ತಾಯಿ -ಭೂಮಿತಾಯಿ ~ರಮ್ಯಾರಾಕೇಶ್

ಏನನ್ನು ಅರಿಯದೆ..
ಯಾವುದರ ಪರಿವೇ ಇಲ್ಲದೆ ತಾಯಿ ಗರ್ಭದಿಂದ ಬರುವ ನಾವುಗಳು..
ಎಲ್ಲವನ್ನು ಅರಿತು..
ಜೀವನದ ಪ್ರತಿಯೊಂದು ಅನುಭವವ ಪಡೆದು ಮೌನದಿ ಹೋಗುವೆವು ಭೂಮಿತಾಯಿ ಗರ್ಭದೊಳು..
ಉಸಿರಿರುವಾಗ ತಾಯಿ ಮಡಿಲೇ ನಮ್ಮೆಲ್ಲ ನೋವುಗಳಿಗೆ ಸಾಂತ್ವನ..
ಅದೇ ಉಸಿರು ನಿಂತಾಗ ಭೂಮಿ ತಾಯಿ ಮಡಿಲೇ ನಮ್ಮೆಲ್ಲರಿಗೂ ನೆಮ್ಮದಿಯ ತಾಣ..
ತಾಯಿಗೊಂದು ನಮನ..
ಭೂಮಿತಾಯಿಗೊಂದು ಪ್ರಣಾಮ..
                               
 
 
 
 
 
 
 
 
 
 
 

Leave a Reply