ಅಶಕ್ತ ವಿಕಲಚೇತನ ಬಂಧುಗಳಿಗೆ ಅರೋಗ್ಯ ಕಾರ್ಡ್ ವಿತರಣೆ

ಕಾರ್ಕಳ : ಆದಿತ್ಯ ಟ್ರಸ್ಟ್ (ರಿ ). ನಕ್ರೆ, ಕಾರ್ಕಳ, ಲಯನ್ಸ್ ಕ್ಲಬ್ ನಕ್ರೆ, ಗ್ರಾಮ ಪಂಚಾಯತ್ ಕುಕ್ಕುಂದೂರು, ಇವರ ಜಂಟಿ ಆಶ್ರಯದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ ಬಹಾದ್ದೂರ್ ಶಾಸ್ತ್ರಿ ಜನ್ಮ ದಿನದಂದು ನಕ್ರೆ ಶ್ರೀ ಉಧ್ಭವ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಅಶಕ್ತ ವಿಕಲಚೇತನ ಬಂಧುಗಳಿಗೆ ಅರೋಗ್ಯ ಕಾರ್ಡ್ ವಿತರಿಸಿ, ಪರಿಸರವನ್ನು ಸ್ವಚ್ಛ ಗೊಳಿಸಲಾಯಿತು.

ಮುಖ್ಯ ಅತಿಥಿ ಶಿಕ್ಷಕ ಹರೀಶ್ ನಾಯ್ಕ್ ಮಾತನಾಡುತ್ತ, ಸಮಾಜ ಸೇವೆ ಎನ್ನುವುದು ಹರಿಯುವ ನೀರಿನಂತೆ ಆಗಬೇಕು. ಅಶಕ್ತ ವಿಕಲಚೇತರನ್ನು ಗುರುತಿಸಿ ಅವರಿರುವ ಸ್ಥಳಕ್ಕೆ ಹೋಗಿ ಅವರ ಅಗತ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸುವುದು ಉತ್ತಮವಾಗಿದೆ. ಟ್ರಸ್ಟ್ ಇನ್ನು ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಲಿ ಎಂದು ಹಾರೈಸಿದರು. 

ಮತ್ತೊರ್ವ ಅತಿಥಿ ನಿವೃತ್ತ ಶಿಕ್ಷಕಿ ರೀನಾ ಮಾತನಾಡುತ್ತ, ನಕ್ರೆ ಪರಿಸರದ ವಿಕಲ ಚೇತನ ಬಂಧುಗಳಿಗೆ ವೈದ್ಯಕೀಯ ಗುರುತಿನ ಚೀಟಿ ಯು. ಡಿ. ಐ. ಡಿ ಯನ್ನು ಮಾಡಿಸಿ ಕೊಡುವುದಾಗಿ ತಿಳಿಸಿದರು ಆದಿತ್ಯ ಟ್ರಸ್ಟಿನ ಅಧ್ಯಕ್ಷ ಮಂಜುನಾಥ ತೆಂಕಿಲ್ಲಾಯ ಮಾತನಾಡುತ್ತ, ಸ್ವಚ್ಛ ಮತ್ತು ಸುಂದರ ಪರಿಸರದಿಂದ ಉತ್ತಮ ಸಮಾಜ ನಿರ್ಮಾಣವಾಗುವುದು. 

ಸಮಾಜದ ಜನರು ಸ್ವಚ್ಛ ಪರಿಸರದ ನಿರ್ಮಾಣಕ್ಕೆ ಕೈ ಜೋಡಿಸಿದಾಗ ಪರಿಸರ ಮಾಲಿನ್ಯ ತಡೆಗಟ್ಟಲು ಸಾಧ್ಯವಾಗುವುದು. ರಾಷ್ಟ್ರ ಪಿತ ಮಹಾತ್ಮಾ ಗಾಂಧೀಜಿ ಅಶಕ್ತರಿಗಾಗಿ ಮಾಡಿರುವ ಸೇವೆ ಅನನ್ಯವಾದುದು ಎಂದರು. 

ಸುದರ್ಶನ್, ಉದ್ಯೋಗ ವಿನಿಮಯ ಕಛೇರಿ ಮಣಿಪಾಲ, ಅರುಣ್ ಶೆಟ್ಟಿ ಲಯನ್ಸ್ ಕ್ಲಬ್ ನಕ್ರೆ, ಶಶಿಕಲಾ ಗ್ರಾಮ ಪಂಚಾಯತ್ ಸದಸ್ಯೆ ನಕ್ರೆ ಸುಮನಾ ಆಶಾ ಕಾರ್ಯಕರ್ತೆ ನಕ್ರೆ ಉಪಸ್ಥಿತರಿದ್ದರು. ರಮೇಶ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply