ಬ್ಯೂಟಿ ಆಫ್ ಮದರ್ ನೇಚರ್’ ಫೋಟೊ​ ಹಾಗು ವಿಡಿಯೋ ​ಶೂಟ್ ​​ಸಾಮಾಜಿಕ ಜಾಲ ತಾಣದಲ್ಲಿ ವೈರಲ್ 

ಈ ಹಿಂದೆ ರಿಯಲಿಸ್ಟಿಕ್ ಲಯನ್ ಫೇಸ್ ಪೈಂಟಿಂಗ್ ಫೋಟೊಶೂಟ್ ಮಾಡಿ ಗಮನಸೆಳೆದಿದ್ದ ಮಂಗಳೂರಿನ ಕಲಾವಿದೆ ಚೇತನಾ. ಎಸ್​, ದೀಪಾವಳಿಗೆ ಮತ್ತೊಂದು ​ವಿಶೇಷ ಪರಿಕಲ್ಪನೆಯೊಂದಿಗೆ ಪೋಟೋ​ ಹಾಗು ವಿಡಿಯೋ ​ಶೂಟ್​ ಮಾಡಿಸಿ​ಕೊಂಡಿದ್ದಾರೆ 

ದೀಪಾವಳಿ ಹಬ್ಬದಲ್ಲಿ ಭೂಮಿ ತಾಯಿಗೂ ​ಬಹಳ ಮಹತ್ವವಿದೆ. ಬಲೀಂದ್ರ ಪೂಜೆಯ ದಿನ ನಿತ್ಯ ನಮಗೆ ಅನ್ನ ನಿಡುವ ಭೂದೇವಿಗೆ ಪೂಜೆ ನಡೆಯುತ್ತದೆ. ಇದೇ ಪರಿಕಲ್ಪನೆ ಇರಿಸಿ ನಗರದ ಚೇತನಾ ಬ್ಯೂಟಿ ಲಾಂಜ್​ನಿಂದ ‘ಬ್ಯೂಟಿ ಆಫ್ ಮದರ್ ನೇಚರ್’ ಎಂಬ ಫೋಟೊಶೂಟ್ ಮಾಡಲಾಗಿದೆ.’ಬ್ಯೂಟಿ ಆಫ್ ಮದರ್ ನೇಚರ್’ ಪರಿಕಲ್ಪನೆ​ ​ಫೋಟೊ​ ​ಶೂಟ್​ನಲ್ಲಿ ಭೂದೇವಿಯ ಆರಾಧನೆಗೆ ಪ್ರಾಶಸ್ತ್ಯ ನೀಡಲಾಗಿದ್ದು, ದಶಭುಜೆಯಾಗಿ ಭೂದೇವಿಯನ್ನು ಚಿತ್ರಿಸಲಾಗಿದೆ.

 
ಪ್ರಕೃತಿಯ ಸೊಗಸಿನಂತೆ ಹಸುರುಡುಗೆಯನ್ನು ​ತೊಟ್ಟಿರುವ  ರೂಪದರ್ಶಿಯರ ಹತ್ತು ಕೈಗಳಲ್ಲಿಯೂ ಬಳ್ಳಿ, ಎಲೆಗಳನ್ನು ಚಿತ್ರಿಸಲಾಗಿದೆ. ಭೂದೇವಿಯನ್ನು ಸಂಕೇತಿಸುವ ರೂಪದರ್ಶಿಯ ತಲೆಯ ಮೇಲೆ ಹೂಗುಚ್ಚವನ್ನಿರಿಸಿ ಅದರ ಮೇಲೆ ಗ್ಲೋಬ್, ದೀಪ ಇರಿಸಲಾಗಿದೆ. ಕೈಗಳಲ್ಲಿ ಸಂಪತ್ತನ್ನು ಪ್ರತಿನಿಧಿಸುವ ಬಂಗಾರದ ಕುಂಭಾರತಿಯನ್ನು ಇರಿಸಲಾಗಿದೆ. ಉಳಿದಿಬ್ಬರು ರೂಪದರ್ಶಿಗಳು ಭತ್ತದ ಪೈರನ್ನಿರಿಸಿ, ದೀಪ ಬೆಳಗಿಸಿ ಭೂಮಿದೇವಿಗೆ ಕುಂಭಾರತಿ ಬೆಳಗಿ ನಿತ್ಯವೂ ಅನ್ನವನ್ನೀಯುವುದಕ್ಕಾಗಿ ಕೃತಜ್ಞತಾ ಪೂರ್ವಕವಾಗಿ ನಮಿಸುವಂತೆ ಚಿತ್ರಿಸಲಾಗಿದೆ.
 
