ಇಲ್ಲಿ ನಿಮ್ಮ ಅನುಪಸ್ಥಿತಿ ಯಲ್ಲಿ ನಿಮ್ಮ ಪಾತ್ರ ನಿಭಾಯಿಸಲು ಬೇರೊಬ್ಬ ತಯರಾಗಿರುತ್ತಾನೆ. ~ಡಾ. ಶಶಿಕಿರಣ್ ಶೆಟ್ಟಿ

ವಾಮನಣ್ಣ ಊರಲ್ಲಿ ಬಾರಿ ಜನಪ್ರಿಯ ವ್ಯಕ್ತಿ. ಸುಮಾರು 50 ವರ್ಷದ ಇವರ ಕಾರುಬಾರು ಭಯಂಕರ👌.. ಊರಲ್ಲಿ ದೇವರ ಕಾರ್ಯಕ್ರಮ ದಲ್ಲಿ ಇವರು ದಣಿ, ದಣಿ ಬಂದರೆ ಆಯೋಜಕರಿಗೂ ಆರಾಮ, ಚಾಕಾರಿಯವರಿಗೂ ನಿಶ್ಚಿoತೆ ಇನ್ನು ಎಲ್ಲಾ ಕಾರ್ಯ ಸುಸೂತ್ರ ವಾಗಿ ನಡೆಯುವುದು ಎಂಬುದು ಎಲ್ಲರ ನಂಬಿಕೆ , ಮದುವೆ, ಹಬ್ಬದ, ಜಾತ್ರೆ ಯಲ್ಲಿ ವಾಮನರು ಶೆಟ್ರು ಅವರು ಬಂದರಷ್ಟೇ ಆಯೋಜಕರಿಗೆ ಸಮಾಧಾನ, ಇನ್ನು ಪಂಚಾಯತಿ ತೀರ್ಮಾನ ಬಂತೆಂದರೆ ಅಲ್ಲಿ ವಾಮನಣ್ಣ, ಅಣ್ಣ ಬಂದರೆಂದರೆ ಪಂಚಾಯಿತಿ ಆಯಿತೆಂದೇ ಅರ್ಥ, ಸಾವಿನ ಮನೆ ಇರಲಿ, ಹುಟ್ಟಿದ ಮನೆ ಇರಲಿ.. ವಾಮನ ರು ಅಲ್ಲಿ ಯಜಮಾನರೇ ಯಾಕೆಂದರೆ ಎಲ್ಲಿ ಯಾವ ಯಾವ ಶಾಸ್ತ್ರ ಹೇಗೆ ಹೇಗೆ ನಡೆಸಬೇಕು ಎಂಬುದು ಗೊತ್ತಿದ್ದ ಊರಿನ ಗಣ್ಯ ವ್ಯಕ್ತಿ ಇವರಾಗಿದ್ದರು…

ಇನ್ನು ಮನೆಯಲ್ಲಿ ಇವರಿರುವುದು ರಾತ್ರಿ 9 ರಿಂದ ಬೆಳಿಗ್ಗೆ 7 ಗಂಟೆ ವರೆಗೆ ಮಾತ್ರ, ಬೆಳಿಗ್ಗೆ 7 ಕ್ಕೆ ತಮ್ಮ ಬುಲೆಟ್ ಅಲ್ಲಿ ಹೋದರೆ ಹೆಂಡತಿ 4 ಮಕ್ಕಳು ಮತ್ತೆ ಇವರ ಮುಖ ನೋಡುವುದು ರಾತ್ರಿಯೆ, ದೊಡ್ಡ ಮಗಳಿಗೆ ಈಗಷ್ಟೇ IT ಕಂಪೆನಿ ಯೊಂದರಲ್ಲಿ ಕೆಲಸಕ್ಕಿದ್ದರೆ, ದೊಡ್ಡ ಮಗ ಈಗಷ್ಟೇ ಡಿಗ್ರಿ ಮುಗಿಸಿದ್ದಾನೆ ಮತ್ತಿಬ್ಬರು ಶಾಲೆಗೆ ಹೋಗುತ್ತಾರೆ, ಇನ್ನು ವಾಮನಣ್ಣರ ಹೋಟೆಲ್ ನಲ್ಲಿ ಯಜಮಾರೂ ಅವರೇ ಸಾಪ್ಲೇಯರ್ ಕೂಡಾ ಅವರೇ, ಕೆಲಸಕ್ಕೆ ಜನ ಕೈಕೊಟ್ಟಾಗ ಕುಕ್ ಕೂಡಾ ಅವರೇ ಅಷ್ಟೇ ಅಲ್ಲ ಪಾತ್ರೆ ತೊಳೆಯಲು ಮೋರಿ ಯಲ್ಲಿ ಕೂರಲೊ ಸೈ ನಮ್ಮ ವಾಮನಣ್ಣ.

