ಹಿರಿಯ ನಾಗರಿಕರ ಕಾಳಜಿ ಗ್ರಾಮ ಮಟ್ಟದಲ್ಲಿ ಹೆಚ್ಚಲಿ: ಡಾ. ಶಶಿಧರ ವೈ ಏನ್

ಏಪ್ರಿಲ್ 14, 2023: ಹಿರಿಯ ನಾಗರಿಕರಿಗಾಗಿ ಹಿರಿಯಡಕದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರವನ್ನುಉದ್ಘಾಟಿಸಿ ಪ್ರಾಧ್ಯಾಪಕರೂ ಮತ್ತು, ಮಣಿಪಾಲದ ಮಾಹೆಯ,ಸಮುದಾಯ ಆರೋಗ್ಯ ನರ್ಸಿಂಗ್ ಇದರ ವಿಭಾಗ ಮುಖ್ಯಸ್ಥರಾದ ಡಾ. ಶಶಿಧರ ವೈ ಏನ್, ಹಿರಿಯ ನಾಗರಿಕರ ಅರೋಗ್ಯ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತೀ ಗ್ರಾಮದಲ್ಲಿ ವೈದ್ಯಕೀಯ ಪರೀಕ್ಷೆ ಹಾಗು ಚಿಕೆತ್ಸೆ ಜನರಿಗೆ ಸುಲಭವಾಗಿ ಸಿಗುವಂತಾಗಲಿ ಎಂದು ಹಾರೈಸಿದರು.

ರಾಘವೇಂದ್ರ ಜಿ ಇವರು ಹಿರಿಯ ನಾಗರೀಕರಿಗೆ ದಿನನಿತ್ಯದ ಮುಖ್ಯ ಚಟುವಟಿಕೆಗಳಿಗಾಗಿ ಹಿರಿಯ ನಾಗರಿಕರಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳ ಅರಿವು ಮತ್ತು ಬಳಕೆಯ ಕುರಿತು ಜೆರೊಂಟೆಕ್ನಾಲಜಿ ಪರಿಣಾಮಕಾರಿತ್ವ ಸಬಲೀಕರಣದ ಬಗ್ಗೆ ಸಂಶೋಧನೆಯ ಅಂಗವಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಹಿರಿಯ ನಾಗರಿಕರ ಉತ್ತಮ ಗುಣಮಟ್ಟಕ್ಕೆ ಜೀವನಕ್ಕೆ ಸಹಾಯಕವಾಗಿದೆ ಎಂದು ಹೇಳಿದರು.

