ಮನೋನಿಯಾಮಕರಾದ ಶ್ರೀರುದ್ರದೇವರು~ ಕೆ.ವಿ.ಲಕ್ಷ್ಮಿನಾರಾಯಣಾಚಾರ್ಯ, ಆನೇಕಲ್.

ಇಂದು ಮಹಾಶಿವರಾತ್ರಿ. ಶ್ರೀರುದ್ರ ದೇವರು ಸ್ಫುರದ್ರೂಪಿಗಳು, ಪಾರ್ವತಿದೇವಿಯೊಡನೆ ಸದಾ ಸಂತೋಷದಿಂದಿರುವ ಮಹನೀಯರು. ಭಕ್ತರ ಅಭೀಷ್ಟಗಳನ್ನು ಕ್ಷಿಪ್ರವಾಗಿ ಈಡೇರಿಸುವವರು, ಇಂತಹ ಮನೋನಿಯಾಮಕರಾದ ಶ್ರೀರುದ್ರದೇವರನ್ನು ಶಿವರಾತ್ರಿಯಂದು ಭಕ್ತಿಯಿಂದ ಆರಾಧಿಸಿ, ಅವರ ಅನುಗ್ರಹ ಹೊಂದೋಣ.

ಶ್ರೀರುದ್ರದೇವರ ಧ್ಯಾನ: ಧ್ಯೇಯ ಪಂಚಮುಖೋ ರುದ್ರಃ ಸ್ಪಟಿಕಾಮಲಕಾಂತಿಮಾನ್ |
ವಿದ್ಯುಚ್ಛುಭ್ರಾಸಿತರಜಃ ಶ್ಯಾಮಾನಸ್ಯಮುಖಾನಿತುಃ ಜಟಾವ ಬದ್ಧೇಂದು ಕಲಾಃ ಪ್ರಿಯಾಯುಕ್ ನಾಗಭೂಷಣಃ||

ರುದ್ರದೇವರಿಗೆ ಮಿಂಚಿನ ಬಣ್ಣ, ಬಿಳಿ, ಕಪ್ಪು, ನೀಲಿ ಬಣ್ಣಗಳಿಂದ ಕೂಡಿದ ಐದು ಮುಖಗಳು. ಮೈಬಣ್ಣ ಸ್ಫಟಿಕದಂತೆ ಸ್ಪುಟವಾದ ಶುಭ್ರದೇಹ. ಜಟೆ ಚಂದ್ರನ ಕಲೆಯಿಂದ ಕೂಡಿದೆ. ಅತಿಪ್ರಿಯಳಾದ ಪಾರ್ವತೀದೇವಿಯೊಂದಿಗೆ ಇರುವ ಇವರ ಆಭರಣ ಸರ್ಪವಾಗಿದೆ. ಇಂತಹ ರುದ್ರದೇವರನ್ನು ಸದಾ ಧ್ಯಾನಿಸುತ್ತೇನೆ.

ವಾಮದೇವ ವಿರಿಂಚಿತನಯ ಉಮಾ ಮನೋಹರ ಉಗ್ರ ಧೂರ್ಜಟಿ |ಸಾಮಜಾಜಿನ ವಸನಭೂಷಣ ಸುಮನಸೋತ್ತಂಸ|

ಕಾಮಹರ ಕೈಲಾಸ ಮಂದಿರ | ಸೋಮಸೂರ್ಯನಲವಿಲೋಚನ |ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವಾ |
ನಂದಿವಾಹನ ನಳಿನಿಧರ ಮೌಳೀಂದುಶೇಖರ ಶಿವ ತ್ರಯಂಬಕ | ಅಂಧಕಾಸುರ ಮಥನಗಜ ಶಾರ್ದೂಲ ಚರ್ಮಧರ ||
ಮಂದಜಾಸನ ತನಯ ತ್ರಿಜಗದ್ವಂದ್ಯ ಶುದ್ಧ ಸ್ಫಟಿಕ ಸನ್ನಿಭ | ವಂದಿಸುವೆನನವರತ ಪಾಲಿಸು ಪಾರ್ವತೀ ರಮಣ ||

ಮನೋನಿಯಾಮಕ ಶ್ರೀರುದ್ರಾಂತರ್ಗತ ಭಾರತಿರಮಣ ಮುಖ್ಯಪ್ರಾಣಸ್ಥ ಶ್ರೀಸಂಕರ್ಷಣಮೂರ್ತಿ ಎಲ್ಲರನ್ನು ಹರಸಲಿ…ಹರ ನಮಃ ಪಾರ್ವತೀಪತಯೇ ಹರಹರ ಮಹಾದೇವ ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ

 
 
 
 
 
 
 
 
 
 
 

Leave a Reply