ಅವರಿಗೂ ಗೊತ್ತು ಮನೆ ನಡೆಸಲು ತಾನು ಇಷ್ಟು ದುಡಿಯಲೇ ಬೇಕು ಎಂದು, ಮಗನಿಗೆ ಎಷ್ಟೇ ಹೇಳಿದರೂ ಹೋಟೆಲ್ ಕಡೆ ತಲೆ ಹಾಕದಾಗ ಕೆಲವೊಮ್ಮೆ ಬೇಸರಿಸುತಿದ್ದರು ಇವರು.. ಒಂದು ದಿನ ಜ್ವರ ಬಂದರೂ ರಜೆ ಮಾಡದೆ ಹೋಟೆಲ್ಗೆ ಹೋಗುತಿದ್ದರು.. ತಾನು ಮಲಗಿದರೆ ನಮ್ಮ ಜೀವನ ಚಕ್ರ ನಿಲ್ಲುತ್ತದೆ ಎಂದು ಸ್ಪಷ್ಟವಾಗಿ ತಿಳಿದಿದ್ದರು ವಾಮನಣ್ಣ. ಹೀಗಿರುವಾಗ ಅಲ್ಲೊಂದು ಯಾರೊ ಊಹಿಸದ ಅಪಘಾತ ನಡೆದೇ ಬಿಟ್ಟಿತು

ಅಂದು ಬೆಳಿಗ್ಗೆ ವಾಮನಣ್ಣರಿಗೆ ಲಕ್ವ ಹೊಡೆದು ಬಿಟ್ಟಿತ್ತು, ಒಂದೆರಡು ವಾರದ ಆಸ್ಪತ್ರೆ ವಾಸ ಮುಗಿದು ಮನೆಗೆ ಬಂದಾಗ ಇನ್ನೊಬ್ಬರ ಸಹಾಯ ಇಲ್ಲದೇ ಎದ್ದು ಕೂರಲಾಗದ, ನಡೆಯಲಾರದ, ಬಾಯಿ ವಾರೆಯಾಗಿ ಒದ್ದಾಡುವ ಪರಿಸ್ಥಿತಿ ಅವರ ದಾಗಿತ್ತು.ಅಂದಿನಿಂದ ವಾಮನಣ್ಣರ ದಿನಚರಿಯೇ ಬದಲಾಗಿ ಬಿಟ್ಟಿ  ಇಂದ ಸಂಜೆ ತನಕ ಮಲಗಿದಲ್ಲೇ ಇರಬೇಕಿತ್ತು,ಟಾಯ್ಲೆಟ್ ಬಾತ್ ರೂಮ್ಗೆ ಹೋಗ ಬೇಕೆಂದರೂ ಹೆಂಡತಿ ಯನ್ನು ಕರೆಯಬೇಕಿತ್ತು. ಅದೇ ಮಂಚ, ಅದೇ ಗೋಡೆ, ಅದೇ ಮಾಡು,ಹೆಚ್ಛೆoದರೆ ಕಿಟಕಿ ಹೊರಗೆ ಕಾಣುವ ಗಿಡ ಮರ ಇವಷ್ಟೇ ಅವರ ಪ್ರಪಂಚ ವಾಗಿ ಬಿಟ್ಟಿತ್ತು.ಹೀಗೆ ನಾಳೆ ಸರಿಯಾ ಬಹುದು ನಾಡಿದ್ದು ಸರಿಯಾಗ ಬಹುದು ಎಂದು 6 ತಿಂಗಳು ಕಳೆದು ಹೋಗಿತ್ತು.

ಅವರ ಬುಲೆಟ್ ಇಟ್ಟಲ್ಲೇ ಬ್ಯಾಟರಿ ಡಲ್ ಆಗಿ ಸ್ಟಾರ್ಟ್ ಆಗುವುದೇ ನಿಲ್ಲಿಸಿ ಬಿಟ್ಟಿತ್ತು, ಹಾಗೇ ವಾಮನನ್ನರ ಜೀವನದ ಬ್ಯಾಟರಿ ಕೂಡಾ ಬಹುತೇಕ ಆಫ್ ಆಗಿ ಹೋಗಿತ್ತು. ಹೀಗಿರಲೊಂದು ದಿನ ವಾಮನಣ್ಣ ರನ್ನು ಮಾತನಾಡಿಸಿ ಬರಲು ಹೋದೆ ಅಲ್ಲಿ ಅವರಾಡಿದ ಮಾತು ನಿಜಕ್ಕೂ ನನ್ನ ಕಣ್ಣುಗಳನ್ನು ತೆರೆಸಿದ್ದವು.ಅವರಲ್ಲಿ ಕೇಳಿದೆ ಹೇಗಿದೆ ಜೀವನ ವಾಮನಣ್ಣ ಏನು ಹೇಳ ಬಯಸುವಿರಿ. ಎಂದು ಅದಕ್ಕವರು ಹೇಳಿದ್ದು ಹೀಗೆ..