ಚೇತನಾ ಬ್ಯೂಟಿ ಲಾಂಜ್​ನ ಮುಖ್ಯಸ್ಥೆ ಸೌಂದರ್ಯ ಕಲಾವಿದೆ ಚೇತನಾ.ಎಸ್ ಅವರ ಪರಿಕಲ್ಪನೆಯಲ್ಲಿ ಈ ಫೋಟೊಶೂಟ್ ನಡೆದಿದೆ. ಕತ್ತಲೆಯಿಂದ ಬೆಳಕಿನೆಡೆಗೆ ಬನ್ನಿ ಎಂಬ ಕಲ್ಪನೆಯಲ್ಲಿ ನಮಗೆ ನಿತ್ಯವೂ ಅನ್ನವನ್ನು ನೀಡುವ ಭೂಮಿ ತಾಯಿ, ಪ್ರಕೃತಿ ಮಾತೆಗೆ ಋಣಿಯಾಗಿರೋಣ ಎಂಬ ಮಹತ್ತರವಾದ ಅರ್ಥ ಬರುವಂತೆ ಫೋಟೊ​ ​ಶೂಟ್ ಮಾಡಲಾಗಿದೆ.​ ​ಸುಮಾರು ಐದಾರು ಗಂಟೆಗಳ ಪ್ರಯತ್ನದಲ್ಲಿ ಈ ರೂಪದರ್ಶಿಯರನ್ನು ಚೇತನಾ ಅವರು ಮೇಕಪ್ ಮಾಡಿ ತಯಾರು ಮಾಡಿದ್ದಾರೆ. 
 
‘ಬ್ಯೂಟಿ ಆಫ್ ಮದರ್ ನೇಚರ್’ನ ಫೋಟೊ​ ​ಶೂಟ್​ ಖ್ಯಾತ ​ಛಾಯಾ​ಗ್ರಾಹಕ ಪುನೀ​ಕ್ ಮಾಡಿದ್ದಾರೆ. ವಿಡಿಯೋ ಗ್ರಫಿಯನ್ನು ಸುಪ್ರಸಿದ್ದ ವಿಡಿಯೋಗ್ರಾಹಕ ಬಂಟ್ವಾಳದ ಶ್ರೀಪ್ರಸಾದ್ ನಡೆಸಿದ್ದಾರೆ. ​ಅತ್ಯಂತ ಮನೋಜ್ಞ ವಾಗಿ ವಿಡಿಯೋ ಬಂದಿದೆ. ವಿಡಿಯೋಗ್ರಾಫರ್ನ ಕೈಚಳಕ, ಸಮಯಪ್ರಜ್ಞೆ ಇಲ್ಲಿ ಎದ್ದು ಕಾಣುತ್ತದೆ. ಇದಕ್ಕೆ ಪುಣಿಕ್ ಛಾಯಾಗ್ರಹಣದಲ್ಲಿ ಸಾಥ್ ಕೊಟ್ಟಿದ್ದಾರೆ. 
 
ಏಳು ಮಂದಿ ರೂಪದರ್ಶಿಯರು ಈ ಫೋಟೊಶೂಟ್​ನಲ್ಲಿ‌ ಭಾಗವಹಿಸಿದ್ದಾರೆ‌.​ ​ಮಂಗಳೂರಿನ ಪ್ರಸಿದ್ಧ ಸೌಂದರ್ಯ ಕಲಾವಿದೆಯಾಗಿರುವ ಚೇತನಾ ಎಸ್. ಈ ಬಗ್ಗೆ ಮಾತನಾಡಿ, ನರಕಾಸುರನ ತಾಯಿ ಭೂದೇವಿ, ಈ ಭೂದೇವಿಯ ಮುಂದಿನ ಅವತಾರ ಸತ್ಯಭಾಮೆ. ಆಕೆಯಿಂದಲೇ ಲೋಕ ಕಂಟಕನಾದ ನರಕಾಸುರನ ವಧೆಯಾಗುತ್ತದೆ.
ಇದೇ ಪರಿಕಲ್ಪನೆಯಲ್ಲಿ ನಾನು ಭೂದೇವಿಯ ಚಿತ್ರಣ ಮಾಡಿ ‘ಬ್ಯೂಟಿ ಆಫ್ ಮದರ್ ನೇಚರ್’ ಎಂಬ ಫೋಟೊಶೂಟ್ ಮಾಡಿದ್ದೇನೆ. ಈಗಾಗಲೇ ಈ ಫೋಟೋವನ್ನು ಇನ್​ಸ್ಟ್ರಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತ ವಾಗಿದೆ. ಉತ್ತಮ ಕಮೆಂಟ್​ಗಳೂ ಬಂದಿವೆ ಎಂದು ಹೇಳಿದ್ದಾರೆ​​. 
 
ಕಲಾವಿದರೊಂದಿಗೆ ಛಾಯಾಗ್ರಾಹಕ ಹಾಗು ವಿಡಿಯೋಗ್ರಾಫರ್ ಜುಗಲ್ ಬಂದಿ ಉತ್ತಮವಾಗಿದೆ. ಹೊಸ ಪ್ರಯೋಗ ಸೃಷ್ಟಿಯಲ್ಲಿ ಇವರೆಲ್ಲರ ತಂಡ ಸಾಧನೆ ಅ​​ತ್ಯುತ್ತಮವಾಗಿದೆ.​ ​
 
 
 
 
 
 
 
 
 
 
 

Leave a Reply