ಬೈಂದೂರು: ಹಿರಿಯನಾಗರಿಕರ ಸಭೆ

ಬೈಂದೂರು ಹಿರಿಯ ನಾಗರಿಕರ ವೇದಿಕೆಯ ಮಾಸಿಕ ಸಭೆಯು ಸ್ಥಳೀಯ ಶ್ರೀ ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ವೇದಿಕೆಯ ಅಧ್ಯಕ್ಷ ಕೆ.ಪುಂಡಲೀಕ ನಾಯಕ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸರ್ವರಿಗೂ ಸ್ವಾಗತಿಸಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಸೇನಾನಿ ಪ್ರಸ್ತುತ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಗಣಪತಿ ಎಂ ಏಳಜಿತ ಅವರು 1996 ರಲ್ಲಿ ಭಾರತೀಯ ಭೂಸೇನೆಗೆ ಸೇರ್ಪಡೆ ಗೊಂಡು 2013 ರಲ್ಲಿ ನಿವೃತ್ತಿ ಹೊಂದುವ ತನಕ ತಾವು ಯೋಧರಾಗಿ ವಿವಿಧ ಕಡೆಗಳಲ್ಲಿ ಸಲ್ಲಿಸಿದ ಸೇವೆ,ಕಾರ್ಗಿಲ್ ಕದನದಲ್ಲಿ ಪ್ರತ್ಯಕ್ಷವಾಗಿ ಭಾಗಿಯಾದ ಸಂದರ್ಭಗಳನ್ನು ನೆನಪಿಸಿಕೊಂಡು,ಯುದ್ಧಭೂಮಿಯಲ್ಲಿ ತಮ್ಮ ಅನುಭವಗಳು,ಗಡಿಯಲ್ಲಿ ನಿಯೋಜನೆಗೊಂಡ ಸೈನಿಕರ ಕುರಿತು ರೋಚಕ ಸಂಗತಿಗಳನ್ನು ತಿಳಿಸಿದರು.ಉತ್ತರಾಖಂಡ,ಸಿಕ್ಕಿಂ,ದೇಹಲಿ,ಲೇಹ ಲಡಾಖ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದು,ಸಿಯಾಚಿನ್ ಗ್ಲೇಸಿಯರ್ ನಂತಹ ದುರ್ಗಮ ಪ್ರದೇಶದಲ್ಲಿನ ತನ್ನ ಸೇನಾನುಭವಗಳನ್ನು ಸಭೆಗೆ ತಿಳಿಸಿದರು.

ಸಭೆಯ ಆರಂಭದಲ್ಲಿ ಸತೀಶ ಪೈ ಪ್ರಾರ್ಥಿಸಿದರು. ಕಾರ್ಯದರ್ಶಿ ಗೋವಿಂದ ಬಿಲ್ಲವರು ಸರ್ವರನ್ನೂ ಸ್ವಾಗತಿಸಿ, ಗತಸಭೆಯ ವರದಿ ವಾಚಿಸಿದರು.ಸಭಾಧ್ಯಕ್ಷ ಕೆ.ಪುಂಡಲೀಕ ನಾಯಕರು ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿ ಗಣಪತಿ ಎಂ ಏಳಜಿತ ಅವರನ್ನು ಸಭೆಗೆ ಪರಿಚಯಿಸಿ,ಶಾಲು ಸ್ಮರಣಿಕೆಯೊಂದಿಗೆ ಗೌರವಿಸಿದರು.

ನಿಕಟಪೂರ್ವ ಕಾರ್ಯದರ್ಶಿ ಸಂಜೀವ ಆಚಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೊನೆಯಲ್ಲಿ ಹಿರಿಯ ಸದಸ್ಯ ರಾಮ ಸೇರುಗಾರ್ ಅವರು ಧನ್ಯವಾದ ಸಮರ್ಪಣೆ ಮಾಡಿದರು.

 
 
 
 
 
 
 
 
 
 
 

Leave a Reply