ಉಡುಪಿ : ಟೂತ್‌ಪೇಸ್ಟ್‌ ಅಮುಕುವ ವಿಚಾರಕ್ಕಾಗಿ ಡೈವೋರ್ಸ್‌ಗಾಗಿ ಕೋರ್ಟ್‌ ಮೆಟ್ಟಿಲೇರಿದ ದಂಪತಿ!

ಗಂಡ ಹೆಂಡತಿಯರ ಮಧ್ಯೆ ಜಗಳಗಳು ಸಾಮಾನ್ಯ. ಆದರೆ ಈ ಜಗಳಗಳೆಲ್ಲ ಸಾಮಾನ್ಯ ಎಂದು ಹೇಳಿದರೂ ಕೆಲವೊಮ್ಮೆ ದಂಪತಿಗಳು ಬೇರೆಯಾಗುವುದನ್ನೂ ನಾವು ಕಂಡಿದ್ದೇವೆ. ಸಣ್ಣಪುಟ್ಟ ಜಗಳಗಳು ಕೊನೆಗೆ ಇಬ್ಬರನ್ನೂ ದೂರ ಮಾಡತ್ತದೆ. ಅಂತಹುದೇ ಒಂದು ಕುತೂಹಲಕಕಾರಿ ಘಟನೆಯೊಂದು ಉಡುಪಿ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದ್ದು ತಡವಾಗಿ ಬಂದಿದೆ.

ಈ ಗಲಾಟೆಗೆ ಮೂಲ ಕಾರಣ ಒಂದು ಹಲ್ಲುಜ್ಜುವ ಟೂತ್‌ಪೇಸ್ಟ್‌ ಎಂದರೆ ನಂಬುತ್ತೀರಾ? ಆದರೆ ಇದು ಸತ್ಯ. ಈ ಮನಸ್ತಾಪವೇ ಇದೀಗ ದಂಪತಿಗಳ ಮಧ್ಯೆ ಕಲಹ ಉಂಟಾಗಿ ಕೋರ್ಟ್‌ ಮೆಟ್ಟಿಲೇರಿದೆ. ಈ ಟೂತ್‌ಪೇಸ್ಟ್‌ ಅವರು ಜಗಳಕ್ಕೆ ಒಂದು ನೆಪ. ಇವರಿಬ್ಬರ ಮಧ್ಯೆ ಕಳೆದ ಹಲವು ಸಮಯಗಳಿಂದ ಸಣ್ಣಪುಟ್ಟ ವಿಷಯಕ್ಕೂ ಜಗಳವಾಗುತ್ತಿತ್ತು ಎನ್ನಲಾಗಿದೆ.

ಇದೀಗ ಇವರಿಬ್ಬರು ಈ ಕ್ಷುಲ್ಲಕ ಕಾರಣ ಹಿಡಿದುಕೊಂಡು, ಟೊಂಕ ಕಟ್ಟಿ ಜಗಳಕ್ಕೆ ಬಿದ್ದಿದ್ದಾರೆ. ಟೂತ್‌ಪೇಸ್ಟ್‌ ಬಳಸುವ ವಿಚಾರದಲ್ಲಿ ಇವರಿಬ್ಬರ ಮಧ್ಯೆ ಜಗಳ ಶುರುವಾಗಿದ್ದು, ಯಾವ ಕಾರಣಕ್ಕೂ ತಣ್ಣಗಾಗದೇ, ಡೈರೆಕ್ಟ್‌ ಕೋರ್ಟ್‌ಗೆ ಹೋಗಿದೆ. ಟೂತ್‌ಪೇಸ್ಟ್‌ ಅನ್ನ ಗಂಡ ತಳದಿಂದ ಒತ್ತಿದರೆ, ಹೆಂಡತಿ ಮೇಲಿನಿಂದ ಒತ್ತುತ್ತಿದ್ದಳು, ಮಕ್ಕಳಿಬ್ಬರು ಮಧ್ಯದಲ್ಲಿ ಒತ್ತುತ್ತಿದ್ದರು. ಇದು ಗಂಡನಿಗೆ ಇಷ್ಟವಿರಲಿಲ್ಲ. ಇದೇ ವಿಷಯ ಹಿಡಿದುಕೊಂಡು ಈತ ಕಿರಿಕಿರಿ ಮಾಡುತ್ತಿದ್ದ. ಪತಿಯ ಈ ಕಿರಿಕಿರಿಯನ್ನು ಸಹಿಸದ ಪತ್ನಿ ಜಗಳವಾಡಿದ್ದಾಳೆ. ಪ್ರತಿದಿನ ಜಗಳದಿಂದ ಬೇಸತ್ತ ಗಂಡ ಡೈವೋರ್ಸ್‌ಗೆ ಅರ್ಜಿ ಹಾಕಿದ್ದಾನೆ.

