ಬಂಟಕಲ್ಲು : ಶ್ರೀದುರ್ಗಾ ಮಹಿಳಾ ಚಂಡೆಬಳಗದ ದಶಮಾನೋತ್ಸವ

ಶಿರ್ವ:- ಬಂಟಕಲ್ಲು ಶ್ರೀದುರ್ಗಾ ಮಹಿಳಾ ಚಂಡೆಬಳಗದ ದಶಮೋತ್ಸವ ವರುಷದ ಹೊಸ್ತಿಲಲ್ಲಿ ಪರಿಸರದ ನಿವೃತ್ತ ಹತ್ತು ಶಿಕ್ಷಕರನ್ನು ಗೌರವಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು.

ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಸಭಾಂಗಣದಲ್ಲಿ ಏರ್ಪಡಿಸಿದ ಸರಳ ಸಮಾರಂಭದಲ್ಲಿ ೮೬ರ ಹರೆಯದ ಕೋಡುಗುಡ್ಡೆ ನಾರಾಯಣ ಪ್ರಭು ಸೇರಿದಂತೆ ವರದರಾಯ ನಾಯಕ್ ಪುನಾರು, ಸೀತಾರಾಮ ಪ್ರಭು ಕೇಂಜ, ಲಕ್ಷ್ಮಣ ನಾಯಕ್ ಕೋಡು, ರಾಮಚಂದ್ರ ನಾಯಕ್ ಬೆಳಂಜಾಲೆ, ಗಿರಿಜಾ ನಾಯಕ್ ಬೆಳಂಜಾಲೆ, ವಸಂತಿ ನಾಯಕ್ ಕೇಂಜ, ಬಿ.ಪುಂಡಲೀಕ ಮರಾಠೆ ಬಂಟಕಲ್ಲು, ವಸಂತಿ ರಾಧಿಕಾ ಪ್ರಭು ಸಾಂತೂರು ಅಲುಂಬೆ, ಲಾವಣ್ಯಬಾಯಿ ಬಂಟಕಲ್ಲು ಇವರನ್ನು ಬಳಗದ ಅಧ್ಯಕ್ಷೆ ಗೀತಾ ವಾಗ್ಲೆ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕಾರ್ಕಳ ಎಸ್‌ವಿಟಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ರಾಮದಾಸ್ ವಿ.ಪ್ರಭು ಭಾಗವಹಿಸಿ ಶಿಕ್ಷಕರ ದಿನಾಚರಣೆಯ ಸಂದೇಶ ನೀಡಿದರು. ಬಂಟಕಲ್ಲು ಶ್ರೀದೇವಳದ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಪ್ರಭು ಗಂಪದಬೈಲು, ಶಿರ್ವ ಗ್ರಾ.ಪಂ.ಅಧ್ಯಕ್ಷ ಹಾಗೂ ಆರ್‌ಎಸ್‌ಬಿ ಯುವವೃಂದದ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್, ನಿವೃತ್ತ ಶಿಕ್ಷಕ ವರದರಾಯ ವಿ.ನಾಯಕ್ ಪುನಾರು ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಗೀತಾ ವಾಗ್ಲೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಭವಾನಿ ನಿರೂಪಿಸಿ,ಶೈಲಜಾ ಪಾಟ್ಕರ್ ವಂದಿಸಿದರು.ಬಳಗದ ಸದಸ್ಯರು ಸಹಕರಿಸಿದರು. ನಂತರ ಹಿರಿಯ ನಿವೃತ್ತ ಶಿಕ್ಷಕಿ ಲೀಲಾವತಿ ಎಲ್.ಪಾಟ್ಕರ್‌ರನ್ನು ಬಳಗದ ವತಿಯಿಂದ ಅವರ ಸ್ವಗೃಹದಲ್ಲಿ ಗೌರವಿಸಲಾಯಿತು.

 
 
 
 
 
 
 
 
 
 
 

Leave a Reply