“ಏನಿಲ್ಲ ವೈದ್ಯರೆ ಜೀವನ ಹೋಗುತ್ತಿದೆ ಆದರೆ ಈ 6 ತಿಂಗಳಲ್ಲಿ ಕೆಲವು ವಿಷಯ ಕಲಿತೆ ಮೊದಲನೆಯದ್ದು ನಮ್ಮ ಜೀವನ ಏನಿದ್ದರೂ ನೀರ ಮೇಲಣ ಗುಳ್ಳೆ ಅಷ್ಟೇ, ಯಾವಾಗ ಬೇಕಾದರೂ ಒಡೆಯಬಹುದು,ಇರುವಾಗ ನಿಮ್ಮನ್ನು ನೀವು ಪ್ರೀತಿಸಲು ಕಲಿಯಿರಿ, ಯಾಕೆಂದರೆ ಬೇರೆಯವರಿಗೋಸ್ಕರ ಬದುಕುವುದು ತಪ್ಪು, ನಾನು ಜೀವಕ್ಕೆ ಜೀವ ಕೊಟ್ಟ ಮಂದಿ ಇಂದು ನನ್ನನ್ನು ಮರೆತಿದ್ದಾರೆ.

ನಾನೇ ಎಲ್ಲಾ, ನನ್ನಿಂದಲೇ ಎಲ್ಲಾ, ನಾನಿಲ್ಲದಿದ್ದರೆ ಯಾರೂ ಇಲ್ಲ ಎಂಬುದು ಸುಳ್ಳು ಯಾಕೆಂದರೆ ನಾನು ದುಡಿದರಷ್ಟೇ ನನ್ನ ಮನೆ ಎಂದು ಕೊಂಡಿದ್ದೆ ಈಗ ನನ್ನ ಜಾಗವನ್ನು ನನ್ನ ದೊಡ್ಡ ಮಗಳು ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ, ಹೋಟೆಲ್ ಎಂದರೆ ಏನೆಂದೇ ಗೊತ್ತಿಲ್ಲದ ನನ್ನ ಮಗ ಇಂದು ಬೆಳಿಗ್ಗೆ 4 ಗಂಟೆಗೆ ಎದ್ದು ಹೋಟೆಲ್ಗೆ ಹೋಗುತ್ತಿದ್ದಾನೆ, ನನ್ನ ಹೋಟೆಲ್ ನೋಡುತ್ತಿದ್ದಾನೆ, ಊರ ದೇವರ ಕಾರ್ಯಕ್ಕೆ ಬೇರೊಬ್ಬ ದಣಿ ರೆಡಿ ಆಗಿದ್ದಾನೆ, ಮದುವೆ ಕಾರ್ಯಕ್ರಮ ಗಳಲ್ಲಿ ಬೇರೊಬ್ಬ ಶೆಟ್ರು ಮುಂದೆ ಬಂದಿದ್ದಾರೆ, ಊರಿನ ರಾಜಿ ಪಂಚಾಯತಿ ಅಲ್ಲಿ ಬೇರೊಬ್ಬ ಅಣ್ಣರೆಡಿ ಆಗಿದ್ದಾನೆ, ಇನ್ನು ಸಾವಿನ ಮನೆಗಳಲ್ಲಿ, ಹುಟ್ಟಿದ ಮನೆಗಳಲ್ಲಿ ಬೇರೊಬ್ಬ ಯಜಮಾನ ಸೃಷ್ಟಿ ಯಾಗಿದ್ದಾನೆ, ಈಗ ಯಾರೊಬ್ಬರೂ ವಾಮನಣ್ಣ ರನ್ನು ಕಾಯುತ್ತಿಲ್ಲ , ಒಟ್ಟಲ್ಲಿ ನನ್ನ ಅಭಾವ ಇನ್ನೊಬ್ಬ ದಣಿ, ಅಣ್ಣ ಶೆಟ್ರು, ಯಜಮಾನರನ್ನ ಸೃಷ್ಟಿಸಿದೆ ನನ್ನ ಅಸ್ತಿತ್ವ ಕ್ರಮೇಣ ಮಾಯವಾಗುತ್ತಿದೆ. ನಾನಿಲ್ಲದೆ ಯಾರೂ ಇಲ್ಲ ಏನೂ ನಡೆಯುವುದಿಲ್ಲ ಎಂಬ ನನ್ನ ಯೋಚನೆಗಳು ಸುಳ್ಳು ಎಂದು ಇಂದು ತಿಳಿದಿದೆ.ಹಾಗಾಗಿ ನೆನಪಿರಲಿ