ನ್ಯಾಯಾಲಯದಲ್ಲಿ ಇವರಿಬ್ಬರ ಮಧ್ಯೆ ಆರೋಪಗಳ ಲಿಸ್ಟೇ ಬಂದಿದೆ. ಬೆಡ್‌ ಕಾಫಿಯಿಂದ ಹಿಡಿದು ತವರು ಮನೆಯವರ ಜೊತೆ ಮಾತಾಡುವವರೆಗೆ ಗಂಡ ದೂರು ನೀಡಿದ್ದಾನೆ.

ಇತ್ತ ಕಡೆ ಹೆಂಡತಿ ಕಡಿಮೆಯೇ, ತಾನೂ ಒಂದು ಕೈ ಮೇಲು ಎಂಬಂತೆ ಗಂಡನ ವಿರುದ್ಧ ಕೂಡಾ ಅನೇಕ ದೂರುಗಳನ್ನು ಹೇಳಿದ್ದಾಳೆ.

ಇತ್ತ ಪತಿ,ಪತ್ನಿಯ ಸಣ್ಣ ವಿಚಾರವನ್ನೇ ಜಗಳ ಮಾಡಿ ದೊಡ್ಡದು ಮಾಡಿ ವಿಚ್ಛೇದನ ಕೇಳುವ ಹಂತಕ್ಕೆ ಬಂದಿದ್ದನ್ನು ಅರಿತ ನ್ಯಾಯಾಧೀಶರು, ಮಕ್ಕಳಿಬ್ಬರ ಭವಿಷ್ಯದ ನೆಲೆಯಲ್ಲಿ ಸಂಸಾರ ಹಾಳು ಮಾಡದಂತೆ ಬುದ್ಧಿ ಹೇಳಿದ್ದಾರೆ. ಈ ಮಾತಿಗೆ ಇವರಿಬ್ಬರು ಒಪ್ಪಿದ್ದಾರೆ, ಇಷ್ಟಪಟ್ಟು ಒಪ್ಪಿದ್ದಾರೆ. ಆದರೆ ಪೇಸ್ಟ್‌ ವಿಚಾರಕ್ಕೆ ಇಬ್ಬರೂ ಇನ್ನೂ ರಾಜಿಯಾಗಿಲ್ಲ. ಕೊನೆಗೆ ಮಕ್ಕಳಿಂದ ಗಂಡ ಹೆಂಡತಿ ದೂರವಾಗದಂತೆ ತೀಕ್ಷ್ಣ ಬುದ್ಧಿವಾದಗಳನ್ನು ಹೇಳಿದ ಜಡ್ಜ್‌, ದುಂದು ಖರ್ಚಿನ ಬದಲು ನೀವು ಮನೆಗೆ ಎರಡು ಪೇಸ್ಟ್‌ ಒಯ್ಯಿರಿ ಎಂದು ಅಮೂಲ್ಯ ಸಲಹೆಯನ್ನು ನೀಡಿ ಕಳುಹಿಸಿದ್ದಾರೆ.

 
 
 
 
 
 
 
 
 
 
 

Leave a Reply