ರೋಟರಿ ಕ್ಲಬ್ ಮಣಿಪಾಲ ಟೌನ್ ನ ಅಧ್ಯಕ್ಷ ಶ್ರೀ ನಿತ್ಯಾನಂದ ನಾಯಕ್ , ಬಂಟ್ಸ್ ಸಂಘದ ಅಧ್ಯಕ್ಷರಾದ ಶ್ರೀ ನಿತೀಶ್ ಕುಮಾರ್ ಶೆಟ್ಟಿ, ಮೊಗವೀರ ಯುವ ಸಂಘಟನೆ – ಹಿರಿಯಡಕ ಶಾಖೆಯ ಅಧ್ಯಕ್ಷ ಶ್ರೀ ಮಹೇಶ್ ಪುತ್ರನ್, ಕೊಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ಶ್ರೀ ಸತ್ಯಪ್ರಸಾದ್, ನವ್ಯೋದಯ ಫ್ರೆಂಡ್ಸ್ ಕ್ಲಬ್ ಇದರ ಅಧ್ಯಕ್ಷ ಶ್ರೀ ನರಸಿಂಹ ಕಾಮತ್ , ಕಸ್ತೂರ್ಬಾ ಆಸ್ಪತ್ರೆಯ ಸಮುದಾಯ ಅರೋಗ್ಯ ತಜ್ಞರಾದ ಡಾ. ಗಹನ್ ಎಸ ಜೋಯಿಸ್, ಉಡುಪಿ ಹಿರಿಯ ನಾಗರಿಕರ ಸಂಘದ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇವಾಡಿಗ ಸಮಾಜದ ಹಿರಿಯಡಕ ಉಪ ಸಂಘದ ಅಧ್ಯಕ್ಷರಾದ ಶ್ರೀ ಸದಾನಂದ ಶೇರಿಗಾರ್ ಇವರು ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿದ್ದರು. ಈ ಶಿಬಿರದ ಸಂಯೋಜಕರು ಹಾಗು ಮಾಹೆ ವಿಶ್ವವಿದ್ಯಾಲಯದ ವೆಲ್ಕಂಗ್ರೂಪ್ ಗ್ರ್ಯಾಜುಯೆಟ್ ಸ್ಕೂಲ್ ಆ
ಹೋಟೆಲ್ ಅಡ್ಮಿನಿಸ್ಟ್ರೇಷನ್ ನ ಪ್ರಾಧ್ಯಾಪಕರಾದ ರಾಘವೇಂದ್ರ ಜಿ ಇವರು ಕಾರ್ಯಕ್ರಮವನ್ನು ನಿರ್ವಹಿಸಿ, ಕೋಟ್ನಕಟ್ಟೆ ಫ್ರೆಂಡ್ಸ್
ಸರ್ಕಲ್ ಇದರ ಕಾರ್ಯದರ್ಶಿ ದಿವಾಕರ ಹಿರಿಯಡಕ ಇವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು.

ಮಾಹೆಯ ಕಾಲೇಜು ಓಫ್ ನರ್ಸಿಂಗ್ ಇದರ ಮುಖ್ಯಸ್ಥರಾದ ಡಾ. ಜುಡಿತ್ ಎ ನರೋನ್ಹಾ ಹಾಗು ವೆಲ್ಕಮ್‌ಗ್ರೂಪ್ ಗ್ರಾಜುಯೇಟ್
ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ ಮುಖ್ಯಸ್ಥರಾದ ಡಾ. ಚೆಫ್ ಕೆ ತಿರುಜ್ಞಾನಸಂಬಂತಮ್ ಇವರುಗಳ ಮಾರ್ಗದರ್ಶನ ದಲ್ಲಿ ನಡೆದ ಈ ಶಿಬಿರವನ್ನು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ, ಉಡುಪಿ ಹಿರಿಯ ನಾಗರಿಕರ ಸಂಘ, ಉಡುಪಿ, ರೋಟರಿ ಕ್ಲಬ್ ಮಣಿಪಾಲ ಟೌನ್ (ರಿ), ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ)–ಮಂಗಳೂರು, ಹಿರಿಯಡಕ ಶಾಖೆ, ಮೊಗವೀರ ಯುವ ಸಂಘಟನೆ (ರಿ), ಉಡುಪಿ ಜಿಲ್ಲೆ, ಹಿರಿಯಡಕ ಶಾಖೆ, ಬಂಟ್ಸ್ ಸಂಘ (ರಿ), ಹಿರಿಯಡಕ, ಕೊಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ (ರಿ), ನವ್ಯೋದಯ ಫ್ರೆಂಡ್ಸ್ ಕ್ಲಬ್, ಹಿರಿಯಡಕ ಈ ಸಂಘ – ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಅಶ್ವಿನಿ ಕೆ, ಪೂಜಾಶ್ರೀ, ಸುಧೀಂದ್ರ ನಾಯಕ್, ಶಿವ ಸೇರಿಗಾರ್, ಶೇಖರ ದೇವಾಡಿಗ, ಶ್ರೀನಿವಾಸ ರಾವ್ ಇವರುಗಳು ಸಹಕರಿಸಿದರು.

 
 
 
 
 
 
 
 
 
 
 

Leave a Reply