ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಉದ್ಘಾಟನಾ ಸಮಾರಂಭ

ಸರಕಾರದ ಸೇವೆಗಳನ್ನು ಗ್ರಾಮೀಣ ಮಟ್ಟದಲ್ಲಿ ಮನೆ ಬಾಗಿಲಿಗೆ ತಲುಪಿಸುವ ಮೂಲಕ ನೊಂದವರ ಪಾಲಿನ ಆಶಾ ಕಿರಣ ಸೌಮ್ಯ ಉದ್ಯಾವರ ಎಂದು ಉಡುಪಿ ತಹಸೀಲ್ದಾರ್ ಶ್ರೀ ಪ್ರದೀಪ್ ಕುರ್ಡೆಕರ್ ಹೇಳಿದರು. ಉದ್ಯಾವರ ಪಂಚಾಯತ್ ಕಟ್ಟಡದಲ್ಲಿ ರಾಜ್ಯ ಸರಕಾರದ ಗ್ರಾಮ ಒನ್ ಯೋಜನೆಯಡಿ ನೂತನವಾಗಿ ಪ್ರಾರಂಭಗೊಂಡ ಕೇಂದ್ರ ವನ್ನು ಉದ್ಘಾಟಿಸಿ ಅವರು ಶುಭಕೋರಿದರು.

ಉದ್ಯಾವರದಲ್ಲಿ csc ಮೂಲಕ ಅನಾರೋಗ್ಯ ಪೀಡಿತರ ಮನೆ ಬಾಗಿಲಿಗೆ ತೆರಳಿ ಹಲವಾರು ಸರಕಾರಿ ಸೌಲಭ್ಯ ಗಳನ್ನು ಫಲಾನುಭವಿಗಳಿಗೆ ದೊರಕಿಸಿ ಕೊಡುವ ಮೂಲಕ ಮಾನವೀಯ ಸೇವೆ ಸಲ್ಲಿಸುತ್ತಿರುವ ಸೌಮ್ಯ ಉದ್ಯಾವರ ಇವರು ಇದೀಗ ಗ್ರಾಮ ಒನ್ ಕೇಂದ್ರ ಸ್ಥಾಪಿಸುವ ಮೂಲಕ ರಾಜ್ಯ ಸರಕಾರದ ಹಲವಾರು ಯೋಜನೆಗಳು ಒಂದೇ ಸೂರಿನಡಿಯಲ್ಲಿ ಜನಸಾಮಾನ್ಯರಿಗೆ ಸಿಗಲಿದೆ.

ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸನ್ಮಾನ್ಯ ರಾಧಾಕೃಷ್ಣ. ಉಪಾಧ್ಯಕ್ಷರಾದ ಶ್ರೀಮತಿ ಮಧುಲತಾ ಶಶಿಧರ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ H. R. ಗ್ರಾಮಲೆಕ್ಕಾಧಿಕಾರಿ ಸುರೇಶ್. ಪಿ .C. Aಮಲ್ಲೇಶ್ ಪಿತ್ರೋಡಿ. ಡಿಸ್ಟಿಕ್ ಪ್ರಾಜೆಕ್ಟ್ ಅಧಿಕಾರಿ ನವೀಶ V.A. ಹಾಗೂ ಉದ್ಯಾವರ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು.

Sunshine ಲಯನ್ಸ್ ಉದ್ಯಾವರದ ಸದಸ್ಯರು ಹಾಗೂ ಗ್ರಾಮದ ಜನರು ಸೇರಿದರು. ಆಗಮಿಸಿದ ಎಲ್ಲರನ್ನು ಸಂಸ್ಥೆಯ ಸಂಚಾಲಕಿ ಶ್ರೀಮತಿ ಸೌಮ್ಯ ಉದ್ಯಾವರ ರವರು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆ ಹರಿ ಉದ್ಯಾವರ ನೆರವೇರಿಸಿದರು.

 
 
 
 
 
 
 
 
 
 
 

Leave a Reply