Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

0.5% ಮೊತ್ತವನ್ನು ಮೀಸಲಿರಿಸಲು ಸಹಕಾರಿ ಸಚಿವರಿಗೆ ಮನವಿ:ಯಶ್‌ಪಾಲ್ ಸುವರ್ಣ

ಗೋಶಾಲೆಗಳ ಅಭಿವೃದ್ಧಿಗೆ ಸಹಕಾರಿ ಸಂಸ್ಥೆಗಳ ಲಾಭಾಂಶದಲ್ಲಿ 0.5% ಮೊತ್ತವನ್ನು ಮೀಸಲಿರಿಸಲು ಸಹಕಾರಿ ಸಚಿವರಿಗೆ ಮನವಿ : ಯಶ್‌ಪಾಲ್ ಸುವರ್ಣ

ಕೊರೋನಾ ಸಂಕಷ್ಟದಿಂದ ತೀರಾ ವೆಚ್ಚದಾಯಕವಾದ ಗೋಶಾಲೆಗಳ ನಿರ್ವಹಣೆ ತೀವ್ರ ಸಮಸ್ಯೆಯನ್ನು ಎದುರಿ ಸುತ್ತಿದೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸಿ ಗೋಶಾಲೆಗಳಿಗೆ ಆರ್ಥಿಕಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯ ಸಹಕಾರಿ ಇಲಾಖೆ ವಿಶೇಷ ಮುತುವರ್ಜಿ ವಹಿಸಿ ರಾಜ್ಯದ ಸಹಕಾರಿ ಇಲಾಖೆಗೆ ಒಳಪಟ್ಟಿರುವ ಸಹಕಾರಿ ಸಂಸ್ಥಗಳ ಲಾಭಾಂಶದಲ್ಲಿ 0.5% ನಿಧಿಯನ್ನು ಸರಕಾರದಿಂದ ನೊಂದಾಯಿಸಲ್ಪಟ್ಟ  ಗೋಶಾಲೆಗಳ ಅಭಿವೃದ್ಧಿಗೆ ವಿನಿ ಯೋಗಿಸಲು ಆದೇಶ ಹೊರಡಿಸುವಂತೆ ಸಹಕಾರಿ ಸಚಿವರಾದ  ಶ್ರೀ ಎಸ್. ಟಿ. ಸೋಮಶೇಖರ್ ರವರಿಗೆ ಮನವಿ ಸಲ್ಲಿಸಿರುರುವುದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ  ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಎ. ಯಶಪಾಲ್ ಸುವರ್ಣ ತಿಳಿಸಿದ್ದಾರೆ.

ಭಾರತದ ಸಂಸ್ಕೃತಿಯಲ್ಲಿ ಗೋವುಗಳಿಗೆ ಪ್ರಧಾನ ಪಾತ್ರವಿದೆ. ಹಲವಾರು ಕಾರಣಗಳಿಂದ ಅನಾಥವಾಗುವ ಗೋವುಗಳ ರಕ್ಷಣೆಯ ಸದುದ್ದೇಶದಿಂದ  ನಮ್ಮ ರಾಜ್ಯದಲ್ಲಿ ಹಲವಾರು ಗೋಶಾಲೆಗಳು ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಸರಕಾರ ಗೋ ಸಂರಕ್ಷಣೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದರೂ, ಗೋಶಾಲೆಗಳು ಆರ್ಥಿಕ ವಾಗಿ ತೀರ ಸಂಕಷ್ಟ ಪರಿಸ್ಥಿತಿಯಲ್ಲಿ ಗೋರಕ್ಷಣೆಯ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ಈಗಾಗಲೇ ಈ ಮಹತ್ವದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗೋಶಾಲೆಗಳಿಗೆ ಆರ್ಥಿಕ ಚೈತನ್ಯ ನೀಡುವ ಉದ್ದೇಶದಿಂದ  ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ಎ ಮತ್ತು ಬಿ ವರ್ಗದ ದೇವಸ್ಥಾನಗಳ ಆದಾಯದ 2% ನ್ನು ಗೋಶಾಲೆಗಳಿಗೆ ವಿನಿಯೋಗಿಸಲು ಆದೇಶ ನೀಡಲಾಗಿದ್ದು. ಸಹಕಾರಿ ಇಲಾಖೆಯ ಮೂಲಕವೂ ಸಹಕಾರಿ ಸಂಸ್ಥೆಗಳ ಲಾಭಾಂಶದಲ್ಲಿ 0.5% ನಿಧಿಯನ್ನು ಗೋಶಾಲೆ ಅಭಿವೃದ್ಧಿಗೆ ಮೀಸಲಿರಿಸುವ ಬಗ್ಗೆ ಆದೇಶ ನೀಡಿದಲ್ಲಿ ಕೋಟ್ಯಾಂತರ ರೂಪಾಯಿ ಅನುದಾನದ ಸಂಗ್ರಹವಾಗಲಿದ್ದು ಈ ಮೂಲಕ ಗೋಸಂರಕ್ಷಣೆ ಯಲ್ಲಿ ನಿರತವಾಗಿರುವ ಗೋಶಾಲೆಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!