಧರ್ಮಗುರುಗಳಾದ ವಂದನೀಯ ಅನಿಲ್ ಪ್ರಕಾಶ್ ಕ್ಯಾಸ್ತಲಿನೋ ಕಾರ್ಯಕ್ರಮಕ್ಕೆ ಆಶೀರ್ವಚನಗೈದರು. ಕಾರ್ಯಕ್ರಮದಲ್ಲಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ವಿನ್ಸೆಂಟ್ ಡಿಸೋಜಾ, ಕಾರ್ಯಧರ್ಶಿ  ಅಂತೋನಿ ಮಸ್ಕರೇನ್ಹಸ್, ಎಸ್.ವಿ.ಪಿ ಅಧ್ಯಕ್ಷರು ಸದಸ್ಯರು, ಆರ್ಥಿಕ ಸಮಿತಿಯ ಸದಸ್ಯರು, ನಾರ್ನಾಡು ವಾರ್ಡಿನ ಗುರಿಕಾರರಾದ  ಕ್ವೀನಿ ಮೇರಿ ಡಿಸೋಜಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಈ ಮನೆಯು ಸುಮಾರು 700 ಚ.ಮೀ ವಿಸ್ತೀರ್ಣದಲ್ಲಿ ಸುಮಾರು ರೂ. 7ಲಕ್ಷದಲ್ಲಿ 4 ತಿಂಗಳಲ್ಲಿ ಎಸ್.ವಿ.ಪಿ, ಆರ್ಥಿಕ ಸಮಿತಿ, ದಾನಿಗಳ ಸಹಾಯದಿಂದ ಹಾಗೂ ನರ್ನಾಡು ವಾರ್ಡಿನ ಹಬ್ಬವನ್ನು ಆಚರಿಸದೇ ಉಳಿಸಿಕೊಂದಿದ್ದ ಮೊತ್ತವನ್ನು ಧರ್ಮ ಪ್ರಾಂತ್ಯದ ಯೋಜನೆಯಡಿ ಬರುವ ಮೊತ್ತಕ್ಕೆ ಕ್ರೂಡಿಕರಿಸಿಕೊಂಡು ಮನೆಯನ್ನು ನಿರ್ಮಿಸಿ ಕೊಡಲಾಗುತ್ತದೆ.

 
 
 
 
 
 
 
 
 
 
 

Leave a Reply