ನಾನಿರುವಾಗ ಸಾವು ಬರೊಲ್ಲ, ಹಾಗೇ ಸಾವು ಬಂದಾಗ ನಾನಿರೋಲ್ಲ~ ಡಾ. ಶಶಿಕಿರಣ್ ಶೆಟ್ಟಿ

ಅವರಿಗೆ  76 ವರ್ಷ, ವೈದ್ಯರು ವೃದ್ಧಶ್ರಮಕ್ಕೆ ಭೇಟಿ ನೀಡಿದಾಕ್ಷಣ ಪ್ರತಿ ಬಾರಿಯು ಬಂದು ತನ್ನ ಕಂಪ್ಲೇಂಟ್ ಹೇಳುತ್ತಿದ್ದರು. ಕಳೆದ 3,4 ವಿಸಿಟ್ ಅಲ್ಲoತು ಅವರದು ಅದೇ ಕಂಪ್ಲೇಂಟ್ ಆಗಿತ್ತು, ಸರ್ ನಾನು ಭೂತಕನ್ನಡಿಯಲ್ಲಿ ನನ್ನ ಚರ್ಮ ನೋಡಿದಾಗ ದೊಡ್ಡ ದೊಡ್ಡ ಬಿಳಿ, ಕಪ್ಪು ಬಣ್ಣದ,  ಪ್ಯಾಚ್ ಗಳು ಕಾಣಿಸುತ್ತಿದೆ. ಎಂಬುದು ಅವರ ಸಮಸ್ಯೆಯಾಗಿತ್ತು.
ಇದು ಬರಿಯ ಕಣ್ಣಿಗೆ ಕಾಣದಷ್ಟು ಚಿಕ್ಕದಿದ್ದರೂ ಇವರ ಭೂತ ಕನ್ನಡಿ ಅದನ್ನು ದೊಡ್ಡದಾಗಿಸಿ ಅವರ ತಲೆಯಲ್ಲಿ ಭೂತದಾಕಾರದಷ್ಟು ಬೆಳೆಸಿದ್ದನ್ನು ಗಮನಿಸಿದ್ದರು ವೈದ್ಯರು, ಇದು ವಯೋಸಹಜ ಚರ್ಮದ ಮೆಲಾನಿನ್ ಡಿ ಪಿಗ್ಮಿoಟೇಷನ್ ಎಂದು ಎಷ್ಟು ಹೇಳಿದರೂ, ಅವರ ತಲೆಯೋಳಗಿದ್ದ ಭೂತ ಹೊರ ಹೋಗದಾಗ. ಅವರಿಗೆ ಮರೆವಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿತ್ತು ವೈದ್ಯರಿಗೆ .
ತಕ್ಷಣ ಅವರ ಕೋಣೆಗೆ ಊಟ ಇಟ್ಟು ಬರುವವನ ಕಿವಿಯಲ್ಲಿ ಆ ಚರ್ಮದ ಬಣ್ಣ ಬದಲಾಗಿಸುವ ಮದ್ದೋoದನ್ನು ಗುಟ್ಟಾಗಿ ತಿಳಿಸಿದ್ದರು ವೈದ್ಯರು. ಮತ್ತೆ ಆಶ್ಚರ್ಯವೆಂಬತೆ ಮುಂದಿನ ದಿನದಿಂದ ಆ ಸಮಸ್ಯೆ  ಮಾಯವಾಗಿತ್ತು. ಆ ಊಟ ಕೊಡುವವ ಮಾಡಿದ್ದಿಷ್ಠೆ, ಅವರ ಕಣ್ಣೆದುರು ಇದ್ದ ಭೂತಕನ್ನಡಿ ಯನ್ನು ಅಲ್ಲಿಂದ ತಪ್ಪಿಸಿಟ್ಟಿದ್ದ. ಆಮೇಲೆ ಇವರಿಗೆ ಕಣ್ಣೆದುರು ಭೂತ ಕನ್ನಡಿ ಇಲ್ಲದಾಗ ಎಲ್ಲಾ ನೆನಪೊಗಿತ್ತು ಅಷ್ಟೇ ..