ನಿಮ್ಮ ಅನುಪಸ್ಥಿತಿ ಯಲ್ಲಿ ನಿಮ್ಮ ಕೆಲಸ ನಿಭಾಯಿಸಲು ಬೇರೊಬ್ಬ ತಯಾರಾಗಿರುತ್ತಾನೆ. ಎನ್ನುವಾಗ ಅವರ ಕಣ್ಣುಗಳು ಮಂಜಾಗಿದ್ದವು. ಅದೆಷ್ಟು ಸುಂದರ ಸಾಲು ಗಳು ನೋಡಿ ಜೀವನದಲ್ಲಿ ಗೆದ್ದವನೊಂದಿಗೆ ಮಾತಾಡುವಾಗ ಕಣ್ಣು ತೆರೆದಿರಲಿ, ಕಿವಿ ಮುಚ್ಚಿರಲಿ ಯಾಕೆಂದರೆ ಕಣ್ಣಲ್ಲಿ ಅವನ ಸಾಧನೆ ನೋಡಬಹುದು ಕಿವಿಯಲ್ಲಿ ಅವನ ಅಹಂಕಾರದ ಮಾತುಗಳನ್ನು ಕೇಳುವುದು ಬೇಡ ಹಾಗೇ ಜೀವನದಲ್ಲಿ ನೊಂದವನಲ್ಲಿ ಮಾತಾಡುವಾಗ ಕಣ್ಣು ಮುಚ್ಚಿ ಹಾಗೆ ಕಿವಿ ತೆರೆದಿಡಿ.

ಕಣ್ಣಲ್ಲಿ ಅವನ ಪರಿಸ್ಥಿತಿ ನೋಡದೆ ಕಿವಿಯಲ್ಲಿ ಅವನಿಗೆ ಈ ನೋವು ಕಲಿಸಿದ ಪಾಠವಷ್ಟೇ ಕೇಳೋಣ ಅದು ನಮ್ಮ ಬದುಕಿಗೆ ಒಳ್ಳೆ ಸಂದೇಶ ವಾಗಬಹುದು ಹಾಗೇ ಬದುಕೆಂಬುದು ನಿಜಕ್ಕೂ ನೀರಮೇಲಣ ಗುಳ್ಳೆ.. ಆಗುಳ್ಳೆ ಒಡೆಯುವುದರೊಳಗೆ ಜೀವನ ವನ್ನು ಆಸ್ವಾದಿಸೋಣ, ಅನುಭವಿಸೋಣ, ನಮಗೋಸ್ಕರ ಬದುಕುವುದ ಕಲಿಯೋಣ, ಕಷ್ಟದಲ್ಲಿರುವವರಿಗಷ್ಟೇ ನೆರವಾಗೋಣ… ಮತ್ತೆ ನಾನೇ ದೊಡ್ಡವ, ನಾನಿಲ್ಲದೆ ಏನೂ ಆಗುವುದಿಲ್ಲ, ನಾನೇ ಯಜಮಾನ, ನಾನೇ ಧಣಿ, ನಾನೇ ದೊಡ್ಡ ಜನ ಎಂದು ನೀವಂದು ಕೊಂಡಿದ್ದರೆ ಇಂದೇ ಬದಲಾಗಿ ಯಾಕೆಂದರೆ.

2000 ವರ್ಷ ನೀವಿಲ್ಲದೆ ಸುಂದರ ವಾಗೇ ಇದೆ ಈ ಪ್ರಪಂಚ, ಹಾಗೇ ನೀವು ಹೊರಟು ಹೋದ ಮೇಲೂ ಸುಂದರವಾಗೇ ಇರಲಿದೆ. ಯಾಕೆಂದರೆ… ಶ್ರೀ ಕೃಷ್ಣ ಪರಮಾತ್ಮ ಹೇಳಿದಂತೆ ಇಲ್ಲಿ ನೀನು ತಂದಿರುವುದು ಏನೂ ಇಲ್ಲ, ನಿನ್ನೆ ಯಾರದ್ದೋ ಆಗಿದ್ದು ಇಂದು ನಿನ್ನದಾಗಿದೆ ನಾಳೆ ಇನ್ಯಾರದ್ದೋ ಆಗಲಿದೆ..
ನೆನಪಿಡಿ.ಇಲ್ಲಿ ನಿಮ್ಮ ಅನುಪಸ್ಥಿತಿ ಯಲ್ಲಿ ನಿಮ್ಮ ಕೆಲಸ ನಿಭಾಯಿಸಲು ಬೇರೊಬ್ಬ ತಯಾರಾಗಿರುತ್ತಾನೆ.

ಡಾ. ಶಶಿಕಿರಣ್ ಶೆಟ್ಟಿ

 
 
 
 
 
 
 
 
 

Leave a Reply