ಮೇಲ್ನೋಟಕ್ಕೆ ಒಂದು ತಮಾಷೆಯ ತರಹ ಕಂಡರೂ ಇಲ್ಲಿ ಅದ್ಭುತ ಸಂದೇಶವೊಂದಿದೆ. ಗಮನವಿಟ್ಟು ಕೇಳಿ. ಪ್ರಾಯ ಕಳೆದಂತೆ ನಮ್ಮ ದೇಹ ಬದಲಾಗುತ್ತಿರುತ್ತದೆ. ಉದಾಹರಣೆಗೆ 40/45 ದಾಟಿದಾಗ ಬಿಳಿ ಕೂದಲು, ಬಿಳಿ ಗಡ್ಡ, ಹೆಂಗಸರಲ್ಲಿ ಹಾರ್ಮೋನಲ್ ಚೇಂಜಸ್ ನಿಂದ ಕೆಲವು ಸಮಸ್ಯೆಗಳು ಹಾಗೆ ಮುಪ್ಪು ಆವರಿಸುವಾಗ ಬರುವ ಮರೆವು, ದೃಷ್ಟಿ ಮಾಂದ್ಯ, ಕಿವುಡು, ಚರ್ಮ ದ ಬದಲಾವಣೆ, ದೇಹದ ಬದಲಾವಣೆ ಇದೆಲ್ಲ ವಯೋ ಸಹಜ ಬದಲಾವಣೆ ಇದು ಪ್ರಕೃತಿದತ್ತ ಎಲ್ಲರಲ್ಲೂ ಇರುವಂತದ್ದು.

 ಅದಕ್ಕೆಲ್ಲ ಹೆದರಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಗೆ ಹೋಗಿ ಲಕ್ಷಗಟ್ಟಲೆ ಸುರಿಯುವುದು, ಅದ್ಯಾವುದೋ ಜಾಹೀರಾತು ನೋಡಿ, ಹೆಲ್ತ್ ಡ್ರಿಂಕ್ಸ್ ಎಂದು ಅಶ್ವಗoದ, ತುಳಸಿ, ಬ್ರಾಹ್ಮೀ ಇದೆ ವೃದ್ಧರ ಶರೀರಿಕ, ಮಾನಸಿಕ ವಿಕಸನಮಾಡುತ್ತೆ, ಮೂಳೆ ಗಳ ಬೆಳವಣಿಗೆ ಮಾಡುತ್ತೆ,ಅದು ಮಾಡುತ್ತೆ,ಮಣ್ಣoಗಟ್ಟಿ ಮಾಡುತ್ತೆ ಎಂದು ಕ್ರಿಕೆಟ್ ಸ್ಟಾರೋ, ಫಿಲಂ ಸ್ಟಾರೋ ಹೇಳಿದ ನೆಂದು 40 ರೂ ಯ ಪೌಡರ್ ಗೆ 800/900 ರೂ ಕೊಟ್ಟು ತೆಗೆದು ಕೊಳ್ಳುವ ಮೊದಲು ಒಮ್ಮೆ ಯೋಚಿಸೋಣ.
ನಾವೇ ಬದಲಾಗೋಣ. ಸುಮ್ಮ ಸುಮ್ಮನೆ ನಾವು ಕಷ್ಟಪಟ್ಟು ದುಡಿದ ಹಣವನ್ನು ಯಾರ್ಯಾರ ಮೇಲೆ ಸುರಿವ ಮೊದಲು 10 ಬಾರಿ ಯೋಚಿಸಿ. ಸಾವಿಲ್ಲದ ಮನುಷ್ಯ ನೀವಲ್ಲ ಎಂದಾದಮೇಲೆ. ಸಾವಿನ ಚಿಂತೆ ಬಿಟ್ಟಾಕಿ…ಯಾಕೆಂದರೆ… ನಾನಿರುವಾಗ ಸಾವು ಬರೋಲ್ಲ ಹಾಗೇ ಸಾವು ಬಂದಾಗ… ನಾನಿರೋಲ್ಲ. ಅಲ್ಲವೇ?
 
 
 
 
 
 
 
 
 
 
 

Leave a Reply